ಅಭಿಷೇಕ್ ಬಚ್ಚನ್ ಜೊತೆ ಡಿವೋರ್ಸ್,ಐಶ್ವರ್ಯ ರೈ ಹೇಳಿದ್ದೇನು.?
ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬಂದು ಸಾರ್ವಜನಿಕರ ಬಾಯಿ ಸೇರುತ್ತದೋ ಆಗ ಚಿಕ್ಕದ್ದು ದೊಡ್ಡದ್ದಾಗುವ ಎಲ್ಲ ಲಕ್ಷಣಗಳೂ ಹೆಚ್ಚಾಗಿಯೇ ಇರುತ್ತದೆ. ಇದಕ್ಕೆಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ದಾಂಪತ್ಯ ಬದುಕು ಮತ್ತೊಂದು ಉದಾಹರಣೆ.
ಹೌದು. ಕಳೆದ ಹಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಮುರಿದು ಬೀಳಲು ನಿಮ್ರತ್ ಕೌರ ಕಾರಣವೆನ್ನುವ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನಿಮ್ರತ್ ಕೌರ ಮೋಹ ಪಾಶದಲ್ಲಿ ಸಿಲುಕಿರುವ ಅಭಿಷೇಕ್ ಬಚ್ಚನ್ ಯಾವ ಕ್ಷಣದಲ್ಲಾದರೂ ಐಶ್ವರ್ಯ ರೈ ಅವರಿಗೆ ವಿಚ್ಛೇದನ ನೀಡಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಡಿವೋರ್ಸ್ ಬಗ್ಗೆ ಐಶ್ವರ್ಯ ರೈ ಮಾತನಾಡಿದ ಮಾತು ಈಗ ಸೋಶಿಯಲ್ ಮೀಡಿಯಾದಲ್ಲಿ ಮಾರ್ದನಿಸುತ್ತಿದೆ.

ಹೌದು, ಅಸಲಿಗೆ ಮದುವೆಯಗಿ ಎರಡು ವರ್ಷದ ನಂತರ ಅಂದರೆ 2009ರಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಹಾಲಿವುಡ್‌ನ ಖ್ಯಾತ ನಿರೂಪಕಿ ಓಪ್ರಾ ವಿನ್ಪ್ರೇ ಗೆ ಸಂದರ್ಶನವನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಅದ್ಧೂರಿ ವಿವಾಹ ಮಹೋತ್ಸವದ ತುಣುಕುಗಳನ್ನು ಓಪ್ರಾ ವಿನ್ಪ್ರೇ ಪರದೆಯ ಮೇಲೆ ಪ್ರದರ್ಶಿಸಿದ್ದರು. ಆ ನಂತರ ಮದುವೆಯ ಜನ್ಮ ಜನ್ಮದ ಅನುಬಂಧದ ಕುರಿತು ಪ್ರಶ್ನೆಯನ್ನು ಕೇಳಿದ್ದರು.
ಇದಕ್ಕೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಭಾರತದಲ್ಲಿ ಮದುವೆಯ ಪ್ರಾಮುಖ್ಯತೆ, ಮಹತ್ವದ ಬಗ್ಗೆ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದರು. ಮದುವೆಯ ವಿಧಿ ವಿಧಾನ ಮತ್ತು ಆಚರಣೆಯ ಬಗ್ಗೆ ಹೆಮ್ಮಯಿಂದ ಇಬ್ಬರು ಮಾತನಾಡಿದ್ದರು. ಸಪ್ತಪದಿಯ ಮಹತ್ವವನ್ನು ವಿವರಿಸಿದ್ದರು. ವಧು - ವರರು ಕೈ ಹಿಡಿದು ಅಗ್ನಿ ಕುಂಡಕ್ಕೆ 7 ಸುತ್ತು ಬರುವ ಆಚರಣೆಯು ವಧು - ವರರ ವೈವಾಹಿಕ ಜೀವನದ ಆರಂಭವನ್ನು ಸೂಚಿಸುತ್ತದೆ. ಈ 7 ಹೆಜ್ಜೆಗಳಲ್ಲಿ ಪ್ರತಿಯೊಂದು ಹೆಜ್ಜೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ವಧು - ವರರು ಜೊತೆಯಾಗಿ ಇಡುವ 7 ಹೆಜ್ಜೆಗಳನ್ನು ಸಪ್ತಪದಿ ಎನ್ನಲಾಗುತ್ತದೆ. ಏಳು ಹೆಜ್ಜೆಗಳು ಏಳು ಪ್ರತಿಜ್ಞೆಯನ್ನು ಸೂಚಿಸುತ್ತದೆ. ಎಷ್ಟೇ ಕಠಿಣ ಸಂದರ್ಭದಲ್ಲೂ ಜೊತೆಯಾಗಿ ಹೆಜ್ಜೆಯಿಡುವೆ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದರು.
