ಆರಾಧ್ಯ ವರ್ತನೆ ಕಂಡು ಬೆಚ್ಚಿ ಬಿದ್ದ ಐಶ್ವರ್ಯ ರೈ,ವಿಚ್ಛೇದನದ ವಂದತಿ ನಡುವೆ ಜೊತೆ ಕಾಣಿಸಿಕೊಂಡ ಪತಿ-ಪತ್ನಿ!

ಐಶ್ವರ್ಯ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರ ಬಾಲ್ಯ ಮತ್ತು ಯವ್ವನವನ್ನು ಕಿತ್ತುಕೊಳ್ಳುತ್ತಿದ್ದಾರೆ ಅನ್ನುವುದು ಅನೇಕರ ತಕರಾರು. ಆರಾಧ್ಯಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಬಿಡದೇ ಸದಾ ಕಾಲ ಆಕೆಯನ್ನು ತಮ್ಮ ಸೆರಗಿನಡಿಯಲ್ಲಿಯೇ ಐಶ್ವರ್ಯ ಕಟ್ಟಿಕೊಂಡು ತಿರುಗುವುದರಿಂದ, ಆರಾಧ್ಯ ಮನಸಿನ ಮೇಲೆ ಪರಿಣಾಮ ಬೀರುತ್ತೆ, ಅಮ್ಮನ ಬದುಕು ಆಕೆಯ ಬದುಕಿನ ಮೇಲೆ ಪ್ರಭಾವ ಬೀರುತ್ತೆ ಎಂದು ಅನೇಕರು ಇಲ್ಲಿಯವರೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಬೇಸರವನ್ನೂ ಹೊರ ಹಾಕಿದ್ದಾರೆ.

ಆದರೆ, ಐಶ್ವರ್ಯ ರೈ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ತಮ್ಮ ಮಗಳ ಜೊತೆ ವಿಶ್ವಪರ್ಯಟನೆಯನ್ನು ಮುಂದುವರೆಸಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಮೊನ್ನೆ ಮೊನ್ನೆಯಷ್ಟೇ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಹೊಸ ವರ್ಷವನ್ನು ಹೊರದೇಶದಲ್ಲಿ ಬರಮಾಡಿಕೊಂಡಿದ್ದಾರೆ. ನ್ಯೂ ಇಯರ್ ಪಾರ್ಟಿಯನ್ನು ವಿದೇಶದಲ್ಲಿ ಮುಗಿಸಿಕೊಂಡು ನಿನ್ನೆ ಭಾರತಕ್ಕೆ ಮರಳಿದ್ದಾರೆ.

aishwarya-rai-shocked-as-aaradhya-bachchan-jumps-at-the-airport-netizens-sense-something-is-wrong

ವಿಶೇಷ ಅಂದರೆ ವಿಚ್ಛೇದನದ ವದಂತಿಯ ನಡುವೆ ಐಶ್ವರ್ಯ ರೈ ಮತ್ತು ಆರಾಧ್ಯ ಅವರ ಜೊತೆ ಅಭಿಷೇಕ್ ಬಚ್ಚನ್ ಹೊಸ ವರ್ಷವನ್ನಾಚರಿಸಿದ್ದಾರೆ. ತಮ್ಮ ಮಡದಿ ಮತ್ತು ಮಗಳ ಜೊತೆ ಭಾರತಕ್ಕೆ ಮರಳಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರನ್ನು ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ನೋಡಿದ ಅನೇಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ವಿಚ್ಛೇದನದ ಸುದ್ದಿ ಸುಳ್ಳಾಯಿತು ಎಂದು ಸಂಭ್ರಮ ಪಡುತ್ತಿದ್ದಾರೆ. ಇದರ ನಡುವೆ ನಿನ್ನೆ ವಿಮಾನ ನಿಲ್ದಾಣದಲ್ಲಿ ಆರಾಧ್ಯ ಅವರ ವರ್ತನೆ ಕಂಡು ಐಶ್ವರ್ಯ ರೈ ಬೆಚ್ಚಿ ಬಿದ್ದಿದ್ದಾರೆ. ಎಲ್ಲರೆದುರು ಮಗಳಿಗೆ ಬ್ಯೆದಿದ್ದಾರೆ.

