For Quick Alerts
  ALLOW NOTIFICATIONS  
  For Daily Alerts

  ಫೋಟೋಗಳು; ಪ್ಯಾರಿಸ್ ಫ್ಯಾಷನ್ ಶೋನಲ್ಲಿ ಮಿರ ಮಿರ ಮಿಂಚಿದ ಐಶ್ವರ್ಯಾ ರೈ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಇತ್ತೀಚಿಗಷ್ಟೆ ಲಂಡನ್‌ಗೆ ಹಾರಿದ್ದರು. ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಐಶ್ವರ್ಯಾ ರೈ ಕಾಣಿಸಿಕೊಂಡಿದ್ದು, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಬಿಳಿ ಬಣ್ಣದ ಉಡುಪಿನಲ್ಲಿ ಮಿಂಚಿರುವ ನಟಿ ಐಶ್ವರ್ಯಾ ರೈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  ಐಶ್ವರ್ಯಾ ರೈ ಸದ್ಯ ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜೊತೆ ಪ್ಯಾರಿಸ್‌ನಲ್ಲಿದ್ದಾರೆ. ಐಶ್ವರ್ಯಾ ರೈ ಹಲವು ವರ್ಷಗಳಿಂದ ಲೋರಿಯಲ್ ಪ್ಯಾರಿಸ್ ಬ್ರಾಂಡ್‌ನ ಅಂಬಾಸಿಡರ್ ಆಗಿದ್ದಾರೆ. ಪ್ಯಾರಿಸ್ ಪ್ಯಾಷನ್ ಶೋನಲ್ಲಿ ನಟಿ ಐಶ್ವರ್ಯಾ ರೈ ವಿಶ್ವದ ಖ್ಯಾತನಾಮರ ಜೊತೆ ಪ್ರತಿನಿಧಿಸಿದ್ದಾರೆ. ಪ್ಯಾರಿಸ್‌ನ ಐಫೆಲ್ ಟವರ್ ಬಳಿ ನಡೆದ ಅದ್ದೂರಿ ಫ್ಯಾಷನ್ ಶೋನಲ್ಲಿ ವಿಭಿನ್ನ ಉಡುಪು ಧರಿಸಿ ಹೆಜ್ಜೆ ಹಾಕುವ ಮೂಲಕ ವಿಶ್ವ ಅಭಿಮಾನಿಗಳ ಮನಕದ್ದಿದ್ದಾರೆ.

  ಈ ಶೋನಲ್ಲಿ ವಿಶ್ವದ ಪ್ರಸಿದ್ಧ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಬ್ರಿಟಿಷ್ ತಾರೆ ಹೆಲೆನ್ ಮಿರ್ರೆನ್, ಖ್ಯಾತ ಗಾಯಕಿ ಕ್ಯಾಮಿಲ್ಲಾ ಕ್ಯಾಬೆಲ್ಲೋ, ಅಸ್ಟ್ರೇಲಿಯಾದ ತಾರೆ ಕ್ಯಾಥರೀನ್ ಲ್ಯಾಂಗ್ ಫೋರ್ಡ್, ಹಾಲಿವುಡ್ ಸ್ಟಾರ್ ಅಂಬರ್ ಹರ್ಡ್ ಮತ್ತು ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ನಿಕೋಲಜ್ ಕೋಸ್ಟಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  ಸದ್ಯ ಪ್ಯಾರಿಸ್ ಫ್ಯಾಷನ್ ಶೋ ಮುಗಿಸಿ ಐಶ್ವರ್ಯಾ ರೈ ದುಬೈಗೆ ಹಾರಲಿದ್ದಾರೆ. ದುಬೈನಲ್ಲಿಯೂ ಐಶ್ವರ್ಯಾ ದೊಡ್ಡ ಈವೆಂಟ್ ಒಂದರಲ್ಲಿ ಭಾಗಿಯಾಗಲಿದ್ದಾರೆ. ಇತ್ತೀಚಿಗಷ್ಟೆ ಐಶ್ವರ್ಯಾ ಪ್ಯಾರಿಸ್‌ಗೆ ಪಯಣ ಬೆಳೆಸಿದ್ದರು. ಪತಿ ಮತ್ತು ಮಗಳು ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್ ಆಗಿತ್ತು. ಅಂದಹಾಗೆ ಐಶ್ವರ್ಯಾ ರೈ ಸುಮಾರು 2 ವರ್ಷಗಳ ಬಳಿಕ ವಿದೇಶಿ ಪಯಣ ಬೆಳೆಸಿದ್ದಾರೆ.

  ಎರಡು ವರ್ಷಗಳಿಂದ ಐಶ್ವರ್ಯಾ ಎಲ್ಲಿಗೂ ಪ್ರಯಾಣ ಬೆಳೆಸಿರಲಿಲ್ಲ. 2019ರ ಬಳಿಕ ಮೊದಲ ಬಾರಿಗೆ ಐಶ್ ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಕೊರೊನಾ ಬಳಿಕ ಸುರಕ್ಷತೆ ಕಡೆ ಗಮನಹರಿಸಿದ್ದ ಐಶ್ವರ್ಯಾ ಎಲ್ಲಿಯೂ ಹೋಗುತ್ತಿರಲಿಲ್ಲ. ಇದೀಗ ಐಶ್ವರ್ಯಾ ಎರಡು ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದು, ವಿದೇಶಿ ಫ್ಲೈಟ್ ಹತ್ತಿದ್ದಾರೆ.

  ಐಶ್ವರ್ಯಾ ರೈ ಕೊನೆಯದಾಗಿ 2019ರ ಕ್ಯಾನ್ ಚಲನಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದರು. ರೆಡ್ ಕಾರ್ಪೆಟ್ ಮೇಲೆ ನಡೆದು ವಿಶ್ವದ ಗಮನ ಸೆಳೆದಿದ್ದರು. ಬಳಿಕ ತನ್ನ ಹಟ್ಟುಹಬ್ಬ ಆಚರಣೆಗೆಂದು ಐಶ್ವರ್ಯಾ ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜೊತೆ ರೋಮ್ ಪ್ರವಾಸ ಕೈಗೊಂಡಿದ್ದರು. ಬಳಿಕ ಐಶ್ವರ್ಯಾ ಯಾವುದೇ ಪ್ರವಾಸ ಕೈಗೊಂಡಿಲ್ಲ. ಇದೀಗ ಎರಡು ವರ್ಷಗಳ ಬಳಿಕ ವಿದೇಶದಲ್ಲಿ ಕಾಣಿಸಿಕೊಂಡಿದ್ದಾರೆ.

  Aishwarya Rai walks the ramp at Paris Fashion week, photo viral on social media

  ಸಿನಿಮಾ ವಿಚಾರಕ್ಕೆ ಬರುವುದಾದರೆ ಚಿತ್ರರಂಗದಿಂದನೂ ಐಶ್ವರ್ಯಾ ರೈ ಅಂತರ ಕಾಯ್ದುಕೊಂಡಿದ್ದಾರೆ. ಬಾಲಿವುಡ್‌ನಿಂದ ದೂರ ಇರುವ ಐಶ್ವರ್ಯಾ ಇದೀಗ ಮತ್ತೆ ತಮಿಳು ಚಿತ್ರರಂಗದ ಕಡೆ ಮರಳಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ಲುಕ್ ಲೀಕ್ ಆಗಿದ್ದು, ರಾಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಐಶ್ವರ್ಯಾರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

  English summary
  Actress Aishwarya Rai walks the ramp at Paris Fashion week, photo viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X