For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಮಗಳು ಆರಾಧ್ಯ ಆನ್ಲೈನ್ ತರಗತಿ ವಿಡಿಯೋ ವೈರಲ್

  |

  ಅಮಿತಾಭ್ ಬಚ್ಚನ್ ಕುಟುಂಬ ಸದಸ್ಯರಿಗೆ ಕೊರೊನಾ ವೈರಸ್ ತಗುಲಿತ್ತು. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಆರಾಧ್ಯ ಬಚ್ಚನ್‌ಗೆ ಸೋಂಕು ತಗುಲಿತ್ತು. ಇದೀಗ, ಎಲ್ಲರೂ ಸೋಂಕಿನಿಂದ ಚೇತರಿಕೆ ಕಂಡಿದ್ದು, ಮನೆಗೆ ತೆರಳಿದ್ದಾರೆ.

  Unseen “Nightout” Behind the scene video | Filmibeat Kannada

  ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಎಲ್ಲ ಶಾಲೆಗಳು ಮುಚ್ಚಿದ್ದವು. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ಮೇಲೆ ಅನೇಕ ಶಾಲೆಗಳು ಆನ್‌ಲೈನ್ ಕ್ಲಾಸ್‌ಗಳನ್ನು ಪ್ರಾರಂಭಿಸಿದೆ. ಐಶ್ ಪುತ್ರಿ ಆರಾಧ್ಯ ಸಹ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಂಡಿದ್ದು, ವಿಡಿಯೋವೊಂದು ವೈರಲ್ ಆಗಿದೆ.

  ಕೊರೊನಾದಿಂದ ಗುಣಮುಖರಾದ ಬಳಿಕ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಐಶ್ವರ್ಯ ರೈಕೊರೊನಾದಿಂದ ಗುಣಮುಖರಾದ ಬಳಿಕ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಐಶ್ವರ್ಯ ರೈ

  ಹಿಂದಿ ತರಗತಿಯಲ್ಲಿ ಆರಾಧ್ಯ ಭಾಗಿಯಾಗಿದ್ದು, ಟೀಚರ್ ಗೆ ಧನ್ಯವಾದ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಶಾಲೆಯ ಸಮವಸ್ತ್ರ ಧರಿಸಿರುವ ಆರಾಧ್ಯ ಹಿಂದಿ ಪದ್ಯವನ್ನು ಓದುತ್ತಿರುವುದು ಮತ್ತು ಓದಿದ ಬಳಿಕ ಶಿಕ್ಷಕಿಗೆ ಧನ್ಯವಾದ ಹೇಳುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋ ಈಗ ಟ್ವಿಟ್ಟರ್, ಇನ್ಸ್ಟಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಟ್ರೆಂಡ್ ಆಗಿದೆ.

  ಇನ್ನು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಐಶ್ವರ್ಯ ರೈ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. ''ನನ್ನ ಪ್ರೀತಿಯ ದೇವತಿ (ಆರಾಧ್ಯ), ಪಾ (ಅಮಿತಾಬ್ ಬಚ್ಚನ್), ಎಬಿ (ಅಭಿಷೇಕ್ ಬಚ್ಚನ್) ಮತ್ತು ನನಗಾಗಿ ನೀವು ತೋರಿದ ಪ್ರೀತಿ, ಕಾಳಜಿ, ಶುಭಾಶಯಗಳಿಗೆ ಧನ್ಯವಾದಗಳು" ಎಂದಿದ್ದರು.

  English summary
  Abhishek Bachchan and Aishwarya Rai Bachchan’s daughter Aaradhya was attend online class after battling coronavirus. video viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X