ಎರಡನೇ ಮಗು ಬಗ್ಗೆ ಗುಲ್ಲೆಬ್ಬಿಸಬೇಡಿ: ಐಶ್ವರ್ಯಾ

By Rajendra

ಬಾಲಿವುಡ್ ತಾರೆ ಐಶ್ವರ್ಯಾ ರೈ ಬಚ್ಚನ್ ಅವರು ಎಲ್ಲರಲ್ಲೂ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಚೊಚ್ಚಲ ಮಗು ಆರಾಧ್ಯ ಹುಟ್ಟಿ ಎರಡು ವರ್ಷಗಳಾಗುತ್ತಿದೆ. ಮೂರನೇ ವರ್ಷಕ್ಕೆ ಆರಾಧ್ಯ ಅಡಿಯಿಡುವ ಸಿದ್ಧತೆಯಲ್ಲಿದೆ.

ಈ ಸಂದರ್ಭದಲ್ಲಿ ಎಲ್ಲರಿಗೂ ಐಶ್ವರ್ಯಾ ಎರಡನೇ ಮಗು ನಿರೀಕ್ಷೆಯಲ್ಲಿದ್ದಾರಾ ಎಂಬ ಸಣ್ಣ ಅನುಮಾನ ಬರುತ್ತದೆ. ಅವರು ಹೆಚ್ಚಾಗಿ ಚಿತ್ರಗಳಲ್ಲಿ ತೊಡಗಿಕೊಳ್ಳದೇ ಇರುವುದು ಅವರ ಎರಡನೇ ಮಗುವಿನ ಬಗ್ಗೆ ಎಲ್ಲಿಲ್ಲದ ಕುತೂಹಲ ಹುಟ್ಟುಹಾಕಿದೆ.

ಈ ಬಗ್ಗೆ ಸ್ಪಷ್ಟಪಡಿಸಿರುವ ಐಶ್ವರ್ಯಾ ರೈ ಬಚ್ಚನ್, "ಅಂತಹ ಸಂದರ್ಭ ಬಂದರೆ ಖಂಡಿತ ಎಲ್ಲರಿಗೂ ತಿಳಿಸುತ್ತೇನೆ. ಆದರೆ ಈಗಲೇ ಆ ಬಗ್ಗೆ ವದಂತಿಗಳನ್ನು ಹಬ್ಬಿಸಬೇಡಿ" ಎಂದು ಮನವಿಕೊಂಡಿದ್ದಾರೆ. ಇತ್ತೀಚೆಗೆ ತನ್ನ ಮಗು ಆರಾಧ್ಯಳ ಸ್ಟೆಮ್ ಸೆಲ್ ಸಂರಕ್ಷಿಸಿರುವ ಬಗ್ಗೆ ಘೋಷಿಸಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತರು, ಎರಡನೇ ಬಾರಿಯೂ ತಾವು ಸ್ಟೆಮ್ ಸೆಲ್ ಸಂರಕ್ಷಿಸುತ್ತೀರಾ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಐಶೂ, "ನಿಮ್ಮ ಪ್ರಶ್ನೆಯ ಒಳಾರ್ಥ ನನಗೆ ಅರ್ಥವಾಯಿತು. ಒಂದು ವೇಳೆ ಆ ರೀತಿಯ ಸಂದರ್ಭ ಬಂದರೆ ನಿಜಕ್ಕೂ ತಿಳಿಸುತ್ತೇನೆ. ಈಗಲೇ ಆ ಬಗ್ಗೆ ವದಂತಿ ಹಬ್ಬಿಸಬೇಡಿ" ಎಂದರು. (ಏಜೆನ್ಸೀಸ್)

More from Filmibeat

English summary
Actress Aishwarya Rai has urged everyone not to speculate about her second child after Aaradhya. She said that when such a moment comes she will make it known.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X