ಐಶ್ವರ್ಯಾ ರೈ ಹಳೆಯ ಫೋಟೊ ವೈರಲ್: ಹೊಗಳಿಕೆಯ ಮಹಾಪೂರ

ನಟಿ ಐಶ್ವರ್ಯಾ ರೈ ಅವರ ಹಳೆಯ ಫೊಟೊ ಒಂದು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿದೆ. ಈ ಚಿತ್ರ ವೈರಲ್ ಆಗಿದ್ದೇ ತಡ ಐಶ್ವರ್ಯಾ ರೈ ಮೇಲೆ ಹೊಗಳಿಕೆಗಳ ಸುರಿಮಳೆಯನ್ನೇ ಸುರಿಸಲಾಗುತ್ತಿದೆ.

Recommended Video

Diganth and Andy to share screen first time after marriage | Filmibeat kannada

ಕನ್ನಡತಿ ಐಶ್ವರ್ಯಾ ರೈ ತನ್ನ 21 ನೇ ವಯಸ್ಸಿಗೆ ವಿಶ್ವ ಸುಂದರಿ ಪಟ್ಟ ಗೆದ್ದವರು. ವಿಶ್ವಕ್ಕೇ ಸುಂದಿರಯಾದರೂ ಅವರು ಸರಳತೆ ಬಿಟ್ಟಿರಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಐಶ್ವರ್ಯಾ ರೈ ವಿಶ್ವ ಸುಂದರಿ ಪ್ರಶಸ್ತಿ ಗೆದ್ದಾಗಿನ ಚಿತ್ರವೊಂದು ಹರಿದಾಡುತ್ತಿದೆ.

ಸುಂದರವಾದ ಸೀರೆ ಉಟ್ಟುಕೊಂಡು, ವಿಶ್ವ ಸುಂದರಿ ಕಿರೀಟ ತೊಟ್ಟುಕೊಂಡು ಐಶ್ವರ್ಯಾ ರೈ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ನೆಲದ ಮೇಲೆ ಕೂತು ಊಟ

ನೆಲದ ಮೇಲೆ ಕೂತು ಊಟ

ವಿಶ್ವ ಸುಂದರಿ ಕಿರೀಟ ತಲೆಯ ಮೇಲೆ ಇಟ್ಟುಕೊಂಡರೂ ಸರಳವಾಗಿ ತನ್ನ ತಾಯಿ ಬೃಂದಾ ರೈ ಜೊತೆಗೆ ನೆಲದ ಮೇಲೆ ಕುಳಿತುಕೊಂಡು ಭಾರತೀಯ ಆಹಾರವನ್ನು ಐಶ್ವರ್ಯಾ ರೈ ಸವಿಯುತ್ತಿರುವ ಚಿತ್ರ ಭಾರಿ ವೈರಲ್ ಆಗಿದೆ.

ಐಶ್ವರ್ಯಾ ರೈ ಅನ್ನು ಬಹುವಾಗಿ ಹೊಗಳಿದ್ದಾರೆ

ಐಶ್ವರ್ಯಾ ರೈ ಅನ್ನು ಬಹುವಾಗಿ ಹೊಗಳಿದ್ದಾರೆ

ಚಿತ್ರ ನೋಡಿದ ನೆಟ್ಟಿಗರು ಐಶ್ವರ್ಯಾ ರೈ ಅವರನ್ನು ಬಹುವಾಗಿ ಹೊಗಳುತ್ತಿದ್ದಾರೆ. ವಿಶ್ವಕ್ಕೇ ಸುಂದರಿಯಾದರೂ, ವಿಶ್ವ ಸುಂದರಿಯ ಕಿರೀಟ ತಲೆಯ ಮೇಲಿದ್ದರೂ ಐಶ್ವರ್ಯಾ ರೈ ನೆಲವನ್ನು ಬಿಟ್ಟಿಲ್ಲ, ಸರಳತೆಯನ್ನು ಬಿಟ್ಟಿಲ್ಲವೆಂದು ಬಹುವಾಗಿ ಹೊಗಳಿದ್ದಾರೆ..

ಸನ್ಮಾನ ಕಾರ್ಯಕ್ರಮದಲ್ಲಿ ತೆಗೆದ ಚಿತ್ರ

ಸನ್ಮಾನ ಕಾರ್ಯಕ್ರಮದಲ್ಲಿ ತೆಗೆದ ಚಿತ್ರ

1994 ರಲ್ಲಿ ಐಶ್ವರ್ಯಾ ರೈ ವಿಶ್ವ ಸುಂದರಿ ಪಟ್ಟ ಅಲಂಕರಿಸಿದರು. ಈ ಸ್ಪರ್ಧೆ ಸೌಥ್ ಆಫ್ರಿಕಾದಲ್ಲಿ ನಡೆದಿತ್ತು. ಈಗ ವೈರಲ್ ಆಗಿರುವ ಚಿತ್ರ, ವಿಶ್ವ ಸುಂದರಿ ಕಿರೀಟ ಗೆದ್ದಿದ್ದಕ್ಕೆ ಭಾರತದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ರೈ ಭಾಗವಹಿಸಿದ್ದಾಗ ತೆಗೆದ ಚಿತ್ರವಿದು ಎನ್ನಲಾಗುತ್ತಿದೆ.

ಐಶ್ವರ್ಯಾ ರೈ ಮುಂಬರುವ ಸಿನಿಮಾಗಳು

ಐಶ್ವರ್ಯಾ ರೈ ಮುಂಬರುವ ಸಿನಿಮಾಗಳು

ಮಂಗಳೂರು ಮೂಲದ ಐಶ್ವರ್ಯಾ ರೈ ಬಾಲಿವುಡ್‌-ಹಾಲಿವುಡ್‌ ನಲ್ಲೂ ಮಿಂಚಿದ ನಟಿ. ಪತಿ ಅಭಿಶೇಕ್ ಬಚ್ಚನ್ ಅವರೊಡನೆ ಗುಲಾಬ್ ಜಾಮೂನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ.

More from Filmibeat

English summary
Actress Aishwarya Rai's old image got viral on social media. netizens impressed with her simplicity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X