For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ ನಗೆಪಾಟಲಿಗೀಡಾಗುತ್ತಿದೆ ಐಶ್ವರ್ಯ ರೈ ತುಟಿ

  By ಸೋನು ಗೌಡ
  |

  ಫ್ರಾನ್ಸ್ ನಲ್ಲಿ ನಡೆದ 69ನೇ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೊತ್ಸವದಲ್ಲಿ ಸತತ 15 ವರ್ಷಗಳಿಂದ ಭಾಗವಹಿಸಿ ರೆಡ್ ಕಾರ್ಪೆಟ್ ಮೇಲೆ ನಡೆದಾಡಿದ ನಟಿ ಐಶ್ವರ್ಯ ರೈ ಅವರು ಈ ಬಾರಿ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ನಿಂದ ಎಲ್ಲರ ಮನಸ್ಸಲ್ಲಿ ಉಳಿದು ಹೋಗಿದ್ದಾರೆ.

  ಹೌದು ಈ ಬಾರಿಯ ಕೇನ್ಸ್ ಚಲನಚಿತ್ರೊತ್ಸವದಲ್ಲಿ ನಟಿ ಐಶ್ವರ್ಯ ರೈ ಅವರು ತಮ್ಮ ತುಟಿಗೆ ಹಚ್ಚಿಕೊಂಡಿದ್ದ ನೇರಳೆ ಬಣ್ಣದ ಲಿಪ್ ಸ್ಟಿಕ್ ನಿಂದ ಭಾರಿ ಸುದ್ದಿಯಾಗಿದ್ದಾರೆ.[ಫೋಟೋ ಗ್ಯಾಲರಿ; ಕೇನ್ಸ್ ಚಿತ್ರೋತ್ಸವದಲ್ಲಿ ಸುರಸುಂದರಿ ಐಶ್ವರ್ಯ ರೈ]

  ಕೇನ್ಸ್ ಸಿನಿಮೋತ್ಸವದ ಮೊದಲ ದಿನ ಬಚ್ಚನ್ ಕುಟುಂಬದ ಸೊಸೆ ಐಶ್ ಅವರು ತೊಟ್ಟಿದ್ದ ಚಿನ್ನದ ಬಣ್ಣದ ಗೌನ್ ಬಗ್ಗೆ ಎಲ್ಲರೂ ಹೊಗಳಿದರೆ, ಮರುದಿನ ಐಶ್ವರ್ಯ ಅವರು ತುಟಿಗೆ ಹಚ್ಚಿದ್ದ ನೇರಳೆ ಬಣ್ಣದ ಲಿಪ್ ಸ್ಟಿಕ್ ಬಗ್ಗೆ ಎಲ್ಲಾ ಕಡೆ ಭಯಂಕರ ಚರ್ಚೆ ಏರ್ಪಟ್ಟಿತ್ತು.

  ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಅವರು ಉದ್ದನೆಯ ಫ್ಲೋರಲ್ ಗೌನ್ ತೊಟ್ಟು ಅದಕ್ಕೆ ಹೋಲುವ ನೇರಳೆ ಬಣ್ಣದ ಲಿಪ್ ಸ್ಟಿಕ್ ಹಾಕಿದ್ದರು. ಇದು ಎಲ್ಲರೂ ಗೇಲಿ ಮಾಡಿಕೊಂಡು ಮಾತನಾಡುವಂತಾಗಿದೆ.[ಕಾನ್ ಚಿತ್ರೋತ್ಸವದಲ್ಲಿ ಧುಮ್ಮುಕ್ಕಿದ ಐಶೂ ಸೌಂದರ್ಯ]

