ರಾಖಿ ಸಾವಂತ್ ಆಗಿ ಬದಲಾದ ಐಶ್ವರ್ಯ ರೈ ; ಕನಸಿನ ಕನ್ಯೆಯ ಮುಖಕ್ಕೆ ಏನಾಯಿತು..?
ವಿಶ್ವ ಸುಂದರಿ ಆದ್ರೇನು..? ಭುವನ ಸುಂದರಿ ಆದ್ರೇನು..? ವಯಸ್ಸು ಅನ್ನುವುದು ಯಾರಿಗೂ ನಿಲ್ಲುವುದಿಲ್ಲ. ಕಾಲ ಚಕ್ರ ತಿರುಗಿದಂತೆ ಬದುಕು ಸಾಗುತ್ತಾ ಹೋಗುತ್ತದೆ. ಆದರೆ ಇದನ್ನರಿಯದ ಕೆಲವರು ಸದ್ಯಕ್ಕೆ ಐಶ್ವರ್ಯ ರೈ ಅವರನ್ನ ಟಾರ್ಗೆಟ್ ಮಾಡಿದ್ದಾರೆ.
ಹೌದು, ಒಂದ್ಕಾಲದಲ್ಲಿ ತನ್ನ ಸೌಂದರ್ಯದಿಂದ ಕೋಟ್ಯಂತರ ಹೃದಯಗಳಿಗೆ ಕನ್ನ ಹಾಕಿದ್ದ ಐಶ್ವರ್ಯ ರೈ ಮೊನ್ನೆಯಷ್ಟೇ ವಿಶ್ವ ವಿಖ್ಯಾತ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕಾಣಿಸಿಕೊಂಡಿದ್ದರು. ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್ ಧರಿಸಿ ಮಾರ್ಜಾಲ ನಡಿಗೆಯನ್ನ ಮಾಡಿದರು.

ಇನ್ನೂ ಎರಡನೇ ದಿನ ಕೂಡ ಐಶ್ವರ್ಯ ಕೆಂಪು ರತ್ನಗಂಬಳಿ ಮೇಲೆ ನಡೆದರು. ಆಕಾಶ ನೀಲಿ ಬಣ್ಣದ ಮಿಣ ಮಿಣ ಮಿನಗುವ ಡ್ರೆಸ್ ಧರಿಸಿ ಮಿಂಚಿದರು. ಐಶ್ವರ್ಯ ಅವರ ಈ ಎರಡು ವೇಷಭೂಷಣ ಆ ಕ್ಷಣಕ್ಕೆ ಅನೇಕರ ಕಣ್ಮನ ಸೆಳೆದಿತ್ತು. ಆದರೆ ಈಗ ಐಶ್ವರ್ಯ ಅವರ ಲುಕ್ ಅನೇಕರ ಕಿಕ್ಕಿಳಿಸಿದೆ. ಐಶ್ವರ್ಯ ಅವರ ಫೋಟೋ ಟ್ರೋಲಿಗರಿಗೆ ಆಹಾರವಾಗಿದೆ.
ಹೌದು, ತಮ್ಮ ಪುತ್ರಿ ಆರಾಧ್ಯ ಜೊತೆ ಐಶ್ವರ್ಯ ಇರುವ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದು ಐಶ್ವರ್ಯ ರೈ ಅವರೇನಾ..? ಅಥವಾ ರಾಖಿ ಸಾವಂತಾ ಅನ್ನುವ ಚರ್ಚೆಯನ್ನು ಕೂಡ ಈ ಫೋಟೋ ಹುಟ್ಟು ಹಾಕಿದೆ.

ಫೋಟೋ ಕಂಡು ಬೆಚ್ಚಿ ಬಿದ್ದಿರುವ ಅನೇಕರು ಐಶ್ವರ್ಯ ರೈ ಮತ್ತು ರಾಖಿ ಸಾವಂತ್ ಅಕ್ಕ-ತಂಗಿ ಇರಬಹುದು ಎನ್ನುವ ಅನುಮಾನವನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ. ವಯಸ್ಸಾದಂತೆ ಐಶ್ವರ್ಯ ರೈ ರಾಖಿ ಸಾವಂತ್ ಅವರಂತೆಯೇ ಕಾಣ್ತಿದ್ದಾರೆ ಎಂಬ ಅಭಿಪ್ರಾಯವನ್ನೂ ಕೂಡ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಈ ಫೋಟೋ ಡಿಲೀಟ್ ಮಾಡಿ ನಮ್ಮ ಕಣ್ಣಿಂದ ನೋಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ.
ಇನ್ನೂ ಸೆಲೆಬ್ರೆಟಿಗಳಿಗೆ ತಮ್ಮ ಬ್ಯೂಟಿ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಐಶ್ವರ್ಯ ಅವರ ಮುಖ ಚಹರೆ ನೋಡಿ ಐಶ್ವರ್ಯ ಕೂಡ ಇದೇ ರೀತಿ ಸರ್ಜರಿ ಏನಾದರೂ ಮಾಡಿಸಿಕೊಂಡಿದ್ದಾರಾ ಅನ್ನುವ ಗುಮಾನಿ ಕೂಡ ಅನೇಕರನ್ನ ಕಾಡುತ್ತಿದೆ.

ಇನ್ನೂ ಐಶ್ವರ್ಯ ಜೊತೆ ಜೊತೆಯಲ್ಲಿ ಅವರ ಪುತ್ರಿ ಆರಾಧ್ಯ ಅವರನ್ನು ಕೂಡ ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಕಾನ್ ಅಂತಹ ಪ್ರತಿಷ್ಠಿತ ಸ್ಥಳದಲ್ಲಿ ಹಾಕಿಕೊಳ್ಳುವ ಬಟ್ಟೆಯಾ ಇದು ಎನ್ನುವ ಪ್ರಶ್ನೆಯನ್ನೂ ಮಾಡುತ್ತಿದ್ದಾರೆ. ಕೊನೆ ಪಕ್ಷ ಐಶ್ವರ್ಯ ರೈಗಾದರೂ ಬುದ್ದಿ ಬೇಡವಾ ಎಂದು ಕುಹುಕದ ಮಾತುಗಳನ್ನಾಡುತ್ತಿದ್ದಾರೆ ಅನೇಕರು.
ಒಟ್ನಲ್ಲಿ ಒಂದ್ಕಾಲದಲ್ಲಿ ಪಡ್ಡೆ ಹುಡುಗರ ಪಾಲಿನ ಕನಸಿನ ಕನ್ಯೆಯಾಗಿದ್ದವರು ಐಶ್ವರ್ಯ ರೈ. ಆ ಕಾಲಕ್ಕೆ ಇವರನ್ನ ಆರಾಧಿಸಿದವರು ಅದೆಷ್ಟೋ ಜನ. ಆದರೆ ಇಂದು ಅವತ್ತು ಹೊಗಳಿದ್ದ ಜನನೇ ಐಶ್ವರ್ಯ ಅವರನ್ನ ತೆಗಳುತ್ತಿದ್ದಾರೆ. ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಐಶ್ವರ್ಯ ಅವತಾರ ಕಂಡು ನಗುತ್ತಿದ್ದಾರೆ.


Click it and Unblock the Notifications











