ಗಣಪತಿ ವಿಸರ್ಜನೆಯಲ್ಲಿ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಸಕತ್ ಡ್ಯಾನ್ಸ್

ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಸಂಕೋಚ ಸ್ವಭಾವದ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ಒಬ್ಬರೇ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಮತ್ತು ಹೆಚ್ಚಾಗಿ ಮಾತನಾಡದೇ ಇರುವುದೇ ಜನರನ್ನು ಆರಾಧ್ಯ ಕಡೆಗೆ ಸೆಳೆಯುತ್ತದೆ.

ಆರಾಧ್ಯ ಬಚ್ಚನ್ ಇತ್ತೀಚೆಗೆ, ಗಣಪತಿ ವಿಸರ್ಜನೋತ್ಸವದ ಮುನ್ನಾದಿನದಂದು ಮುಂಬೈನ ತನ್ನ ಶಾಲೆಯಲ್ಲಿ ನೃತ್ಯ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳು ಆರಾಧ್ಯ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ.

aaradhya-bachchan-dances

ಇತ್ತೀಚೆಗೆ, ಶಾಲೆಯಲ್ಲಿ ನಡೆಸಲಾದ ಗಣೇಶ ವಿಸರ್ಜನೆ ಸಮಯದಲ್ಲಿ ತಮ್ಮ ಸಹಪಾಠಿಗಳೊಂದಿಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆರಾಧ್ಯ ಅವರು ನೃತ್ಯ ಮಾಡುವಾಗ ಬಿಳಿ ಕುರ್ತಾ ಧರಿಸಿದ್ದಾರೆ. ಜೊತೆಗೆ ಕೆಂಪು ದುಪ್ಪಟ್ಟಾ ಧರಿಸಿದ್ದಾರೆ. ನೃತ್ಯದ ಜೊತೆಗೆ ಆರಾಧ್ಯ ತನ್ನ ಸ್ನೇಹಿತರ ಜೊತೆಗೆ ಸೇರಿ ಗಣಪತಿ ವಿಗ್ರಹವನ್ನು ಅಲಂಕರಿಸಿದ್ದಾರೆ. ಚಿತ್ರಗಳನ್ನು ಮೂಲತಃ ಶಾಲೆಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಆರಾಧ್ಯ ಬಚ್ಚನ್ ಹೊಸ ಹೇರ್ ಸ್ಟೈಲ್

ನಟಿ ಐಶ್ವರ್ಯಾ ರೈ ಮಗಳು ಆರಾಧ್ಯ ಹೆಚ್ಚಾಗಿ ತಮ್ಮ ಕುಟುಂಬ ಮತ್ತು ತಾಯಿಯ ಜೊತೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಅನೇಕ ಅಭಿಮಾನಿಗಳು ಕೂಡ ಟೀಕಿಸಿದ್ದಾರೆ. ಮಗಳಿಗೆ ಕೊಂಚವು ಸ್ವಾತಂತ್ರ್ಯ ನೀಡುವುದಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ಗಾಗೆ ಜನ ಪ್ರಶ್ನಿಸುತ್ತಾರೆ. ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 2011 ರಲ್ಲಿ ಆರಾಧ್ಯ ಜನಿಸಿದ್ದರು.

aaradhya-bachchan-dances

ಇದರ ಜೊತೆಗೆ ಆರಾಧ್ಯ ಬಚ್ಚನ್ ಮತ್ತಷ್ಟು ಟ್ತೋಲ್ ಆಗುವುದು ಆಕೆಯ ಹೇರ್ ಸ್ಟೈಲ್ ಕಾರಣಕ್ಕೆ. ಎಸ್...ಯಾವಾಗ ನೋಡಿದರೂ ಹಣೆಯನ್ನು ಮುಚ್ಚುವಂತೆ ಮುಂಬದಿಯ ಕೂಡಲು ಮತ್ತೆ ಲೂಸ್ ಹೇರ್ ಸ್ಟೈಲ್ ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ, ಈಗ ಗಣಪತಿ ವಿಸರ್ಜನೆ ಸಮಯದ ಫೋಟೋದಲ್ಲಿ ಸ್ವಲ್ಪ ಬದಲಾವಣೆಯಾಗಿದೆ.

ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಆರಾಧ್ಯ ಬಚ್ಚನ್, ತಮ್ಮ ಹೇರ್ ಸ್ಟೈಲ್ ಅನ್ನು ಕೊಂಚ ಬದಲಿಸಿದ್ದಾರೆ. ಯಾವಾಗಲೂ ಲೂಸ್ ಹೇರ್ ಸ್ಟೈಲ್ ನಲ್ಲಿಯೇ ಕಾಣಿಸುತ್ತಿದ್ದ ಅವರು, ಕೂದನ್ನು ಮೇಲೆ ಎತ್ತಿ ಪೋನಿಟೇಲ್ ಕಟ್ಟಿಕೊಂಡಿದ್ದಾರೆ. ಜೊತೆಗೆ ಕ್ಯೂಟ್ ಆದ ಬಿಳಿ ಬಣ್ಣದ ಹೇರ್ ಬ್ಯಾಂಡ್ ಹಾಕಿಕೊಂಡಿದ್ದಾರೆ. ಇದು ಹಲವರಿಗೆ ಇಷ್ಟವಾಗಿದೆ.

ಐಶ್ವರ್ಯಾ ರೈರನ್ನು 'ಐಶ್ವಲ್ಯ ಲೈ' ಎಂದ ಅಭಿಮಾನಿ, ತಿರುಗಿ ನೋಡಿದ ಆರಾಧ್ಯ

ಇತ್ತೀಚೆಗಷ್ಟೇ ಆರಾಧ್ಯ ಅವರ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ಗಣಪತಿ ದರ್ಶನಕ್ಕೆ ಬಚ್ಚನ್ ಕುಟುಂಬ ತೆರಳಿತ್ತು. ಅಪಾರ ಜನಸಂದಣಿ ಇದ್ದ ಅಲ್ಲಿ ಪುಟಾಣಿ ಅಭಿಮಾನಿಯೊಬ್ಬರು 'ಐಶ್ವಲ್ಯ ಲೈ' ಎಂದು ಕಿರುಚಿದ್ದರು. ಈ ವೇಳೆ ಆರಾಧ್ಯ ಆ ಮುದ್ದಾದ ಅಭಿಮಾನಿಯತ್ತ ತಿರುಗಿ ನೋಡಿದ ದೃಶ್ಯ ಹೆಚ್ಚು ಜನರನ್ನು ಆಕರ್ಷಿಸಿತ್ತು.

More from Filmibeat

English summary
Aishwarya Rai’s daughter Aaradhya Bachchan dances during Ganpati Visarjan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X