ಹೋಳಿ ಸಂಭ್ರಮ 2020: ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಸಿನಿ ತಾರೆಯರು

ಬಣ್ಣದ ಜೊತೆ ಆಡುವ ಆಟ ಹೋಳಿ. ಯಾವುದೆ ಜಾತಿ ಮತಗಳ ಭೇದವಿಲ್ಲದೆ, ಹಿರಿಯರು ಕಿರಿಯರೆನ್ನದೆ ಎಲ್ಲರೂ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿ ಆಡುವುದೆ ಹೋಳಿ. ಭಾರತದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಹೋಳಿ ಹಬ್ಬವನ್ನು ಕಾಮನ ಹಬ್ಬ ಅಂತಲೂ ಕರೆಯುತ್ತಾರೆ.

Recommended Video

ಅದ್ಧೂರಿ ಮದುವೆಯಲ್ಲಿ ನವ ಜೋಡಿಗೆ ಹರಸಿದ ಸುದೀಪ್ | Sudeep | Sriramulu Marriage

ಬಣ್ಣಗಳ ಜೊತೆ ಆಡುವ ರಂಗು ರಿಂಗಿನ ಹಬ್ಬವನ್ನು ಸಿನಿ ತಾರೆಯರು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೋಳಿ ಆಚರಣೆಯ ಫೋಟೋಗಳನ್ನು ಹಂಚಿಕೊಂಡು, ಅಭಿಮಾನಿಗಳಿಗೂ ಶುಭಕೋರುತ್ತಿದ್ದಾರೆ. ಬಾಲಿವುಡ್ ಕಲಾವಿದರಾದ ದೀಪಿಕಾ ಪಡುಕೋಣೆ, ಶಿಲ್ಪ ಶೆಟ್ಟಿ, ಪ್ರಿಯಾಂಕಾ ಚೋಪ್ರಾ, ಸೋನಾಲಿ ಬೇಂದ್ರೆ, ವಿಕ್ಕಿ ಕೌಸಲ್, ರಾಜು ಕುಮಾರ್ ರಾವ್, ತೆಲುಗು ನಟರಾದ ಜ್ಯೂ.ಎನ್ ಟಿ ಆರ್, ಮಹೇಶ್ ಬಾಬು ಸೇರಿದಂತೆ ಸಾಕಷ್ಟು ಮಂದಿ ರಂಗು ರಂಗಿನ ಹೋಳಿಯಲ್ಲಿ ಮಿಂದೆದ್ದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಹೋಳಿ ಆಚರಣೆ

ಪ್ರಿಯಾಂಕಾ ಚೋಪ್ರಾ ಹೋಳಿ ಆಚರಣೆ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೋಳಿ ಆಚರಣೆಗಾಗಿ ಯು ಎಸ್ ನಿಂದ ಮುಂಬೈಗೆ ಬಂದಿದ್ದಾರೆ. ಎರಡು ದಿನಗಳ ಮುಂಚೆಯೆ ಪ್ರೀಯಾಂಕಾ ಪತಿಯ ಜೊತೆಯ ಜೊತೆ ಹೋಳಿ ಆಚರಣೆ ಮಾಡಿದ್ದಾರೆ. ಪ್ರಿಯಾಂಕಾ ಜೊತೆ ಇಡಿ ಬಾಲಿವುಡ್ ಸಂಭ್ರಮದಲ್ಲಿ ಭಾಗಿಯಾಗಿತ್ತು. ಈ ಭಾರಿ ಅದ್ದೂರಿಯಾಗಿ ಹೋಳಿ ಆಚರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಐಶ್ವರ್ಯ ರೈ

ಐಶ್ವರ್ಯ ರೈ

ಬಾಲಿವುಡ್ ನಟಿ ಐಶ್ವರ್ಯ ರೈ ಕುಟುಂಬದ ಜೊತೆ ಹೋಳಿ ಆಚರಣೆ ಮಾಡಿದ್ದಾರೆ. ಕಾಮದಹನ ಮಾಡಿ ಸಂಭ್ರಮಿಸಿದ್ದಾರೆ. ಬಣ್ಣದ ಆಟದ ಫೋಟೋವನ್ನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶಿಲ್ಪ ಶೆಟ್ಟಿ

ಶಿಲ್ಪ ಶೆಟ್ಟಿ

"ಈ ರಂಗು ರಂಗಿನ ಹೋಳಿ ನಿಮ್ಮ ಜೀವನದ ಎಲ್ಲ ನಕರಾತ್ಮಕತೆಯನ್ನು ಹೋಗಲಾಡಿಸಿ, ಸಕರಾತ್ಮಕತೆ ತರಲಿ. ಹೆಚ್ಚು ಸಂತೋಷ ಸಿಗಲಿ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು" ಎಂದು ಅಭಿಮಾನಿಗಳಿಗೆ ಸಂದೇಶ ಕಳುಹಿಸಿಸುವ ಜೊತೆತೆ ಹೋಳಿಯನ್ನು ಸಂಭ್ರಮಿಸಿದ್ದಾರೆ.

ಜೂ.ಎನ್ ಟಿ ಆರ್

ಜೂ.ಎನ್ ಟಿ ಆರ್

ಟಾಲಿವುಡ್ ಖ್ಯಾತ ನಟ ಜೂ.ಎನ್ ಟಿ ಆರ್ ಕುಟುಂಬದ ಜೊತೆ ಹೋಳಿಯನ್ನು ಸಂಭ್ರಮಿಸಿದ್ದಾರೆ. ಪತ್ನಿ ಮತ್ತು ಮಕ್ಕಳ ಜೊತೆ ರಂಗು ರಂಗಿನ ಬಣ್ಣದ ಆಟ ಆಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಎಲ್ಲರಿಗೂ ಹೋಳಿ ಶುಭಾಶಯ ತಿಳಿಸಿದ್ದಾರೆ.

ಹೃತಿಕ್ ರೋಷನ್

ಹೃತಿಕ್ ರೋಷನ್

ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಹೋಳಿ ಆಟವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಪತ್ನಿ ಜೊತೆ ಹೋಳಿ ಆಡಿರುವ ಹೃತಿಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಕುಟುಂಬದವರು ಮತ್ತು ಸ್ನೇಹಿತರು ಕೂಡ ಹೃತಿಕ್ ಜೊತೆ ರಂಗೀನ್ ಆಟದಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
Bollywood Actors like Aishwarya Rai, Hritik Roshan, Priyanka Chopra, Shilpa Shetty and other stars celebrated Holi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X