»   » ಸೀರೆಯಲಿ ತಾರೆ ಐಶ್ವರ್ಯ ರೈ ಶಕಲಕ ಚಿಕುಲಕ ಸ್ಟೈಲ್

ಸೀರೆಯಲಿ ತಾರೆ ಐಶ್ವರ್ಯ ರೈ ಶಕಲಕ ಚಿಕುಲಕ ಸ್ಟೈಲ್

Posted By:
Subscribe to Filmibeat Kannada

ಇದು ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ರೀಸೆಂಟ್ ಲುಕ್. ಕೇನ್ಸ್ ಚಿತ್ರೋತ್ಸವದಲ್ಲಿ ಭಾಗವಹಿಸಿರುವ ಐಶೂ ಸೀರೆಯಲ್ಲಿ ಎಲ್ಲರ ಗಮನವನ್ನೂ ಸೆಳೆದಿದ್ದಾರೆ. ಸೀರೆಯಲ್ಲಿ ಐಶ್ವರ್ಯ ರೈ ಅವರ ಶಕಲಕ ಚಿಕುಲಕ ಸ್ಟೈಲ್ ಎಲ್ಲರನ್ನೂ ಆಕರ್ಷಿಸಿತು.


ಒಂದು ಮಗುವಾದ ಬಳಿಕ ಐಶ್ವರ್ಯ ರೈ ಅವರ ದೇಹದ ತೂಕದಲ್ಲಿ ಭಾರಿ ಏರಿಕೆಯಾಗಿತ್ತು. ಕೇನ್ಸ್‌ನಲ್ಲಿ ಅವರು ಹೇಗೆ ಕಾಣುತ್ತಾರೋ ಏನೋ ಎಂಬ ಸಣ್ಣ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಆದರೆ ಅವರ ಈ ಸಾಂಪ್ರದಾಯಿಕ ಉಡುಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಐಶ್ವರ್ಯ ಉಟ್ಟ ಸೀರೆಯನ್ನು ಅಬುಜಾನಿ ಹಾಗೂ ಸಂದೀಪ್ ಖೋಸ್ಲಾ ಎಂಬಿಬ್ಬರು ವಿನ್ಯಾಸಗೊಳಿಸಿದ್ದಾರೆ. ತಮ್ಮ ಕೇಶವಿನ್ಯಾಸಕ್ಕೂ ಹೊಸ ಟಚ್ ನೀಡಿರುವ ಐಶೂ ನೀಲಕಣ್ಣುಗಳು ಫಳಫಳ ಎಂದು ಹೊಳೆಯುತ್ತಿದ್ದದ್ದು ವಿಶೇಷಗಳಲ್ಲಿ ವಿಶೇಷ. ಸರಳವಾಗಿದ್ದ ಅವರ ಉಡುಗೆ ತೊಡುಗೆ ಅವರ ದೇಹದ ತೂಕವನ್ನು ಮರೆಮಾಚಿತ್ತು. (ಏಜೆನ್ಸೀಸ್)

English summary
Aishwarya Rai was in news recently because of her post pregnancy weight. But the beautiful diva surprised everyone with her latest appearance at the Cannes. Aishwarya's post-pregnancy weight gain had generated much buzz as well as attracted criticism, so there was much curiosity about her appearance at this year's Cannes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada