ಐಶ್ವರ್ಯಾ ರೈ ಮನೆಯಲ್ಲಿ ಅವರೊಬ್ಬರೇ ಸುಂದರಿ ಅಲ್ಲ: ಅತ್ತಿಗೆನೂ ಅತಿಲೋಕ ಸುಂದರಿನೇ!

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಯಾರಿಗೆ ಗೊತ್ತಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಈ ಬ್ಯೂಟಿಗೆ ಅಭಿಮಾನಿಗಳಿದ್ದಾರೆ. ವಿಶ್ವ ಸುಂದರಿ ಪಟ್ಟ ಗೆದ್ದು ಭಾರತದ ಘನತೆ ಹೆಚ್ಚಿಸಿದ ಈ ಸುಂದರಿ ಸೌಂದರ್ಯಕ್ಕೆ ಮಾರು ಹೋದವರು ಅದೆಷ್ಟೋ ಮಂದಿ.

ಇನ್ನೇನು 50ನೇ ವರ್ಷದ ಸನಿಹದಲ್ಲಿ ಇದ್ದರೂ, ಐಶ್ವರ್ಯಾ ಸೌಂದರ್ಯಕ್ಕೆ ಸರಿಸಾಟಿ ಯಾರು ಹೇಳಿ. ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ. ಹಾಗಂತ ಇವರ ಮನೆಯಲ್ಲಿ ಇವರೊಬ್ಬರೇ ಸುಂದರಿ ಅಂದುಕೊಳ್ಳಬೇಡಿ. ಐಶ್ ಅತ್ತಿಗೆಯನೂ ಅತಿಲೋಕ ಸುಂದರಿನೇ.

ಐಶ್ವರ್ಯಾ ರೈ ಸಹೋದರ ಅದಿತ್ಯ ರೈ ಅವರನ್ನು ವಿವಾಹವಾದ ಶ್ರಿಮಾ ರೈ ಕೂಡ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಹಾಗಿದ್ದರೆ, ಐಶ್ವರ್ಯಾ ರೈ ಅತ್ತಿಗೆ ಹಿನ್ನೆಲೆ ಏನು? ಯಾವ ಸ್ವರ್ಧೆ ಗೆದ್ದಿದ್ದಾರೆ? ಈಗ ಏನು ಮಾಡುತ್ತಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಐಶ್ವರ್ಯಾ ರೈ ಅತ್ತಿಗೆ ಹಿನ್ನೆಲೆಯೇನು?

ಐಶ್ವರ್ಯಾ ರೈ ಅತ್ತಿಗೆ ಹಿನ್ನೆಲೆಯೇನು?

ಐಶ್ವರ್ಯಾ ರೈ ಅತ್ತಿಗೆ ಶ್ರಿಮಾ ರೈ ಕೂಡ ಮಾಡಲ್ ಆಗಿ ಗುರುತಿಸಿಕೊಂಡಿದ್ದವರು. ಮೂಲ ಮಂಗಳೂರು ಆಗಿದ್ದರೂ, ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಬೆಳೆದಿದ್ದಾರೆ. ಶ್ರಿಮಾ ರೈ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಅವರ ಸಹೋದರ ಆದಿತ್ಯ ರೈರನ್ನು ವಿವಾಹವಾದ ಬಳಿಕ ಮುಂಬೈಗೆ ಬಂದು ನೆಲೆಸಿದ್ದಾರೆ. ಶ್ರಿಮಾ ರೈ ಕೂಡ 2009ರಲ್ಲಿ ನಡೆದಿದ್ದ ಮಿಸ್ಸಸ್ ಇಂಡಿಯಾ ಗ್ಲೋಬಲ್ ಸ್ಪರ್ಧೆಯಲ್ಲಿ ಮೊದಲ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು.

ಐಶ್ವರ್ಯಾ ರೈ ಜೊತೆ ಸಂಬಂಧ ಹೇಗಿದೆ?

ಐಶ್ವರ್ಯಾ ರೈ ಜೊತೆ ಸಂಬಂಧ ಹೇಗಿದೆ?

ಐಶ್ವರ್ಯಾ ರೈ ಬಚ್ಚನ್ ಮಾಜಿ ವಿಶ್ವ ಸುಂದರಿ ಅಷ್ಟೇ ಅಲ್ಲ. ಬಾಲಿವುಡ್‌ ಸೂಪರ್‌ಸ್ಟಾರ್ ಕೂಡ ಹೌದು. ಇತ್ತ ಶ್ರಿಮಾ ರೈ ಕೂಡ ಮಾಡೆಲ್. ಅಲ್ಲದೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಗೆದ್ದಿದ್ದಾರೆ. ತನ್ನದೇ ದಾರಿಯಲ್ಲಿ ಸಾಗುತ್ತಿರುವ ಶಿಮಾ ಈ ಹಿಂದೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಐಶ್ವರ್ಯಾ ಬಗ್ಗೆ ಮಾತಾಡಿದ್ದರು. " ನಾನು ಐಶ್ವರ್ಯಾರನ್ನು ಸೂಪರ್‌ಸ್ಟಾರ್ ಅಂತ ನೋಡುವುದಿಲ್ಲ. ಅವರು ಮೊದಲು ನನಗೆ ಅತ್ತಿಗೆ. ಆದರೆ, ನಮಗೆ ಯಾವಾಗಲೂ ಐಶ್ ಹಾಗೂ ಅಭಿಷೇಕ್ ಅವರನ್ನು ನೋಡಲು ಆಗುವುದಿಲ್ಲ. ಅವರು ಬಂದಾಗ, ನಾನು ಕೆಲಸದಲ್ಲಿ ಬ್ಯುಸಿಯಾಗಿರುತ್ತೇನೆ" ಎಂದಿದ್ದರು.

ಆದಿತ್ಯ ರೈ–ಶಿಮಾ ಲವ್‌ ಸ್ಟೋರಿ

ಆದಿತ್ಯ ರೈ–ಶಿಮಾ ಲವ್‌ ಸ್ಟೋರಿ

ಐಶ್ವರ್ಯಾ ರೈ ಸಹೋದರ ಆದಿತ್ಯ ಹಾಗೂ ಶಿಮಾ ಇಬ್ಬರು ಒಂದು ಡಿನ್ನರ್ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಅಲ್ಲಿ ಇಬ್ಬರ ಪರಿಚಯವಾಗಿತ್ತು. ಆ ಬಳಿಕ ನಿಶ್ಚಿರ್ಥ ನೆರವೇರಿತ್ತು. ಅಲ್ಲಿಂದ ಸುಮಾರು ಒಂದು ವರ್ಷಗಳ ಕಾಲ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರು. ಆನಂತವೇ ಮದುವೆಯಾಗಲು ತೀರ್ಮಾನಿಸಿದ್ದರು. ಈ ಒಂದು ವರ್ಷದಲ್ಲಿ ಇಬ್ಬರ ಸಂಬಂಧ ಗಾಡವಾಗಿ ಬೆಳೆದಿತ್ತು. 15 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ ಮುಂಬೈನಲ್ಲಿ ನೆಲೆಸಿದೆ.

ಈಗ ಶಿಮಾ ರೈ ಮಾಡುತ್ತಿರೋದೇನು?

ಈಗ ಶಿಮಾ ರೈ ಮಾಡುತ್ತಿರೋದೇನು?

ಶಿಮಾ ರೈ ತುಂಬಾನೇ ಕ್ರಿಯೇಟಿವ್. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ. ಸದ್ಯ ಡಿಜಿಟಲ್ ಇನ್‌ಫ್ಲ್ಯೂಯೆನ್ಸರ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಫ್ಯಾಷನ್ ಬ್ರ್ಯಾಂಡ್, ಲೈಫ್‌ಸ್ಟೈಲ್ ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುತ್ತಾರೆ. ಸದ್ಯ ಶಿಮಾ ರೈ ಬಳಿ 1 ಲಕ್ಷ 7 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

More from Filmibeat

English summary
Aishwarya Rai Bachchan Sister-in-law Shrima Rai was the winner of Mrs.India Globe 2009, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X