ವಿಚ್ಛೇದನ ವದಂತಿ ಬೆನ್ನಲ್ಲೇ ಮಗಳೊಂದಿಗೆ ಗಂಡನ ಮನೆ ಬಿಟ್ಟು ಹೊರಬಂದ ನಟಿ ಐಶ್ವರ್ಯಾ ರೈ ಬಚ್ಚನ್
ಕಳೆದ ಕೆಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿ ಹರಡುತ್ತಿತ್ತು. ಅದಕ್ಕೆ ಕಾರಣ ಹದಿನಾರು ವರ್ಷದಿಂದ ವೈವಾಹಿಕ ಬಂಧನದಲ್ಲಿ ಒಂದಾಗಿರುವ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಕೆಲವು ಕಹಿ ಘಟನೆಗಳು. ಬಚ್ಚನ್ ಕುಟುಂಬ ಮತ್ತು ನಟಿ ಐಶ್ವರ್ಯಾ ರೈ ಅವರ ನಡುವೆ ಬಿರುಕು ಇರುವುದು ಮತ್ತೆ ಸಾಬೀತಾಗಿದೆ.
ಇತ್ತೀಚೆಗೆ 'ದಿ ಆರ್ಚೀಸ್' ಸಿನಿಮಾದ ಪ್ರೀಮಿಯರ್ ನೈಟ್‌ನಲ್ಲಿ ಇಡೀ ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜಂಟಿಯಾಗಿ ಕಾಣಿಸಿಕೊಂಡಿದ್ದರು. ಆಗ ಈ ವದಂತಿಗಳು ನಿಂತಿದ್ದವು. ಆದರೆ, ಇತ್ತೀಚಿನ ವರದಿಯ ಪ್ರಕಾರ ಐಶ್ವರ್ಯಾ ರೈ ಮತ್ತು ಅಭಿಷೇಕ್ ಅವರು ವಿಚ್ಛೇದನ ತೆಗೆದುಕೊಳ್ಳಬಹುದು ಎಂದು ಸೂಚಿಸುತ್ತವೆ.

ಬಚ್ಚನ್‌ನ ಮನೆ ಬಿಟ್ಟ ನಟಿ ಐಶ್ವರ್ಯಾ ರೈ!
ನಟಿ ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಅವರ ಮನೆಯನ್ನು ಬಿಟ್ಟು ಹೊರ ಬಂದಿದ್ದಾರೆ ಎಂದು ಹಲವು ಮಾಧ್ಯಮಗಳು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. 'ಜೂಮ್' ವರದಿ ಪ್ರಕಾರ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಸಂಬಂಧ ನಿರ್ಣಾಯಕ ಘಟ್ಟಕ್ಕೆ ಬಂದಿದೆ. ಬಚ್ಚನ್ ಕುಟುಂಬಕ್ಕೆ ಹತ್ತಿರವಿರುವ ಮೂಲವೊಂದು ಇಬ್ಬರು ತಮ್ಮ ಮಗಳು ಆರಾಧ್ಯ ಅವರ ಕಾರಣದಿಂದಾಗಿ ಒಟ್ಟಿಗೆ ಇದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಇದಲ್ಲದೆ, ಐಶ್ವರ್ಯಾ ರೈ ಬಚ್ಚನ್ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಬಚ್ಚನ್ ಕುಟುಂಬದ ಮನೆ ಜಲ್ಸಾದಿಂದ ಹೊರಬಂದಿದ್ದಾರೆ. ತಮ್ಮ ಸಮಯವನ್ನು ಅವರ ತಾಯಿ ವೃಂದಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಮಾನವಾಗಿ ಹಂಚುತ್ತಿದ್ದಾರೆ ಎಂದು ಹೇಳಲಾಗಿದೆ. ತನ್ನ ಅತ್ತೆ ಜಯಾ ಬಚ್ಚನ್ ಅವರೊಂದಿಗೆ ಸಂಬಂಧ ಕಡಿದುಕೊಂಡಿದ್ದಾರೆ.

