For Quick Alerts
  ALLOW NOTIFICATIONS  
  For Daily Alerts

  ಮರಳಿ ಮನೆಗೆ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ

  |

  ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಕುಟುಂಬ ಕೊರೊನಾ ವೈರಸ್ ಸಂಕಿಗೆ ಒಳಗಾಗಿದ್ದರಿಂದ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಜಯಾ ಬಚ್ಚನ್ ಹೊರತುಪಡಿಸಿ ಉಳಿದ ನಾಲ್ವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಅಮಿತಾಬ್, ಅಭಿಷೇಕ್, ಐಶ್ವರ್ಯಾ ಹಾಗೂ ಅವರ ಮಗಳು ಆರಾಧ್ಯ ನಾಲ್ವರೂ ಆಸ್ಪತ್ರೆಗೆ ದಾಖಲಾಗಿದ್ದರು.

  ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

  ಆಸ್ಪತ್ರೆಗೆ ದಾಖಲಾಗಿ 15 ದಿನಗಳ ಬಳಿಕ ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯಾ ಬಚ್ಚನ್ ಇಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಹಿಂದಿರುಗಿದ್ದಾರೆ. ಅವರಿಗಿಂತ ಒಂದು ದಿನ ಮೊದಲೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದಾರೆ. ಮುಂದೆ ಓದಿ.

  ಆಸ್ಪತ್ರೆಯಲ್ಲಿರುವ ಅಮಿತಾಬ್ ಬಚ್ಚನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಆಸ್ಪತ್ರೆಯಲ್ಲಿರುವ ಅಮಿತಾಬ್ ಬಚ್ಚನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ

  ನೆಗೆಟಿವ್ ಬಂದಿದೆ

  ನೆಗೆಟಿವ್ ಬಂದಿದೆ

  ಪತ್ನಿ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾ ಇಬ್ಬರಲ್ಲಿಯೂ ಕೊರೊನಾ ವೈರಸ್ ತಪಾಸಣೆಯಲ್ಲಿ ನೆಗೆಟಿವ್ ಬಂದಿರುವುದಾಗಿ ಅಭಿಷೇಕ್ ಬಚ್ಚನ್ ಮಾಹಿತಿ ನೀಡಿದ್ದಾರೆ. ಆದರೆ ತಂದೆಯೊಂದಿಗೆ ತಾವಿನ್ನೂ ಆಸ್ಪತ್ರೆಯಲ್ಲಿ ಇರುವುದಾಗಿ ಹೇಳಿದ್ದಾರೆ.

  ಇಬ್ಬರೂ ಮನೆಗೆ ವಾಪಸ್

  ಇಬ್ಬರೂ ಮನೆಗೆ ವಾಪಸ್

  ನಿಮ್ಮೆಲ್ಲರ ನಿರಂತರ ಪ್ರಾರ್ಥನೆ ಹಾಗೂ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಈ ಋಣ ತೀರಿಸಲಾಗದ್ದು. ಐಶ್ವರ್ಯಾ ಮತ್ತು ಆರಾಧ್ಯಾ ಇಬ್ಬರಲ್ಲಿಯೂ ನೆಗೆಟಿವ್ ವರದಿ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರು ಮನೆಗೆ ಮರಳಿದ್ದಾರೆ. ನಾನು ಮತ್ತು ತಂದೆ ಇಬ್ಬರೂ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದೇವೆ ಎಂದು ಅಭಿಷೇಕ್ ಬಚ್ಚನ್ ತಿಳಿಸಿದ್ದಾರೆ.

  ಕೊರೊನಾ ವೈರಸ್: ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ ಆಸ್ಪತ್ರೆಗೆ ದಾಖಲುಕೊರೊನಾ ವೈರಸ್: ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ ಆಸ್ಪತ್ರೆಗೆ ದಾಖಲು

  ವಾರದ ಬಳಿಕ ಆಸ್ಪತ್ರೆಗೆ ದಾಖಲು

  ವಾರದ ಬಳಿಕ ಆಸ್ಪತ್ರೆಗೆ ದಾಖಲು

  ಅಭಿಷೇಕ್ ಮತ್ತು ಅಮಿತಾಬ್ ಬಚ್ಚನ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದರಿಂದ ಜುಲೈ 11ರಂದು ಆಸ್ಪತ್ರೆಗೆ ಕರೆತರಲಾಗಿತ್ತು. ಮರುದಿನ ಐಶ್ವರ್ಯಾ ರೈ ಹಾಗೂ ಆರಾಧ್ಯಾಳ ತಪಾಸಣೆಯ ವರದಿ ಬಂದಿದ್ದು, ಇಬ್ಬರಲ್ಲಿಯೂ ಪಾಸಿಟಿವ್ ಇತ್ತು. ಆದರೆ ಒಂದು ವಾರ ಅವರಿಬ್ಬರೂ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದರು. ಜುಕೈ 17ರಂದು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು.

  ನಿವಾಸದ ಸೀಲ್‌ಡೌನ್ ತೆರವು

  ನಿವಾಸದ ಸೀಲ್‌ಡೌನ್ ತೆರವು

  ಜಯಾ ಬಚ್ಚನ್ ಹಾಗೂ ಕುಟುಂಬದ ಇತರೆ ಸದಸ್ಯರಲ್ಲಿ ಕೊರೊನಾ ವೈರಸ್ ನೆಗೆಟಿವ್ ಬಂದಿತ್ತು. ಹೀಗಾಗಿ ಮುಂಬೈನ ಜಲ್ಸಾ ನಿವಾಸವನ್ನು ಮುಂಬೈ ಪಾಲಿಕೆ ಸೀಲ್ ಮಾಡಿತ್ತು. ಜತೆಗೆ ಬಚ್ಚನ್ ಮಾಲೀಕತ್ವದ ಇನ್ನೂ ಮೂರು ಬಂಗಲೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಜುಲೈ 26ರಂದು ಜಲ್ಸಾ ನಿವಾಸದ ತಡೆಗೋಡೆಗಳನ್ನು ತೆರವುಗೊಳಿಸಲಾಗಿತ್ತು.

  ಕೊರೊನಾ ವಿರುದ್ಧ ಗೆಲ್ಲುತ್ತಾರಾ ಅಮಿತಾಬ್? ಅವರಿಗಿರುವ ಆರೋಗ್ಯ ಸಮಸ್ಯೆಗಳೇನು?ಕೊರೊನಾ ವಿರುದ್ಧ ಗೆಲ್ಲುತ್ತಾರಾ ಅಮಿತಾಬ್? ಅವರಿಗಿರುವ ಆರೋಗ್ಯ ಸಮಸ್ಯೆಗಳೇನು?

  English summary
  Aishwarya Rai and her daughter Aaradhya tested negative for Coronavirus and Discharged from hospital, Abhishek Bachchan tweeted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X