For Quick Alerts
  ALLOW NOTIFICATIONS  
  For Daily Alerts

  ಅಯ್ಯೋ...! ಐಶ್ವರ್ಯ ರೈ ಕೈಗೆ ಏನಾಯಿತು? 'ಶೋಲೆ'ಯ ಠಾಕೂರ್ ಎನ್ನುತ್ತಿದ್ದಾರೆ ನೆಟ್ಟಿಗರು

  |

  ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ತಮ್ಮ ಸೌಂದರ್ಯದ ಜೊತೆಗೆ ತರಹೇವಾರಿ ಡ್ರೆಸ್ ಗಳ ಮೂಲಕವೂ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಫ್ಯಾಶನ್ ಶೋ, ಅವಾರ್ಡ್ ಕಾರ್ಯಕ್ರಮ, ಫಿಲ್ಮ್ ಫೆಸ್ಟ್ ಹೀಗೆ ಅದ್ದೂರಿ ಸಮಾರಂಭಗಳಲ್ಲಿ ವಿಭಿನ್ನ ಬಟ್ಟೆ ಧರಿಸುವ ಮೂಲಕ ಎಲ್ಲರ ಕಣ್ಣು ಕುಕ್ಕುತ್ತಿರುತ್ತಾರೆ.

  ಕೆಲವು ಬಾರಿ ಐಶ್ವರ್ಯ ರೈ ಫ್ಯಾಶನ್ ಅತಿರೇಕಕ್ಕೆ ಹೋಗಿ ನೆಟ್ಟಿಗರ ಟ್ರೋಲ್ ಗೆ ಗುರಿಯಾಗಿದ್ದು ಇದೆ. ಇದೀಗ ಫ್ಯಾಶನ್ ಐಕಾನ್ ಐಶ್ವರ್ಯ ರೈ ಅವರ ಹಳೆಯ ಫೋಟೋವೊಂದು ಈಗ ವೈರಲ್ ಆಗಿದೆ. ಅಷ್ಟೆಯಲ್ಲ ನೆಟ್ಟಿಗರು ಈ ಫೋಟೋವನ್ನು ಟ್ರೋಲ್ ಮಾಡುತ್ತಿದ್ದಾರೆ. 'ಶೋಲೆ' ಸಿನಿಮಾದ ಠಾಕೂರ್ ಪಾತ್ರಕ್ಕೆ ಹೋಲಿಸಿ ಕಾಲೆಳೆಯುತ್ತಿದ್ದಾರೆ. ಮುಂದೆ ಓದಿ...

  ಕೊರೊನಾದಿಂದ ಗುಣಮುಖರಾದ ಬಳಿಕ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಐಶ್ವರ್ಯ ರೈ

   ಐಶ್ವರ್ಯ ಕೈ ಏನಾಯ್ತು?

  ಐಶ್ವರ್ಯ ಕೈ ಏನಾಯ್ತು?

  ಐಶ್ವರ್ಯ ಧರಿಸಿರುವ ಡ್ರೆಸ್ ನಲ್ಲಿ ಕೈಗಳು ಕಾಣುತ್ತಿಲ್ಲ. ಬಟ್ಟೆಯ ತೋಳುಗಳು ಐಶ್ವರ್ಯ ಕೈಗಳನ್ನು ಮುಚ್ಚಿವೆ. ಹಾಗಾಗಿ ನೆಟ್ಟಿಗರು ಐಶ್ವರ್ಯ ಕೈಗಳೆಲ್ಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಶೇಷ ಅಂದರೆ ಸೂಪರ್ ಹಿಟ್ ಶೋಲೆ ಸಿನಿಮಾದ ಪಾತ್ರಗಳಲ್ಲಿ ಹೆಚ್ಚು ಖ್ಯಾತಿಗಳಿಸಿದ್ದ ಪಾತ್ರ ಠಾಕೂರ್. ಚಿತ್ರದಲ್ಲಿ ಠಾಕೂರ್ ಗೆ ಎರಡು ಕೈಗಳನ್ನು ಕತ್ತರಿಸಲಾಗುತ್ತೆ. ಆ ಪಾತ್ರಕ್ಕೆ ಐಶ್ವರ್ಯ ರೈ ಅನ್ನು ಹೋಲಿಸುತ್ತಿದ್ದಾರೆ.

   ಡಬ್ಬೂ ರತ್ನಾನಿ ಸೆರೆಹಿಡಿದ ಫೋಟೋ

  ಡಬ್ಬೂ ರತ್ನಾನಿ ಸೆರೆಹಿಡಿದ ಫೋಟೋ

  ಈ ಫೋಟೋವನ್ನು ಖ್ಯಾತ ಸೆಲೆಬ್ರಿಟಿ ಛಾಯಾಗ್ರಾಹಕ ಡಬ್ಬೂ ರತ್ನಾನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬಿಳಿ ಬಣ್ಣದ ಡ್ರೆಸ್ ಮೇಲೆ ಎಂಬ್ರಾಯಿಡರಿ ವರ್ಕ್ ಮಾಡಲಾಗಿದೆ. ಬಾಕ್ಸ್ ತೋಳಿನ ಈ ಬಟ್ಟೆ ಟ್ರೋಲಿಗರಿಗೆ ಆಹಾರವಾಗಿದೆ. ಕೈಗಳೆಲ್ಲಿ ಮೊದಲು ಕೈಗಳನ್ನು ತೋರಿಸಿ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

  ಐಶ್ವರ್ಯ ರೈ ಮಗಳು ಆರಾಧ್ಯ ಆನ್ಲೈನ್ ತರಗತಿ ವಿಡಿಯೋ ವೈರಲ್

  DIRECTORS DAIRY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada
   ತಮಿಳು ಸಿನಿಮಾದಲ್ಲಿ ಐಶ್ವರ್ಯ ಅಭಿನಯ

  ತಮಿಳು ಸಿನಿಮಾದಲ್ಲಿ ಐಶ್ವರ್ಯ ಅಭಿನಯ

  ಐಶ್ವರ್ಯ ಸದ್ಯ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 10 ವರ್ಷಗಳ ಬಳಿಕ ಐಶ್ವರ್ಯ ತಮಿಳು ಸಿನಿಮಾರಂಗದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಆರಾಧ್ಯಳಿಗೆ ಜನ್ಮ ನೀಡಿದ ಬಳಿಕ ಐಶ್ವರ್ಯ ಸಿನಿಮಾರಂಗದಲ್ಲಿ ಅಷ್ಟು ಸಕ್ರೀಯರಾಗಿಲ್ಲ. ಕೆಲವೇ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ ಆ ಸಿನಿಮಾಗಳು ನಿರೀಕ್ಷೆಯ ಮಟ್ಟದ ಸಕ್ಸಸ್ ಕಾಣಲಿಲ್ಲ.

  English summary
  Aishwarya Rai Throwback photo in box shelves goes viral. Netizens comparison to Sholay's Thakur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X