  ಇದೀಗ ಐಶ್ ಅವರು ತುಟಿಗೆ ಹಚ್ಚಿದ್ದ ನೇರಳೆ ಬಣ್ಣದ ಲಿಪ್ ಸ್ಟಿಕ್ ಇಡೀ ಟ್ವಿಟ್ಟರ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ಹೊಸ ಫ್ಯಾಶನ್ ಟ್ರೆಂಡ್ ಅನ್ನು ಮೆಚ್ಚಿದರೆ, ಇನ್ನೂ ಕೆಲವರು ಐಶ್ವರ್ಯ ನೇರಳೆ ಹಣ್ಣು ಅಥವಾ ಬ್ಲ್ಯಾಕ್ ಕರೆಂಟ್ ಐಸ್ ಕ್ರೀಮ್ ತಿಂದಿದ್ರಾ ಅಂತ ತಮಾಷೆ ಮಾಡಿದ್ದಾರೆ.[ಕಾನ್ ನಲ್ಲಿ ಥಳಕು, ಬಳಕು, ಒನಪು, ವೈಯಾರ]

  "ಕೆಂಪು ಹಾಸಿನ ಮೇಲೆ ನಡೆಯಲು ಹೋಗುವ ಮುನ್ನ ಐಶ್ವರ್ಯ ತುಂಬಾ ಜಾಮೂನುಗಳನ್ನು ತಿಂದಿದ್ದರು ಎಂದೆನಿಸುತ್ತದೆ" ಎಂದು ಒಬ್ಬರು ಟ್ವೀಟ್ ಮಾಡಿದರೆ, "ಏಷ್ಯನ್ ಪೇಂಟ್ಸ್ ನವರು ನಿಮ್ಮ ತುಟಿಗಳ ಪ್ರಾಯೋಜಕತ್ವ ಯಾವಾಗ ವಹಿಸಿಕೊಂಡಿದ್ದು" ಎಂದು ಮತ್ತೊಬ್ಬರು ಛೇಡಿಸಿದ್ದಾರೆ.

  ಇನ್ನೊಬ್ಬರು ಒಂದು ಜೋಕ್ ಅನ್ನೇ ಕ್ರಿಯೇಟ್ ಮಾಡಿದ್ದಾರೆ. 'ನಗರದ ಸಿರಿವಂತ': ಐಶ್ವರ್ಯ ತುಟಿಗಳು ಬ್ಲಾಕ್ ಕರೆಂಟ್ ಐಸ್ ಕ್ರೀಮ್ ಬಳಿದುಕೊಂಡಂತೆ ಕಾಣಿಸುತ್ತದೆ.
  ನಗರದ ಬಡವ: ಐಶ್ವರ್ಯ ತುಟಿಗಳು ಆಕೆ ಕಾಲಾ ಖಟ್ಟಾ ಗೋಲಾವನ್ನು ತಿಂದಿದ್ದಾರೆ ಎನಿಸುವಂತಿದೆ' ಎಂದು ಟ್ವೀಟ್ ಮಾಡಿದ್ದಾರೆ.

  ಒಟ್ನಲ್ಲಿ ಐಶ್ವರ್ಯ ರೈ ಹಚ್ಚಿಕೊಂಡಿದ್ದ ನೇರಳೆ ಬಣ್ಣದ ಲಿಪ್ ಸ್ಟಿಕ್ ಅವರ ಅಭಿಮಾನಿಗಳನ್ನು ಇರುಸು-ಮುರಿಸು ಮಾಡಿದ್ದಂತೂ ಸತ್ಯ. ನೇರಳೆ ಬಣ್ಣದ ಲಿಪ್ ಸ್ಟಿಕ್ ಹಚ್ಚಿರುವ ಐಶ್ವರ್ಯ ರೈ ಅವರ ವಿಭಿನ್ನ ಭಾವ-ಭಂಗಿ ನೋಡಲು ಕೆಳಗಿನ ಫೋಟೋ ಗ್ಯಾಲರಿ ನೋಡಿ...

  English summary
  Bollywood Actress Aishwarya Rai, mesmerized people at the Cannes Film Festival with her beauty as she walked the red carpet in a stunning gold shimmering gown and a floral dress on the second day. Aishwarya Rai, sported a purple lipstick and Twitterati trolled the actress for her makeup antics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X