SIIMA Awards 2024 ; ಸೈಮಾದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡು ಮಂದಹಾಸ ಬೀರಿದ ಐಶ್ವರ್ಯ ರೈ, ಸಂಭ್ರಮಿಸಿದ ಮಗಳು..!

ಬದುಕು ಆಧುನಿಕವಾದಷ್ಟು ಸಂಸಾರ ಪ್ರಾಯೋಗಿಕವಾಗತೊಡಗಿದೆ. ಒಂದೊಂದು ಮನೆಯಲ್ಲೂ.. ಒಂದೊಂದು ಸಂಸಾರದಲ್ಲೂ.. ಒಂದೊಂದು ಜೀವದಲ್ಲೂ.. ಒಂದೊಂದು ಕಥೆ. ಉದಾಹರಣೆಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರನ್ನೇ ತೆಗೆದುಕೊಳ್ಳಿ.

ಹೌದು, ಕಳೆದ ಕೆಲ ದಿನಗಳಿಂದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದೂರವಾಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ಈ ಮಾತು ಸುಳ್ಳು ಎನ್ನುವ ಸ್ಪಷ್ಟನೆಯನ್ನು ಇಲ್ಲಿಯವರೆಗೆ ಇಬ್ಬರು ನೀಡಿಲ್ಲ. ಈ ಕಾರಣಕ್ಕೆ ಈ ಸ್ಟಾರ್ ಜೋಡಿಯ ಆರಾಧಕರ ಚಿಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಐಶ್ವರ್ಯ ರೈ ತಮ್ಮ ಪುತ್ರಿ ಆರಾಧ್ಯ ಜೊತೆ ದುಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಸೈಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Aishwarya Rai Bachchan wins Best Actress at SIIMA 2024 with Aaradhya photographing her win

ಹೌದು, ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಐಶ್ವರ್ಯ ರೈ ತಮ್ಮ ಮಗಳ ಜೊತೆ ಭಾಗಿಯಾಗಿದ್ದರು. ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಷಕರ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಇನ್ನೂ.. ಈ ಸಮಾರಂಭದಲ್ಲಿ ಪ್ರಶಸ್ತಿ ಪಡೆದಿದ್ದು ಐಶ್ವರ್ಯ ರೈ ಆದರೂ ಅಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಅವರ ಮಗಳು ಆರಾಧ್ಯ ಬಚ್ಚನ್. ಹೀಗಾಗಿಯೇ ಆ ಕಡೆ ಅಮ್ಮ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗ ಈ ಕಡೆ ಮಗಳ ಕಣ್ಣಲ್ಲಿ ಹರಿಯುತ್ತಿದ್ದ ಖುಷಿಯ ಮಿಂಚು ಅಲ್ಲಿದ್ದವರ ಚಿತ್ತವನ್ನೂ ಕದ್ದಿತ್ತು. ತನ್ನ ತಾಯಿಯ ಫೋಟೋಗಳನ್ನು ಆರಾಧ್ಯ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರೆ, ಸೈಮಾ ಕ್ಯಾಮರಾಗಳು ಆರಾಧ್ಯ ಅವರನ್ನು ಸೆರೆ ಹಿಡಿಯುತ್ತಿದ್ದವು.

ಇನ್ನೂ ಪೊನ್ನಿಯನ್ ಸೆಲ್ವನ್ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಐಶ್ವರ್ಯ ರೈ ಮೊಗದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ಪ್ರಶಸ್ತಿ ಪಡೆದ ನಂತರ ಮಾತ್ರ ಅಲ್ಲ ಪ್ರಶಸ್ತಿ ಪಡೆಯುವ ಮುನ್ನ ಕೂಡ ಐಶ್ವರ್ಯ ತಮ್ಮ ಪುತ್ರಿ ಜೊತೆ ತುಂಬಾ ಲವಲವಿಕೆಯಿಂದ ಕಾಣಿಸಿಕೊಂಡರು. ಮಗಳ ಜೊತೆ ಕ್ಯಾಮರಾಗಳಿಗೆ ಫೋಸ್ ನೀಡಿದರು. ಇಷ್ಟೇ ಅಲ್ಲ ತಮ್ಮನ್ನು ನೋಡಲು ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದ ಸುತ್ತ ನೆರೆದ ಜನರ ಎದುರು ನಿಂತು ಸೆಲ್ಫೀಯನ್ನೂ ಕೂಡ ಐಶ್ವರ್ಯ ಕ್ಲಿಕಿಸಿಕೊಂಡರು.

