»   » ಬೆಂಗಳೂರಿಗೆ ಬಂದ ಐಶ್ವರ್ಯ ರೈ 'ಸನ್ನಿ ನೈಟ್ಸ್' ಬಗ್ಗೆ ಪ್ರತಿಕ್ರಿಯೆ ಕೊಟ್ಟರು

ಬೆಂಗಳೂರಿಗೆ ಬಂದ ಐಶ್ವರ್ಯ ರೈ 'ಸನ್ನಿ ನೈಟ್ಸ್' ಬಗ್ಗೆ ಪ್ರತಿಕ್ರಿಯೆ ಕೊಟ್ಟರು

Posted By:
Subscribe to Filmibeat Kannada

ಬಾಲಿವುಡ್ ಬೆಡಗಿ ಐಶ್ವರ್ಯ ರೈ ಇಂದು ರಾಜಧಾನಿ ಬೆಂಗಳೂರಿಗೆ ಬಂದಿದ್ದರು. ಲಾಂಗಿನೆಸ್ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯ ಯುಬಿ ಸಿಟಿಯಲ್ಲಿ ಲಾಂಗಿನೆಸ್ ನ ನೂತನ ಶೋ ರೂಂ ಉದ್ಘಾಟನೆಗೆ ಆಗಮಿಸಿದ್ದರು. ಯುಬಿ ಸಿಟಿಯಲ್ಲಿ ಐಶ್ವರ್ಯ ಇದ್ದಾರೆ ಎನ್ನುವ ವಿಷಯ ತಿಳಿಯುತ್ತಿದಂತೆ ಮಾಲ್ ನಲ್ಲಿ ಇದ್ದ ಅವರ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಲು ಸಾಲು ಸಾಲಾಗಿ ಕಾದು ನಿಂತ್ತಿದ್ದರು. ಇನ್ನೊಂದಷ್ಟು ಜನ ಐಶ್ವರ್ಯ ನೋಡಲು ನುಕುನುಗಲಿನಲ್ಲಿ ಕಾಯುತ್ತ ಇದ್ದರು.

ಸನ್ನಿ ನೈಟ್ಸ್ ಬ್ಯಾನ್ ಮಾಡಿದಕ್ಕೆ ಗರಂ ಆದ್ರು ಅಭಿಮಾನಿಗಳು

ಬ್ಲಾಕ್ ಅಂಡ್ ಪೀಕಾಕ್ ಬ್ಲೂ ಲಾಂಗ್ ಗೌನ್ ಧರಿಸಿದ ಐಶ್ ಸಖತ್ ಕ್ಯೂಟ್ ಆಗಿ ಕಾಣ್ಣುತ್ತಿದ್ದರು. ವಜ್ರದ ಕಿವಿ ಒಲೆ, ವಜ್ರದ ಉಂಗುರ ಐಶ್ ಅಂದಕ್ಕೆ ಮತ್ತಷ್ಟು ಮೆರಗು ನೀಡಿತು. ಇನ್ನು ಒಂದು ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಬ್ಲೂ ಬಣ್ಣದ ಬೆಲ್ಟ್ ಇರುವ ವಾಚ್ ಧರಿಸಿದ ಐಶ್ ವಾಚ್ ಹಾಗೂ ತಮ್ಮ ಉಡುಗೆ ಬಗ್ಗೆ ಪರಿಚಯ ಮಾಡಿದರು.

Aishwarya Rai spoke about Sunny Nights

ಇನ್ನು ಸನ್ನಿ ನೈಟ್ ಬಗ್ಗೆ ಮಾಧ್ಯಮಗಳು ಐಶ್ವರ್ಯ ಪ್ರಶ್ನಿಸಿದಾಗ ''ನನಗೆ ಆ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆದರೆ ನಾನು ಸದ್ಯ ಬೆಂಗಳೂರಿನಲ್ಲಿ ಇದ್ದೀನಿ'' ಎಂದು ನಗುತ್ತಾ ಉತ್ತರ ನೀಡಿದರು. ಜೊತೆಗೆ ''ಬೆಂಗಳೂರಿಗೆ ಬಹಳಷ್ಟು ಬಾರಿ ಬಂದಿದ್ದೇನೆ, ಬೆಂಗಳೂರು ಅಂದರೆ ನನಗೆ ಇಷ್ಟ'' ಎಂದರು.

English summary
Bollywood actress Aishwarya Rai Bachchan visits Bangalore Today (December 20). And she also spoke about Sunny Nights. A new Year's event of Sunny Leone.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X