ಐಶ್ವರ್ಯ ರೈ ಸಿನಿಮಾಗಳು ಸೋತಿದ್ದಕ್ಕೆ ಇಂತಹ ಶಿಕ್ಷೆ.!
ಬಾಲಿವುಡ್ ನ ಅದೃಷ್ಟ ತಾರೆ ಐಶ್ವರ್ಯ ರೈಗೆ ಈಗ ಲಕ್ ಕೈಕೊಟ್ಟಿದೆ. ಸತತ ಸೋಲಿನಿಂದ ಮತ್ತೆ ಕಂಗೆಟ್ಟಿದ್ದಾರೆ. ಮಾಜಿ ವಿಶ್ವ ಸುಂದರಿಯ ಚಿತ್ರಗಳಿಗೆ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಇಲ್ಲ, ಥಿಯೇಟರ್ ನಲ್ಲಿ ಪ್ರೇಕ್ಷಕನಿಲ್ಲದೇ ನಿರ್ಮಾಪಕರು ನಷ್ಟ ಅನುಭವಿಸುವಂತಾಗುತ್ತಿದೆ.
ಇದರ ಪರಿಣಾಮ ಐಶ್ವರ್ಯ ರೈ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಹೌದು, ಆರಾಧ್ಯಗೆ ಜನ್ಮ ಕೊಟ್ಟ ನಂತರ ಐಶ್ವರ್ಯ ಅವರ ಕಂಬ್ಯಾಕ್ ಗಾಗಿ ಇಡೀ ಬಿಟೌನ್ ಕಾದು ಕುಂತಿತ್ತು. ನಂತರ ಅಭಿಮಾನಿಗಳ ಆಸೆಯಂತೆ ಬಚ್ಚನ್ ಸೊಸೆ ರೀ-ಎಂಟ್ರಿ ಕೊಟ್ಟರು.
ಸಂಜಯ್ ಗುಪ್ತಾ ಅವರ 'ಜಜ್ಬಾ' ಚಿತ್ರದ ಮೂಲಕ ಹೊಸ ಇನ್ನಿಂಗ್ ಆರಂಭಿಸಿದ್ದರು. ಆದ್ರೆ, ಆ ಸಿನಿಮಾ ನಿರೀಕ್ಷೆಯ ಮಟ್ಟದ ಯಶಸ್ಸು ಗಳಿಸಿಲ್ಲ. ನಂತರ ಓಮಂಗ್ ಕುಮಾರ್ ಅವರ 'ಸರ್ಬಿಜಿತ್' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾನೂ ಮ್ಯಾಜಿಕ್ ಮಾಡಲಿಲ್ಲ.

ಇತ್ತೀಚಿಗಷ್ಟೆ ಅನಿಲ್ ಕಪೂರ್ ಅಭಿನಯದ 'ಫನ್ನಿ ಖಾನ್' ಸಿನಿಮಾದಲ್ಲಿ ಐಶ್ವರ್ಯ ರೈ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು. ಅಂತಿಮವಾಗಿ ಈ ಸಿನಿಮಾನೂ ಕಳಪೆ ಪ್ರದರ್ಶನ ಕಂಡು ದೊಡ್ಡ ನಷ್ಟ ಅನುಭವಿಸುವಂತಾಯಿತು.
ಹೀಗೆ, ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಐಶ್ ಮೇಲೆ ಬಾಲಿವುಡ್ ನಿರ್ಮಾಪಕರು ನಂಬಿಕೆ ಕಳೆದುಕೊಂಡಂತೆ ಕಾಣುತ್ತಿದೆ. ಅದರ ಮೊದಲ ಹಂತವೆಂಬಂತೆ ಐಶ್ ನಟಿಸಬೇಕಿದ್ದ ಪಾತ್ರಕ್ಕೆ ಹೊಸ ನಟಿಯರನ್ನ ಕರೆತರುವ ಮಾತು ಕೇಳಿ ಬಂದಿದೆ.

ಅರ್ಜುನ್ ಎನ್ ಕಪೂರ್ ಅವರ ನಿರ್ದೇಶನ ಮಾಡಿ, ನಟಿಸಬೇಕಿದ್ದ 'ವೊ ಕೌನ್ ಥಿ' ಚಿತ್ರಕ್ಕೆ ಐಶ್ವರ್ಯ ರೈ ಸಹಿ ಮಾಡಿದ್ದರು. ಸದ್ಯದ ಮಾಹಿತ ಪ್ರಕಾರ ಈ ಸಿನಿಮಾದಿಂದ ಐಶ್ ಹೊರಬಂದಿದ್ದಾರೆ ಎನ್ನಲಾಗಿದೆ. ಐಶ್ವರ್ಯ ಜಾಗಕ್ಕೆ ಕೃಷ್ಣಸುಂದರಿ ಬಿಪಾಶ ಬಸು ಆಯ್ಕೆಯಾಗಿದ್ದಾರಂತೆ. ಇದರ ಜೊತೆಗೆ ಶೈಲೇಶ್ ಕುಮಾರ್ ಪ್ರಾಜೆಕ್ಟ್ ನಲ್ಲಿ ಐಶ್ ಬದಲಿಗೆ ತಾಪ್ಸಿ ಪೆನ್ನುಗೆ ಅವಕಾಶ ಕೊಡುವ ಬಗ್ಗೆ ನಿರ್ಧರಿಸಲಾಗಿದೆಯಂತೆ.
ಐಶ್ವರ್ಯ ಅವರ ಇತ್ತೀಚಿನ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲ. ಈ ಕಾರಣದಿಂದ ಈ ಪ್ರಾಜೆಕ್ಟ್ ಕೈ ತಪ್ಪಿದೆ ಎಂದು ಮೂಲಗಳು ತಿಳಿಸುತ್ತಿದೆ. ಸದ್ಯಕ್ಕೆ, ಅನುರಾಗ್ ಕಶ್ಯಪ್ ಅವರ 'ಗುಲಾಬ್ ಜಾಮೂನ್' ಚಿತ್ರದಲ್ಲಿ ಪತಿ ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯ ರೈ ನಟಿಸಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications










