Pics: ಐಶ್, ಸುಶ್, ಪಿಗ್ಗಿ, ದಿಯಾ ಕಿರೀಟ ಧರಿಸಿದ ಕ್ಷಣ
ಚಿತ್ರರಂಗಕ್ಕೂ ಮಾಡೆಲ್ ಜಗತ್ತಿಗೂ ಬಿಡಿಸಲಾರದ ನಂಟು. ಚಿತ್ರರಂಗದಲ್ಲಿ ಬೆಳಗಲು ಮಾಡೆಲಿಂಗ್ ಹಾಗೂ ಭುವನ ಸುಂದರಿ, ವಿಶ್ವ ಸುಂದರಿ ಪಟ್ಟ ಅಡಿಪಾಯವಾಗಿದ್ದು ಸುಳ್ಳಲ್ಲ. ಆದರೆ, ಈ ಪೈಕಿ ಗೆದ್ದವರು ಮಾತ್ರ ಕೆಲವೇ ಮಂದಿ. ಸೌಂದರ್ಯ ಸ್ಪರ್ಧೆ ಎಂದರೆ ಬರೀ ಸುಂದರಿಯರ ಆಯ್ಕೆ ಮಾತ್ರವಲ್ಲ ಎಂಬ ಮಾತು ಚಿತ್ರರಂಗಕ್ಕೆ ಕಾಲಿಟ್ಟ ಯಶಸ್ವಿಯಾದ ಮಾಡೆಲಿಂಗ್ ಬೆಡಗಿಯರಿಗೆ ಅನ್ವಯಿಸುತ್ತದೆ.
ಐಶ್ವರ್ಯಾ ರೈ ಬಚ್ಚನ್, ಸುಶ್ಮಿತಾ ಸೇನ್, ಪ್ರಿಯಾಂಕಾ ಸೇನ್, ಲಾರಾ ದತ್ತ, ದಿಯಾ ಮಿರ್ಜಾ ಮುಂತಾದವರು ಬಾಲಿವುಡ್ ಗೆ ಎಂಟ್ರಿ ಕೊಡಲು ಸೌಂದರ್ಯ ಸ್ಪರ್ಧೆಯೇ ಕಾರಣ. ಸುಂದರಿಯರ ಪೈಕಿ, ಯುಕ್ತಾ ಮುಖಿ, ತನುಶ್ರೀ ದತ್ತಾ ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡದೆ ವೈಫಲ್ಯ ಕಂಡರೆ ಉಳಿದವರ ಹೆಸರು ಇನ್ನೂ ಚಾಲ್ತಿಯಲ್ಲಿದೆ.
ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಈ ಬೆಡಗಿಯರು ವಿಶ್ವ ಸುಂದರಿ, ಫೆಮಿನಾ ಮಿಸ್ ಇಂಡಿಯಾ ಹಾಗೂ ಭುವನ ಸುಂದರಿ ಕಿರೀಟ ಧರಿಸಿದ ಕ್ಷಣ ಅಭಿಮಾನಿಗಳ ಕಣ್ಣಲ್ಲಿ ಅಚ್ಚಳಿಯದೇ ಉಳಿದಿರುತ್ತದೆ. ಮಾಡೆಲಿಂಗ್ ಹಾಗೂ ಸೌಂದರ್ಯ ಸ್ಪರ್ಧೆ ಮೂಲಕ ಭಾರತದ ಚಿತ್ರರಂಗ ಪ್ರವೇಶಿಸಿದ ಬೆಡಗಿಯರ ಆ ಎಂದೂ ಮರೆಯದ ಕ್ಷಣ ಇಲ್ಲಿ ನಿಮ್ಮ ಕಣ್ಮುಂದಿದೆ

ಐಶ್ವರ್ಯಾ ರೈ
ಐಶ್ವರ್ಯಾ ರೈ 1994ರಲ್ಲಿ ವಿಶ್ವ ಸುಂದರಿ ಪಟ್ಟ ಧರಿಸಿ ಫೋಸ್ ಕೊಟ್ಟಿದ್ದು ಹೀಗೆ

ಸುಶ್ಮಿತಾ ಸೇನ್
1994ರಲ್ಲಿ ಬೆಂಗಾಳಿ ಬೆಡಗಿ ಸುಶ್ಮಿತಾ ಸೇನ್ ಭುವನ ಸುಂದರಿ ಕಿರೀಟ ಧರಿಸಿದ್ದು ಹೀಗೆ