ಜಯಾ ಬಚ್ಚನ್ ಜೊತೆಗೆ ಸಂಬಂಧ ಕಡಿದುಕೊಂಡ ಐಶ್ವರ್ಯಾ ರೈ!?
ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಬಚ್ಚನ್ ಕುಟುಂಬದಲ್ಲಿನ ಈ ಬಿರುಕಿಗೆ ಅತ್ತೆ- ಸೊಸೆ ಜಗಳವೇ ಕಾರಣ ಎನ್ನಲಾಗಿದೆ. ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ಇಬ್ಬರು ಒಬ್ಬರನ್ನೊಬ್ಬರು ಮಾತನಾಡಿಸುವುದಿಲ್ಲ. ಇದು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಿದೆ. ಜೊತೆಗೆ ಮನೆಯಲ್ಲಿ ಶ್ವೇತಾ ಬಚ್ಚನ್ ಶಾಶ್ವತವಾಗಿರುವುದು ಕೂಡ ಬಿರುಕಿಗೆ ಕಾರಣ ಎಂದು ವರದಿಗಳಿವೆ.
ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ನಡುವೆ ಮೊದಲಿನಿಂದಲೂ ಕೂಡ ಹೊಂದಾಣಿಕೆ ಇರಲಿಲ್ಲ. ಅದು ಹಲವು ಸಂದರ್ಭಗಳಲ್ಲಿ ಹೊರ ಬಂದಿದೆ. ಐಶ್ವರ್ಯಾ ಅವರು ಮದುವೆ ನಂತರ ಸಿನಿಮಾಗಳಲ್ಲಿ ನಟಿಸಿದ್ದರ ಬಗ್ಗೆ, ಅವರ ಪಾತ್ರಗಳ ಬಗ್ಗೆ ಕೂಡ ಜಯಾ ಬಚ್ಚನ್ ಅಸಮಾಧಾನ ಹೊರಹಾಕಿದ್ದರು. ಅದು ಈಗ ಮತ್ತಷ್ಟು ದೊಡ್ಡದಾಗಿದೆ.
ಆರಾಧ್ಯಾಗೆ ತಂದೆಗಿಂತ ತಾಯಿಯ ಕಡೆ ಹೆಚ್ಚು ಸೆಳೆತ
ಇತ್ತ, ಅಭಿಷೇಕ್ ಬಚ್ಚನ್ ಅವರು ತಮ್ಮ ಕುಟುಂಬದ ಕಡೆಗೆ ಮಗನಾಗಿ ತಮ್ಮ ಜವಾಬ್ದಾರಿಯನ್ನು ಮತ್ತು ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಗಂಡನಾಗಿ ತನ್ನ ಕರ್ತವ್ಯ ನಿರ್ವಹಿಸಬೇಕು ಎಂದು ಒದ್ದಾಡುತ್ತಿರುವಂತಿದೆ. ಇತ್ತೀಚೆಗೆ, ಐಶ್ವರ್ಯಾ ರೈ ಬಚ್ಚನ್ ಇಡೀ ಬಚ್ಚನ್ ಕುಟುಂಬದೊಂದಿಗೆ ದಿ ಆರ್ಚೀಸ್ ಚಲನಚಿತ್ರ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿ, ಆರಾಧ್ಯ ತಂದೆ ಅಭಿಷೇಕ್ ಜೊತೆಗೆ ಫೋಟೋಗೆ ಪೋಸ್ ನೀಡಿದ್ದರೂ ಸಹ ಆರಾಧ್ಯ ತನ್ನ ತಾಯಿ ಐಶ್ವರ್ಯಾ ಕಡೆಗೆ ಒಲವು ತೋರಿದ್ದನ್ನು ನೆಟ್ಟಿಗರು ಗಮನಿಸಿದ್ದರು.


Click it and Unblock the Notifications











