For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ತಾರೆ ಐಶ್ವರ್ಯ ರೈ 'ಆದರ್ಶ ತಾಯಿ'

  By Rajendra
  |

  ಅಮ್ಮನಾಗಿ ಬಡ್ತಿ ಪಡೆದಿರುವ ಬಾಲಿವುಡ್ ಮೋಹಕ ತಾರೆ ಐಶ್ವರ್ಯ ರೈ ಅವರು ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಬಾಲಿವುಡ್‌ ಅಗ್ರ ಶ್ರೇಣಿಯ ತಾರೆಗಳಲ್ಲಿ ಯಾರು 'ಆದರ್ಶ ತಾಯಿ' ಎಂಬ ಸಮೀಕ್ಷೆಯಲ್ಲಿ ಐಶ್ವರ್ಯ ರೈ ಅವರಿಗೆ ಅತ್ಯಧಿಕ ಮತಗಳು ಬಿದ್ದಿವೆ.

  ಈ ಮೂಲಕ ಅವರು ಬಾಲಿವುಡ್‌ನಲ್ಲಿ ಆದರ್ಶ ತಾಯಿಯಾಗಿ ಹೊರಹೊಮ್ಮಿದ್ದಾರೆ. ಈ ಸಮೀಕ್ಷೆಯನ್ನು ವಿವಾಹಕ್ಕೆ ಸಂಬಂಧಿಸಿದ ಜನಪ್ರಿಯ ತಾಣ ಶಾದಿ ಡಾಟ್ ಕಾಮ್ ನಡೆಸಿತ್ತು. ಮತದಾನದಲ್ಲಿ 38ರ ಪ್ರಾಯದ ಐಶ್ವರ್ಯ ರೈ ಅವರಿಗೆ ಶೇ.54ರಷ್ಟು ಮತಗಳು ಬಿದ್ದಿವೆ.

  ಸ್ಪರ್ಧೆಯಲ್ಲಿದ್ದ ಕರೀಷ್ಮಾ ಕಪೂರ್ ಅವರ ಮಡಿಲಿಗೆ ಶೇ.27ರಷ್ಟು ಮತಗಳು ಸೇರಿವೆ. ಕಣದಲ್ಲಿ ಬಾಲಿವುಡ್ ತಾರೆ ಅಮ್ಮಂದಿರಾದ ಮಲೈಕಾ ಅರೋರಾ ಖಾನ್ ಹಾಗೂ ಲಾರಾ ದತ್ತ ಕೂಡ ಇದ್ದರು. ಅತ್ಯುತ್ತಮ ತಾಯಿ ಮತ್ತು ಮಗಳ ಜೋಡಿ ಪ್ರಶಸ್ತಿಯು ಮಾಜಿ ಕನಸಿನ ಕನ್ಯೆ ಹೇಮಾ ಮಾಲಿನಿ ಹಾಗೂ ಇಷಾ ಡಿಯೋಲ್ ಪಾಲಾಗಿದೆ. (ಏಜೆನ್ಸೀಸ್)

  English summary
  Actress Aishwarya Rai tops the list of the ideal celebrity mothers in Bollywood, a status she shares with her Hollywood counterpart Angelina Jolie, according to Shaadi.com survey. Altogether 54% of the respondents voted for the former Miss World followed by Karisma Kapoor who got 27 % votes as the ideal mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X