ಹೌದು, ತಂದೆ ಮತ್ತು ತಾಯಿಯ ಜೊತೆ ಬಹುಕಾಲದ ನಂತರ ಜೊತೆಯಲ್ಲಿ ಪ್ರವಾಸಕ್ಕೆ ತೆರಳಿದ್ದಕ್ಕೆ ಆರಾಧ್ಯ ಸಹಜವಾಗಿ ಖುಷಿಯಾಗಿದ್ದಾರೆ. ಈ ಖುಷಿಯಲ್ಲಿಯೇ ವಿಮಾನ ನಿಲ್ದಾಣದಿಂದ ತಾಯಿ ಐಶ್ವರ್ಯ ಜೊತೆ ಹೊರ ಬರುವ ಸಮಯದಲ್ಲಿ ಖುಷಿಯಿಂದ ಆರಾಧ್ಯ ಜಿಗಿದಿದ್ದಾರೆ. ಇದರಿಂದ ತಮ್ಮ ಮಗಳನ್ನು ಹಿಂದೆಯಿಂದ ಯಾರೋ ತಳ್ಳಿದ್ದಾರೆ ಎಂದುಕೊಂಡು ಐಶ್ವರ್ಯ ರೈ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಯಾರು ತಳ್ಳಿದ್ದು ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ನೋಡಿಕೊಂಡು ನಡೆಯುವಂತೆ ಮಗಳಿಗೆ ಹೇಳಿದ್ದಾರೆ. ಆ ನಂತರ ತಮ್ಮನ್ನು ತಾವು ಸಮಧಾನ ಪಡಿಸಿಕೊಂಡು ತಮ್ಮ ಬರುವಿಕೆಗಾಗಿಯೇ ಕಾಯುತ್ತಿದ್ದ ಪಾಪರಾಜಿಗಳಿಗೆ ಐಶ್ವರ್ಯ ರೈ ಹೊಸ ವರ್ಷದ ಶುಭಾಶಯವನ್ನು ಹೇಳಿದ್ದಾರೆ. ಆರಾಧ್ಯ ಕೂಡ ಎಲ್ಲರಿಗೆ ಹೊಸ ವರ್ಷದ ಶುಭಾಶಯವನ್ನು ಹೇಳಿ ತಮ್ಮ ತಾಯಿ ಮತ್ತು ತಂದೆಯ ಜೊತೆ ಕಾರನ್ನೇರಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದುರ್ದೈವ ಅಂದರೆ ಒಂದು ವರ್ಗ ಆರಾಧ್ಯ ಅವರ ಮಾನಸಿಕ ಆರೋಗ್ಯದ ಕುರಿತು ಚರ್ಚೆ ಮಾಡುತ್ತಿದೆ. ಆರಾಧ್ಯ ಬಚ್ಚನ್ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದೆ. ಆರಾಧ್ಯ ಅಬ್‌ ನಾರ್ಮಲ್ ಮಗು ಥರ ಕಾಣಿಸುತ್ತಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಆರಾಧ್ಯ ಮಾತನಾಡಿದ್ದು ಅರ್ಥ ಆಗುತ್ತಿಲ್ಲ ಎಂದಿದ್ದಾರೆ. ಆರಾಧ್ಯಗೆ ಈಗಿನ್ನೂ ಹನ್ನೆರಡು ವಯಸ್ಸು ಎನ್ನುವುದನ್ನು ಯೋಚನೆ ಮಾಡದೆ ಮನಬಂದಂತೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇದಕ್ಕೆ ಇನ್ನು ಕೆಲವರು ಉತ್ತರವನ್ನು ನೀಡಿದ್ದು ಹನ್ನೆರಡನೇ ವಯಸ್ಸಿನಲ್ಲಿ ಮಕ್ಕಳು ಮಾಡುವ ಹುಡುಗಾಟಿಕೆಯನ್ನೇ ಆರಾಧ್ಯ ಮಾಡಿರುವುದು ಎಂದಿದ್ದಾರೆ. ಮದ್ವೆಯಾಗಿ ಮಕ್ಕಳಿದ್ದರು ಕೂಡ ನಾವು ಒಮ್ಮೊಮ್ಮೆ ಈ ರೀತಿ ವರ್ತನೆ ಮಾಡುತ್ತೇವೆ ಹಾಗಂಥ ನಾವೇನು ಅಬ್‌ನಾರ್ಮಲ್ ವ್ಯಕ್ತಿಗಳಾ ಎಂದು ಪ್ರಶ್ನೆ ಮಾಡಿದ್ದಾರೆ. ಆರಾಧ್ಯ ವಿರುದ್ಧ ಅವಹೇಳನಾಕಾರಿ ಕಾಮೆಂಟ್‌ಗಳನ್ನು ಮಾಡುತ್ತಿರುವವರಿಗೆ ತಪರಾಕಿಯನ್ನು ಹಾಕಿದ್ದಾರೆ. ಇದರ ನಡುವೆ ಇನ್ನೂ ಕೆಲವರು ಮಗಳನ್ನು ಐಶ್ವರ್ಯ ರೈ ಅವರೇ ಹಾಳು ಮಾಡುತ್ತಿರುವುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಗಳನ್ನು ನೆರಳಿನಂತೆ ಯಾವಾಗಲೂ ಹಿಂಬಾಲಿಸುವುದು ಯಾಕೆ ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X