ವಿಚ್ಚೇದನದ ವದಂತಿ ನಡುವೆ ಐಶ್ವರ್ಯ ರೈ ಮಾರ್ಜಾಲ ನಡಿಗೆ, ಮಾಜಿ ವಿಶ್ವಸುಂದರಿಯ ಹೇರ್ ಸ್ಟೈಲ್‌ ಕಂಡು ಬೆಚ್ಚಿ ಬಿದ್ದ ಫ್ಯಾನ್ಸ್...!

ಮಣಿರತ್ನಂ ಅವರ ಇರುವರ್ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದವರು ಐಶ್ವರ್ಯ ರೈ. ಆ ನಂತರ ಐಶ್ವರ್ಯ ಹಿಂದೆ ತಿರುಗಿ ನೋಡಲಿಲ್ಲ. ಅತ್ಯಲ್ಫ ಅವಧಿಯಲ್ಲಿಯೇ ಕಾಲಿವುಡ್ ಮತ್ತು ಬಾಲಿವುಡ್‌ ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಐಶ್ವರ್ಯ ಹೊರ ಹೊಮ್ಮಿದರು. ನೇಮು, ಫೇಮನ್ನು ಗಳಿಸಿದರು. ಹಿಂದಿ ಉದ್ಯಮವನ್ನು ಅಕ್ಷರಶಃ ಆಳಿದರು.

ಇಂಥಾ ಐಶ್ವರ್ಯ ರೈ ಅವರ ದಾಂಪತ್ಯ ಬದುಕು ಸದ್ಯಕ್ಕೆ ಚರ್ಚೆಯಲ್ಲಿದೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಯಾವ ಕ್ಷಣದಲ್ಲಾದರೂ ದೂರವಾಗಬಹುದು ಎಂಬ ಆತಂಕ ಇವರ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ನಡುವೆ ಐಶ್ವರ್ಯ ರೈ ಸದ್ಯ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗಿಯಾಗಿದ್ದಾರೆ. ಮಾರ್ಜಾಲ ನಡಿಗೆಯಿಂದ ಮೋಡಿ ಮಾಡಿದ್ದಾರೆ. ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡು ಟ್ರೋಲಿಗರಿಗೆ ಆಹಾರವೂ ಆಗಿದ್ದಾರೆ.

Aishwarya Rai Bachchan Trolled for Her Hairstyle at Paris Fashion Week 2024

ಹೌದು, ಅಸಲಿಗೆ ಹೋದಲ್ಲಿ .. ಬಂದಲ್ಲಿ .. ಐಶ್ವರ್ಯ ಒಂದೇ ತರಹದ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಇವರ ಅಭಿಮಾನಿಗಳು ಪ್ರೀತಿ ತುಂಬಿದ ತಕರಾರನ್ನೂ ಮೊದಲಿಂದ ತೆಗೆಯುತ್ತಿದ್ದರು. ಮೊನ್ನೆಯ ದಿನ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಬಲೂನ್ ಹೆಮ್ ಕೆಂಪು ಉಡುಗೆಯಲ್ಲಿ ಐಶ್ವರ್ಯ ರೈ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದಾಗ ಕೂಡ ಅನೇಕರು ಇಲ್ಲಿಯಾದರೂ ನಿಮ್ಮ ಹೇರ್ ಸ್ಟೈಲ್ ಬದಲಿಸಬಾರದಾ ಎಂದು ಹೇಳಿದ್ದರು.

ತಮ್ಮ ಭಕ್ತಗಣದ ಈ ಒತ್ತಾಯಕ್ಕೆ ಮಣಿದಾ ಅಥವಾ ಏನೋ ಗೊತ್ತಿಲ್ಲ. ಐಶ್ವರ್ಯ ರೈ ಸದ್ಯ ತಮ್ಮ ಕೇಶ ವಿನ್ಯಾಸವನ್ನು ಬದಲಿಸಿಕೊಂಡು ಲೇಡಿ ಬಾಸ್ ರೂಪದಲ್ಲಿ ಪ್ಯಾರಿಸ್‌ ಫ್ಯಾಷನ್ ವೀಕ್‌ನಲ್ಲಿ ಓಡಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಚಮಕ್ ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ.. ಅಭಿಮಾನಿಗಳು ಹಾಗೂ ಕಲಾರಸಿಕರು ಮಾತ್ರ ಐಶ್ವರ್ಯ ರೈ ಅವರ ಈ ಅವತಾರ ಕಣ್ತುಂಬಿಕೊಂಡು ಖುಷಿ ಪಡುವ ಬದಲು ಬೆಚ್ಚಿ ಬಿದ್ದಿದ್ದಾರೆ.

ಯಾಕೆಂದರೆ ಕಸೂತಿ ಕುಸುರಿ ಕೆಲಸವನ್ನೊಂದಿರುವ ಬ್ಲ್ಯಾಕ್ ಕಲರ್ ಪ್ಯಾಂಟ್ ಸೂಟ್ ಹಾಕಿಕೊಂಡು ಮಿರ ಮಿರ ಮಿಂಚುತ್ತಿರುವ ಐಶ್ವರ್ಯ ರೈ ತಮ್ಮ ಕೂದಲನ್ನೂ ಇಲ್ಲಿ ರೋಲ್ ಮಾಡಿದ್ದಾರೆ. ಇದು ಅನೇಕರಿಗೆ ಇಷ್ಟವಾಗಿಲ್ಲ. ಹೀಗಾಗಿಯೇ ಸುತ್ತಿರುವ ಕೂದಲನ್ನೂ ಮೊದಲು ತೆಗೆಯಿರಿ ಎಂದು ಅನೇಕರು ಐಶ್ವರ್ಯ ರೈ ಅವರಿಗೆ ಹೇಳಿದ್ದಾರೆ. ಇದಕ್ಕಿಂತ ನಿಮ್ಮ ಹಳೆಯ ಹೇರ್ ಸ್ಟೈಲ್ ಚೆನ್ನಾಗಿತ್ತು ಎಂದಿದ್ದಾರೆ. ನಿಮ್ಮ ಹೇರ್ ಸ್ಟೈಲಿಸ್ಟ್‌ನ ಕೂಡಲೇ ಬದಲಿಸಿ ಎನ್ನುವ ಸಲಹೆಯನ್ನು ಕೂಡ ಅನೇಕರು ನೀಡಿದ್ದಾರೆ. ತರ ತರಹದ ಕಾಮೆಂಟ್ ಮಾಡುವ ಮೂಲಕ ಐಶ್ವರ್ಯ ರೈ ಅವರ ಕಾಲೆಳೆದಿದ್ದಾರೆ.

ಅಂದ್ಹಾಗೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಸಂಬಂಧ ಹಳಸಿದೆ ಎನ್ನುವ ಅನುಮಾನವನ್ನೂ ಐಶ್ವರ್ಯ ರೈ ಈ ಪ್ಯಾರಿಸ್ ಫ್ಯಾಷನ್‌ ವೀಕ್‌ನಲ್ಲಿ ದೂರ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಧರಿಸಿ ಈ ಫ್ಯಾಷನ್ ಪ್ರಪಂಚಕ್ಕೆ ಬಂದಿರುವ ಐಶ್ವರ್ಯ ರೈ, ಕ್ಯಾಮರಾಗೆ ಕಣ್ಣು ಹೊಡೆದಿದ್ದಾರೆ. ತಮ್ಮ ಸ್ನೇಹಿತೆಯರಾದ ಬ್ರಿಡ್ಜರ್ಟನ್ ನಟ ಸಿಮೋನ್ ಆಶ್ಲೇ, ಅಮೇರಿಕನ್ ನಟ-ನಿರ್ಮಾಪಕಿ ಇವಾ ಲಾಂಗೋರಿಯಾ ಮತ್ತು ಗಾಯಕಿ ಕ್ಯಾಮಿಲಾ ಕ್ಯಾಬೆಲ್ಲೊ ಜೊತೆ ಹರಟೆ ಹೊಡೆದಿದ್ದಾರೆ. ನಕ್ಕಿದ್ದಾರೆ. ತಮ್ಮ ಮನದಲ್ಲಿ ಯಾವ ದುಗುಡ ದುಮ್ಮಾನ ಇಲ್ಲ, ಅಭಿಷೇಕ್ ಬಚ್ಚನ್ ಅವರಿಂದ ದೂರವಾಗುವ ಯಾವ ಆಲೋಚನೆ ಕೂಡ ತಲೆಯಲ್ಲಿ ಇಲ್ಲ ಎಂಬಂತೆ ಕಾಣಿಸಿಕೊಂಡಿದ್ದಾರೆ.

ಹೀಗಾಗಿಯೇ ಈ ವಿಡಿಯೋ ನೋಡಿದ ಅನೇಕರು ಐಶ್ವರ್ಯ ರೈ ತುಂಬಾ ಖುಷಿಯಾಗಿಯೇ ಇದ್ದಾರೆ, ಸಾಂಸಾರಿಕ ಜೀವನದ ವಿಚಾರದಲ್ಲಿ ಹರಿದಾಡುತ್ತಿರುವ ಅಂತೆ-ಕಂತೆಗಳ ಸುದ್ದಿಯಿಂದ ಐಶ್ವರ್ಯ ರೈ ವಿಚಲಿತವಾದವರಂತೆ ಕಾಣುತ್ತಿಲ್ಲ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ. ನಿಮ್ಮ ಮುಖದಲ್ಲಿನ ಈ ನಗು ಸದಾ ಕಾಲ ಹೀಗೆ ಇರಲಿ ಎಂದು ಆಶಿಸಿದ್ದಾರೆ.

More from Filmibeat

Read more about: aishwarya rai bollywood troll
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X