ಮಗಳ ತುಟಿಗೆ ಐಶ್ವರ್ಯ ಮುತ್ತು ಕೊಟ್ಟಿದ್ದು ದೊಡ್ಡ ಪಾಪವೇ.?!

By Harshitha

Recommended Video

ಮಗಳಿಗೆ ಚುಂಬಿಸಿದ್ದೆ ತಪ್ಪಾಯ್ತು | Filmibeat Kannada

ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ಟ್ರೋಲಿಗರ ಸಂಖ್ಯೆ ಹೆಚ್ಚಾಗಿದೆ. ತಾರೆಯರ ಬಗ್ಗೆ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುವವರು ದಿನೇ ದಿನೇ ಜಾಸ್ತಿ ಆಗುತ್ತಿದ್ದಾರೆ.

ನಟಿ ಪ್ರಿಯಾಂಕಾ ಛೋಪ್ರಾ, ಹೀನಾ ಖಾನ್, ಆನಂದ್ ಅಹುಜಾ, ಸೋನಂ ಕಪೂರ್, ಅಭಿಶೇಕ್ ಬಚ್ಚನ್ ಸೇರಿದಂತೆ ಹಲವು ಸ್ಟಾರ್ ಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಈಗ ನಟಿ ಐಶ್ವರ್ಯ ರೈ ಬಚ್ಚನ್ ಸರದಿ.

ಇಷ್ಟು ದಿನ ಸೋಷಿಯಲ್ ಮೀಡಿಯಾದಿಂದ ನಟಿ ಐಶ್ವರ್ಯ ರೈ ಬಚ್ಚನ್ ದೂರ ಉಳಿದಿದ್ದರು. ಆದ್ರೆ, Cannes ಚಲನಚಿತ್ರೋತ್ಸವದಲ್ಲಿ ಭಾಗಿ ಆಗುವ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಸೊಸೆ ಐಶ್ವರ್ಯ ಇನ್ಸ್ಟಾಗ್ರಾಮ್ ಗೆ ಕಾಲಿಟ್ಟರು.

ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಗಟ್ಟಲೆ ಫಾಲೋವರ್ಸ್ ಹೊಂದಿರುವ ಐಶ್ವರ್ಯ ರೈ ಬಚ್ಚನ್ ಸದ್ಯ ಟ್ರೋಲ್ ಆಗಿದ್ದಾರೆ. ಅದು ತಮ್ಮ ಮಗಳ ತುಟಿಗೆ ಮುತ್ತು ಕೊಟ್ಟ ಕಾರಣಕ್ಕೆ.! ಮುಂದೆ ಓದಿರಿ...

ಇದು ದೊಡ್ಡ ಪಾಪವೇ.?

ಇದು ದೊಡ್ಡ ಪಾಪವೇ.?

ತಮ್ಮ ಪುತ್ರಿ ಆರಾಧ್ಯ ಬಚ್ಚನ್ ತುಟಿಗೆ ತುಟಿ ಒತ್ತಿರುವ ನಟಿ ಐಶ್ವರ್ಯ ರೈ ಬಚ್ಚನ್ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಕೆಲವರು ಐಶ್ವರ್ಯ ರೈ ಬಚ್ಚನ್ ಗೆ ಛೀಮಾರಿ ಹಾಕುತ್ತಿದ್ದಾರೆ.

ಇದೊಂದು ಕೆಟ್ಟ ಸಂಪ್ರದಾಯ

ಇದೊಂದು ಕೆಟ್ಟ ಸಂಪ್ರದಾಯ

''ಮಕ್ಕಳಿಗೆ ತಂದೆ-ತಾಯಂದಿರು ಪಾಶ್ಚಿಮಾತ್ಯ ಸಂಸ್ಕೃತಿಯಂತೆ ತುಟಿಗೆ ಯಾಕೆ ಮುತ್ತು ಕೊಡ್ತಾರೋ, ಅರ್ಥ ಆಗಲ್ಲ. ಇದನ್ನ ಹಲವು ಸೆಲೆಬ್ರಿಟಿಗಳು ಮಾಡ್ತಾರೆ. ಇದೊಂದು ಕೆಟ್ಟ ಸಂಪ್ರದಾಯ'' ಎಂದು ಹಲವರು ಐಶ್ವರ್ಯಗೆ ಸೋಷಿಯಲ್ ಮೀಡಿಯಾದಲ್ಲಿ ಚಾಟಿಯೇಟು ಕೊಡುತ್ತಿದ್ದಾರೆ.

ಇದು ಯಾಕೆ ಬೇಕಿತ್ತು.?

ಇದು ಯಾಕೆ ಬೇಕಿತ್ತು.?

''5-6 ವರ್ಷದ ಮಗುವಿನ ತುಟಿಗೆ ಮುತ್ತು ಕೊಡುವುದೇ.? ಛೀ..'' ಅಂತೆಲ್ಲ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ, ಇಂತಹ ಫೋಟೋನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ಯಾಕೆ.? ಎಂಬ ಪ್ರಶ್ನೆಯೂ ಉದ್ಭವ ಆಗಿದೆ.

ಇಷ್ಟು ದಿನ ದೂರ ಇದ್ದದ್ದು ಇದೇ ಕಾರಣಕ್ಕೆ.!

ಇಷ್ಟು ದಿನ ದೂರ ಇದ್ದದ್ದು ಇದೇ ಕಾರಣಕ್ಕೆ.!

ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯುವವರ ಸಂಖ್ಯೆ ಜಾಸ್ತಿ ಇದೆ ಎಂಬ ಕಾರಣಕ್ಕೆ ಇಷ್ಟು ದಿನ ಇದರಿಂದ ಐಶ್ವರ್ಯ ದೂರ ಇದ್ದರು. ಹಾಗೂ ಹೀಗೂ ಮನಸ್ಸು ಮಾಡಿ ಇನ್ಸ್ಟಾಗ್ರಾಮ್ ಗೆ ಬಂದ ಐಶ್ವರ್ಯಗೆ ಈಗ ಈ ರೀತಿ ಮಂಗಳಾರತಿ ಮಾಡುತ್ತಿದ್ದಾರೆ ನೆಟ್ಟಿಗರು.

More from Filmibeat

English summary
Bollywood Actress Aishwarya Rai Bachchan trolled for kissing Aaradhya on Lips.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X