ಐಶ್ವರ್ಯ ರೈ ಮತ್ತು ಚಿಯಾನ್ ವಿಕ್ರಮ್ ಅವರ ನಡುವೆ ಇರುವ ಸ್ನೇಹಕ್ಕೆ ಕೂಡ ಈ ಸೈಮಾ ವೇದಿಕೆ ಸಾಕ್ಷಿಯಾಯಿತು. ವಿಕ್ರಮ್ ಪಕ್ಕದಲ್ಲಿ ಕುಂತು ಐಶ್ವರ್ಯ ಮಾತನಾಡುತ್ತಾ, ಸಂತಸದ ಅಲೆಯಲ್ಲಿ ಐಶ್ವರ್ಯ ತೇಲುತ್ತಿದ್ದರೆ ಆರಾಧ್ಯ ತಮ್ಮ ತಾಯಿಯ ಸಂಭ್ರಮವನ್ನು ಬೆರಗುಗಣ್ಣಿನಿಂದ ನೋಡುತ್ತಾ ಕುಳಿತುಕೊಂಡಿದ್ದರು.

ಸದ್ಯ ಐಶ್ವರ್ಯ ರೈ ಅವರ ಈ ಸಂಭ್ರಮ ಸಡಗರ ಕಣ್ತುಂಬಿಕೊಂಡ ಇವರ ಅಭಿಮಾನಿಗಳು, ಐಶ್ವರ್ಯ ರೈ ಇಷ್ಟೊಂದು ಮನದುಂಬಿ ನಕ್ಕಿದ್ದು ಇತ್ತೀಚಿನ ದಿನಗಳಲ್ಲಿ ನಾವು ನೋಡಿಯೇ ಇರಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಐಶ್ವರ್ಯ ರೈ ಮತ್ತು ಆರಾಧ್ಯ ಇಬ್ಬರನ್ನೂ ಹೋಲಿಕೆ ಮಾಡುತ್ತಿದ್ದಾರೆ. ಆರಾಧ್ಯ ಬಚ್ಚನ್ ತಾಯಿಯ ಪ್ರತಿಬಿಂಬ, ಭವಿಷ್ಯದಲ್ಲಿ ಬಾಲಿವುಡ್‌ ಗೆ ಆರಾಧ್ಯ ಬರುವುದು ಖಚಿತವೆನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.

aishwarya-rai-bachchan-wins-best-actress-at-siima-2024-with-aaradhya-photographing-her-win

ಒಟ್ನಲ್ಲಿ ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯ ದೂರವಾಗುತ್ತಾರೆ ಎನ್ನುವ ಮಾತು ಅಂತೆ ಕಂತೆಯ ಸಂತೆಯಲ್ಲಿ ಇನ್ನೂ ಚಾಲ್ತಿಯಲ್ಲಿರುವಾಗ ಐಶ್ವರ್ಯ ರೈ ತಮ್ಮ ಮಗಳ ಜೊತೆ ಸೈಮಾ ಅಂಗಳದಲ್ಲಿ ಒಂದು ಸುತ್ತು ಹಾಕಿ ಬಂದಿದ್ದಾರೆ. ಕೆಲ ಕಾಲ ಸಂಭ್ರಮದಿಂದ ಕಳೆದಿದ್ದಾರೆ. ತಮ್ಮ ದಕ್ಷಿಣದ ಸ್ನೇಹಿತರ ಜೊತೆ ಹರಟೆ ಹೊಡೆದಿದ್ದಾರೆ. ಆದರೆ, ಇಷ್ಟೆಲ್ಲ ಆದರೂ ಅಭಿಷೇಕ್ ಬಚ್ಚನ್ ತಮ್ಮ ಪತ್ನಿ ಐಶ್ವರ್ಯ ರೈ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಇನ್ನೂ ಅಭಿನಂದನೆ ಸಲ್ಲಿಸಿಲ್ಲ. ಹೀಗಾಗಿ ಇಬ್ಬರ ನಡುವಿನ ಸಂಬಂಧದ ಕುರಿತು ಈಗ ಇನ್ನೊಮ್ಮೆ ಚರ್ಚೆ ಶುರುವಾಗುವ ಎಲ್ಲ ಲಕ್ಷಣಗಳು ಸದ್ಯಕ್ಕೆ ಕಂಡು ಬರುತ್ತಿವೆ.

More from Filmibeat

Read more about: siima aishwarya rai siima awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X