ಕೊರೊನಾದಿಂದ ಗುಣಮುಖರಾದ ಬಳಿಕ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಐಶ್ವರ್ಯ ರೈ

ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ಕುಟುಂಬ ಕೊರೊನಾ ಸೋಂಕಿಗೆ ಸುತ್ತಾಗಿರುವುದು ಅಭಿಮಾನಿಗಳಿಗೆ ಆತಂಕ ಮೂಡಿಸಿತ್ತು. ಅಮಿತಾಬ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯಗೆ ಕೊರೊನಾ ಪಾಸಿಟಿವ್ ಬಂದಿತ್ತು. ಎಲ್ಲರೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದರು.

ಇದೀಗ ಐಶ್ವರ್ಯ ರೈ ಮತ್ತು ಮಗಳು ಆರಾದ್ಯ ಕೊರೊನಾದಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಚ್ಚನ್ ಕುಟುಂಬ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಭಿಮಾನಿಗಳು, ಸ್ನೇಹಿತರು ಮತ್ತು ಆಪ್ತರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಇದೀಗ ಕೊರೊನಾದಿಂದ ಗುಣಮುಖರಾಗಿರುವ ಐಶ್ವರ್ಯ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಮುಂದೆ ಓದಿ...

ಅಭಿಮಾನಿಗಳಿಗೆ ಐಶ್ವರ್ಯ ಧನ್ಯವಾದ

ಅಭಿಮಾನಿಗಳಿಗೆ ಐಶ್ವರ್ಯ ಧನ್ಯವಾದ

ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ಐಶ್ವರ್ಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪಾತ್ರ ಬರೆದಿರುವ ಐಶ್ವರ್ಯ "ನನ್ನ ಪ್ರೀತಿಯ ದೇವತಿ (ಆರಾಧ್ಯ), ಪಾ (ಅಮಿತಾಬ್ ಬಚ್ಚನ್), ಎಬಿ (ಅಭಿಷೇಕ್ ಬಚ್ಚನ್) ಮತ್ತು ನನಗಾಗಿ ನೀವು ತೋರಿದ ಪ್ರೀತಿ, ಕಾಳಜಿ, ಶುಭಾಶಯಗಳಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.

ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ

ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ

"ನಿಮ್ಮೆಲ್ಲರ ಈ ಅಪಾರ ಪ್ರೀತಿಗೆ ನಾನು ಯಾವಾಗಲು ಚಿರಋಣಿಯಾಗಿರುತ್ತೇನೆ. ದೇವರು ನಿಮ್ಮೆಲ್ಲರಿಗೂ ಒಳ್ಳೆದು ಮಾಡಲಿ. ನಮ್ಮೆಲ್ಲರ ಪ್ರೀತಿ ಯಾವಾಗಲೂ ನಿಮ್ಮ ಮೇಲೆ ಇರಲಿದೆ. ನಿಮ್ಮೆಲ್ಲರ ಯೋಗಕ್ಷೇಮಕ್ಕಾಗಿ ನನ್ನ ಪ್ರಾರ್ಥನೆ. ನಿಜಕ್ಕೂ ಹೃದಯಪೂರ್ವಕಾಗಿ ಕೇಳಿಕೊಳ್ಳುತ್ತಿದ್ದೀನಿ ಚೆನ್ನಾಗಿರಿ, ಸುರಕ್ಷಿತವಾಗಿರಿ. ದೇವರು ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ" ಎಂದು ಬರೆದುಕೊಂಡಿದ್ದಾರೆ.

ಜುಲೈ 27ರಂದು ಐಶ್ವರ್ಯ ಡಿಸ್ಚಾರ್ಜ್

ಜುಲೈ 27ರಂದು ಐಶ್ವರ್ಯ ಡಿಸ್ಚಾರ್ಜ್

ಇದೆ ಸೋಮವಾರ ಅಂದರೆ ಜುಲೈ 27ರಂದು ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇನ್ನೂ ಆಸ್ಪತ್ರೆಯಲ್ಲಿಯೆ ಇದ್ದಾರೆ. ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಅಭಿಷೇಕ್ ಬಚ್ಚನ್ ಟ್ವೀಟ್

ಅಭಿಷೇಕ್ ಬಚ್ಚನ್ ಟ್ವೀಟ್

ಐಶ್ವರ್ಯ ಮತ್ತು ಆರಾಧ್ಯ ಡಿಶ್ಚಾರ್ಜ್ ಆದ ಬಳಿಕ ಅಭಿಷೇಕ್ ಬಚ್ಚನ್ ಸಹ ಟ್ವೀಟ್ ಮಾಡಿದ್ದರು. "ಪತ್ನಿ ಐಶ್ವರ್ಯ ಮತ್ತು ಮಗಳು ಆರಾಧ್ಯ ಡಿಸ್ಚಾರ್ಜ್ ಆಗಿದ್ದಾರೆ. ಮನೆಯಲ್ಲಿ ಇದ್ದಾರೆ. ನನ್ನ ತಂದೆ ಮತ್ತು ನಾನು ಆಸ್ಪತ್ರೆಯಲ್ಲಿ ವೈದ್ಯರ ಆರೈಕೆಯಲ್ಲಿದ್ದೀವಿ" ಎಂದು ಹೇಳಿದ್ದರು. ಅಮಿತಾಬ್ ಸಹ ಸೊಸೆ ಮತ್ತು ಮೊಮ್ಮಗಳು ಡಿಸ್ಚಾರ್ಜ್ ಆದ ಸಂತೋಷಕ್ಕೆ ಕಣ್ಣೀರಾಕಿದ್ದರು.

More from Filmibeat

English summary
Actress Aishwarya Rai emotional note for fans after discharge from Hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X