2 ವರ್ಷಗಳ ಬಳಿಕ ವಿದೇಶಿಕ್ಕೆ ಹಾರುತ್ತಿರುವ ನಟಿ ಐಶ್ವರ್ಯಾ ರೈ: ಕಾರಣವೇನು?
ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮತ್ತೆ ಸುದ್ದಿಯಲ್ಲಿದ್ದಾರೆ. ಐಶ್ವರ್ಯಾ ರೈ ಸದ್ಯ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಪೊನ್ನಿಯಮ್ ಸೆಲ್ವನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ತನ್ನ ಭಾಗದ ಚಿತ್ರೀಕರಣ ಮುಗಿಸಿರುವ ಐಶ್ವರ್ಯಾ ರೈ ಇದೀಗ ವಿದೇಶಿ ಪಯಣ ಬೆಳಸುತ್ತಿದ್ದಾರೆ.
ಅಂದಹಾಗೆ ಐಶ್ವರ್ಯಾ ರೈ ಭಾರತ ಬಿಟ್ಟು ವಿದೇಶಕ್ಕೆ ಹಾರದೆ 2 ವರ್ಷಗಳ ಮೇಲಾಗಿದೆ. ಕೊರೊನಾ ಬಳಿಕ ಐಶ್ವರ್ಯಾ ರೈ ಯಾವ ದೇಶಕ್ಕೂ ಹೋಗಿಲ್ಲ. ಇದೀಗ ಕೊರೊನಾ ಬಳಿಕ ಮೊದಲ ಬಾರಿಗೆ ಐಶ್ವರ್ಯಾ ರೈ ವಿದೇಶಕ್ಕೆ ಹಾರುತ್ತಿದ್ದಾರೆ. ಅಕ್ಟೋಬರ್ 3ರಂದು ಪ್ಯಾರಿಸ್ ಮತ್ತು ಅಕ್ಟೋಬರ್ 5ಕ್ಕೆ ದುಬೈಗೆ ತೆರಳುತ್ತಿದ್ದಾರೆ.
ಅಂದಹಾದೆ ಐಶ್ವರ್ಯಾ ದಿಢೀರ್ ವಿದೇಶಿ ಪ್ರವಾಸ ಕೈಗೊಂಡ ಕಾರಣ ವಿಶೇಷವಾದ ಈವೆಂಟ್ ನಲ್ಲಿ ಭಾಗವಹಿಸಲು. ಫ್ರೆಂಚ್ ನ ಪರ್ಸನಲ್ ಕೇರ್ ಬ್ರಾಂಡ್ ನ ಈವೆಂಟ್ ಗಾಗಿ ಐಶ್ವರ್ಯಾ ವಿದೇಶಕ್ಕೆ ಹೋಗುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಐಶ್ವರ್ಯಾ ತನ್ನ ಮಗಳು ಆರಾಧ್ಯಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ.

ಎರಡು ವರ್ಷಗಳಿಂದ ಐಶ್ವರ್ಯಾ ಎಲ್ಲಿಗೂ ಪ್ರಯಾಣ ಬೆಳೆಸಿರಲಿಲ್ಲ. 2019ರ ಬಳಿಕ ಮೊದಲ ಬಾರಿಗೆ ಐಶ್ ವಿದೇಶಕ್ಕೆ ಹೋಗುತ್ತಿದ್ದಾರೆ. ಕೊರೊನಾ ಬಳಿಕ ಸುರಕ್ಷತೆ ಕಡೆ ಗಮನಹರಿಸಿದ್ದ ಐಶ್ವರ್ಯಾ ಎಲ್ಲಿಯೂ ಹೋಗುತ್ತಿರಲಿಲ್ಲ. ಇದೀಗ ಐಶ್ವರ್ಯಾ ಎರಡು ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.
ಎರಡು ಕಾರ್ಯಕ್ರಮದಲ್ಲಿ ಐಶ್ವರ್ಯ ಭಾಗಿಯಾಗುತ್ತಿದ್ದಾರೆ. ಈ ಎರಡು ಕಾರ್ಯಕ್ರಮಗಳಲ್ಲೂ ಐಶ್ವರ್ಯಾ ವಿಭಿನ್ನ ಶೈಲಿಯ ಬಟ್ಟೆ ಧರಿಸಿ ಗಮನಸೆಳೆಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಗತ್ತಿನ ಪ್ರಸಿದ್ಧ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಪ್ಯಾರಿಸ್ ನಲ್ಲಿ ಈವೆಂಟ್ ಮುಗಿಸಿ ಬಳಿಕ ದುಬೈಗೆ ಹಾರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಮತ್ತು ಪುರುಷರು ಭಾಗಿಯಾಗುವ ನಿರೀಕ್ಷೆ ಇದೆ.
ಐಶ್ವರ್ಯಾ ರೈ ಕೊನೆಯದಾಗಿ 2019ರ ಕ್ಯಾನ್ ಚಲನಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದರು. ರೆಡ್ ಕಾರ್ಪೆಟ್ ಮೇಲೆ ನಡೆದು ವಿಶ್ವದ ಗಮನ ಸೆಳೆದಿದ್ದರು. ಬಳಿಕ ತನ್ನ ಹಟ್ಟುಹಬ್ಬ ಆಚರಣೆಗೆಂದು ಐಶ್ವರ್ಯಾ ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜೊತೆ ರೋಮ್ ಪ್ರವಾಸ ಕೈಗೊಂಡಿದ್ದರು. ಬಳಿಕ ಐಶ್ವರ್ಯಾ ಯಾವುದೇ ಪ್ರವಾಸಕೈಗೊಂಡಿಲ್ಲ. ಇದೀಗ ಎರಡು ವರ್ಷಗಳ ಬಳಿಕ ವಿದೇಶಕ್ಕೆ ಹೋಗುತ್ತಿರುವ ಉತ್ಸಾಹದಲ್ಲಿದ್ದಾರೆ ಐಶ್ವರ್ಯಾ.
ಐಶ್ವರ್ಯಾ ರೈ ಸಿನಿಮಾದಿಂದನೂ ಅಂತರ ಕಾಯ್ದುಕೊಂಡಿದ್ದಾರೆ. ಬಾಲಿವುಡ್ ನಿಂದ ದೂರ ಇರುವ ಐಶ್ವರ್ಯಾ ಮತ್ತೆ ತಮಿಳು ಚಿತ್ರರಂಗದ ಕಡೆ ಮರಳಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ಲುಕ್ ಲೀಕ್ ಆಗಿದ್ದು, ರಾಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಐಶ್ವರ್ಯಾರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.


Click it and Unblock the Notifications