ಲಾರಾ ದತ್ತಾ
ಭುವನ ಸುಂದರಿ ಪಟ್ಟವನ್ನು ಮತ್ತೆ ಭಾರತಕ್ಕೆ ತಂದುಕೊಟ್ಟ ಕೀರ್ತಿ ಲಾರಾ ಗೆ ಸಿಗುತ್ತದೆ. ಸುಶ್ಮಿತಾ ಸೇನ್ ನಂತರ 2000ರಲ್ಲಿ ಲಾರಾ ದತ್ತಾ ಭುವನ ಸುಂದರಿ ಕಿರೀಟ ಧರಿಸಿದ್ದರು.

ಪ್ರಿಯಾಂಕಾ ಛೋಪ್ರಾ
ದೆಹಲಿ ಬೆಡಗಿ ಪ್ರಿಯಾಂಕಾ ಛೋಪ್ರಾ 2000 ವಿಶ್ವ ಸುಂದರಿಯಾಗಿದ್ದರು.

ದಿಯಾ ಮಿರ್ಜಾ
2000ರಲ್ಲಿ ಮಿಸ್ ಏಷ್ಯಾ ಫೆಸಿಫಿಕ್ ಆಗಿದ್ದ ದಿಯಾ ಮಿರ್ಜಾ, ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

ತನುಶ್ರೀ ದತ್ತಾ
ಬೆಂಗಾಳಿ ಬೆಡಗಿ ತನುಶ್ರೀ ದತ್ತಾ ಅವರು 2004ರಲ್ಲಿ ಫೆಮಿನಾ ಮಿಸ್ ಇಂಡಿಯಾ ಎನಿಸಿದ್ದರು.

ಜೂಹಿ ಚಾವ್ಲಾ
ನಟಿ ನಿರ್ಮಾಪಕಿಯಾಗಿರುವ ಜೂಹಿ ಚಾವ್ಲಾ ಅವರು 1984ರಲ್ಲಿ ಮಿಸ್ ಇಂಡಿಯಾ ಆಗಿದ್ದರು,

ಜೀನತ್ ಅಮಾನ್
ಜೀನತ್ ಅಮಾನ್ 1970ರ ದಶಕದಲ್ಲಿ ಮಿಸ್ ಏಷ್ಯಾ ಫೆಸಿಫಿಕ್ ಕಿರೀಟ ಧರಿಸಿದ್ದರು.

ಯುಕ್ತ ಮುಖಿ
ಯುಕ್ತಾ ಮುಖಿ ಅವರು 1999ರಲ್ಲಿ ವಿಶ್ವ ಸುಂದರಿ ಪಟ್ಟ ಗಳಿಸಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು.

ನೇಹಾ ಧೂಪಿಯಾ
2002ರಲ್ಲಿ ನೇಹಾ ಫೆಮಿನಾ ಮಿಸ್ ಇಂಡಿಯಾ ಆಗಿದ್ದರು.

ಸೆಲೀನಾ ಜೇಟ್ಲಿ
2001ರ ಫೆಮಿನಾ ಮಿಸ್ ಇಂಡಿಯಾ ಯೂನಿರ್ವಸ್ ಸ್ಪರ್ಧೆಯಲ್ಲಿ ಸೆಲೀನಾ ಜೇಟ್ಲಿಗೆ ಗೆಲುವು

ಜಾಕ್ವಲಿನ್ ಫರ್ನಾಂಡೀಸ್
ಜಾಕ್ವಲಿನ್ ಫರ್ನಾಂಡೀಸ್ ಅವರು 2006ರಲ್ಲಿ ಶ್ರೀಲಂಕಾದಲ್ಲಿ ಮಿಸ್ ಶ್ರೀಲಂಕಾ ಯೂನಿರ್ವಸ್ ಪ್ರಶಸ್ತಿ ಬಾಚಿಕೊಂಡಿದ್ದರು.

ನಮ್ರತಾ ಶಿರೋಡ್ಕರ್
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಮದುವೆಯಾಗಿರುವ ನಮ್ರತಾ ಶಿರೋಡ್ಕರ್ ಅವರು 1993ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು.


Click it and Unblock the Notifications