ಅಭಿಷೇಕ್ ಮತ್ತು ಐಶ್ವರ್ಯ ಅವರ ಈ ಮಾತುಗಳಿಗೆ ಓಪ್ರಾ ಇಷ್ಟೆಲ್ಲ ಸಂಪ್ರದಾಯಗಳನ್ನು ಪಾಲಿಸಿದ ನಂತರ ವಿಚ್ಛೇದನ ಪಡೆಯುವುದು ಕಷ್ಟವಾಗುತ್ತಲ್ಲವಾ ಎಂದು ಮರು ಪ್ರಶ್ನೆ ಮಾಡಿದ್ದರು. ಇದಕ್ಕೆ ಥಟ್ ಅಂತ ಉತ್ತರ ನೀಡಿದ್ದ ಐಶ್ವರ್ಯ ರೈ ನಾವು ವಿಚ್ಛೇದನದ ಸಾಧ್ಯತೆಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿದ್ದರು. ವಿಚ್ಛೇದನದ ಕುರಿತು ನಾವು ಯೋಚನೆಯನ್ನೂ ಕೂಡ ಮಾಡುವುದಿಲ್ಲ ಎಂದು ಆತ್ಮ ವಿಶ್ವಾಸದಿಂದ ಹೇಳಿದ್ದರು. ಮುಂದುವರೆದು ಇದೇ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಮಹತ್ವವನ್ನು ವಿವರಿಸಿದ್ದರು. ತಮ್ಮ ತಂದೆ ತಾಯಿ ಅಮಿತಾಭ್ ಮತ್ತು ಜಯಾ ಬಚ್ಚನ್ ಅವರ ಜೊತೆ ದಿನದಲ್ಲಿ ಒಂದು ಬಾರಿಯಾದರೂ ಊಟವನ್ನು ಒಟ್ಟಿಗೆ ಸೇವಿಸಬೇಕು ಎಂದು ಹೇಳಿದ್ದರು. ನಮ್ಮ ತಂದೆ ಅಮಿತಾಭ್ ಬಚ್ಚನ್ ಅವರ್ ಪೋಷಕರ ಜೊತೆ ವಾಸ ಮಾಡುತ್ತಿದ್ದರು ನಾನು ನನ್ನ ಹೆತ್ತವರ ಜೊತೆ ವಾಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು.
ಸದ್ಯಕ್ಕೆ ಮದುವೆ ಮತ್ತು ವಿಚ್ಛೇದನದ ಕುರಿತು ಇಬ್ಬರು ಮಾತನಾಡಿರುವ ಈ ಮಾತುಗಳು ವೈರಲ್ ಆಗುತ್ತಿವೆ. ಎಷ್ಟೇ ಮನಸ್ತಾಪ ಇದ್ದರೂ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಯಾವುದೇ ಕಾರಣಕ್ಕೂ ಡಿವೋರ್ಸ್ ಪಡೆಯಲ್ಲ ಅನ್ನುವುದಕ್ಕೆ ಇವರು ಅವತ್ತು ಆಡಿರುವ ಮಾತುಗಳೇ ಸಾಕ್ಷಿ ಎನ್ನುತ್ತಿದ್ದಾರೆ. ಗ್ರೇ ಡಿವೋರ್ಸ್ ಕುರಿತು ಚರ್ಚೆಯನ್ನು ಕೂಡ ಅನೇಕರು ಮಾಡುತ್ತಿದ್ದಾರೆ.


Click it and Unblock the Notifications











