ಬಾಲಿವುಡ್‌ಗೆ ಮತ್ತೊಬ್ಬ ಕಲಾವಿದೆ!: ಐಶ್ವರ್ಯಾ ರೈ ಮಗಳು ಆರಾಧ್ಯ ನಟನೆಗೆ ಮನಸೋತ ನೆಟ್ಟಿಗರು

ಬಾಲಿವುಡ್ ಅಂಗಳಕ್ಕೆ ಮತ್ತೊಬ್ಬ ಕಲಾವಿದೆ ಸಿಕ್ಕ ಹಾಗಿದೆ. ಎಸ್... ಏಕೆಂದರೆ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮುದ್ದಿನ ಮಗಳು ಆರಾಧ್ಯ ಬಚ್ಚನ್ ತಮ್ಮ ಶಾಲೆಯ ಕಾರ್ಯಕ್ರಮದಲ್ಲಿ ನಾಟಕವೊಂದರಲ್ಲಿ ಪ್ರದರ್ಶನ ನೀಡಿದ್ದಾರೆ. ಈಗ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೀಗಾಗಿ ಬಾಲಿವುಡ್‌ಗೆ ಮತ್ತೊಬ್ಬ ಸ್ಟಾರ್ ಕಿಡ್ ಆಗಮನ ಎಂದು ಹೇಳಲಾಗುತ್ತಿದೆ. ಅಮಿತಾಬ್ ಬಚ್ಚನ್ ಮೊಮ್ಮಗಳು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. ಶಾಲೆಯ ವಾರ್ಷಿಕೋತ್ಸವದಂದು ಮ್ಯೂಸಿಕಲ್ ಡ್ರಾಮಾದಲ್ಲಿ ನಟನೆ ಮಾಡಿದ್ದು, ಅದು ಈಗ ಸಕತ್ ವೈರಲ್ ಆಗಿತ್ತಿದೆ. ಇತರ ಬಾಲಿವುಡ್ ಸ್ಟಾರ್ ಕಿಡ್‌ಗಳು ಇವರನ್ನು ನೋಡಿ ಕಲಿಯಬೇಕು ಅಂತಿದ್ದಾರೆ.

Aishwarya Rais daughter Aaradhya Bachchans annual day performance went viral

ಮೊಮ್ಮಗಳ ನಟನೆ ನೋಡಿ ಮನಸೋತ ಅಮಿತಾಬ್ ಬಚ್ಚನ್

ಮೊಮ್ಮಗಳ ಶಾಲಾ ವಾರ್ಷಿಕೋತ್ಸವಕ್ಕೆ ಬಚ್ಚನ್ ಕುಟುಂಬದ ಹಲವು ಮಂದಿ ಭಾಗಿಯಾಗಿದ್ದರು. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಅಗಸ್ತ್ಯ ನಂದಾ, ಬೃಂದಾ ರೈ ಬಂದಿದ್ದರು. ಮೊಮ್ಮಗಳ ನಾಟಕ ನೋಡಿ ಅಮಿತಾಬ್ ಬಚ್ಚನ್ ಅಕತ್ ಖುಷಿಯಾಗಿದ್ದಾರೆ. ಆರಾಧ್ಯ ಬಚ್ಚನ್ ವೇದಿಕೆ ಮೇಲೆ ನ್ಯಾಚುರಲ್ ಆಗಿ ನಟಿಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನು, ಈ ಸಮಾರಂಭದಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿರುವ ಅವರ ಮಕ್ಕಳು ಭಾಗವಹಿಸಿದ್ದರು. ಈವೆಂಟ್‌ನ ವೀಡಿಯೊ ಇದೀಗ ವೈರಲ್ ಆಗಿದ್ದು, ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಅವರ ಪ್ರದರ್ಶನವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಆರಾಧ್ಯ ಬಚ್ಚನ್ ನಟನೆ

ಆರಾಧ್ಯ ಬಚ್ಚನ್ ತನ್ನ ನಾಟಕದಲ್ಲಿ ತುಂಬಾ ಆತ್ಮವಿಶ್ವಾಸದಿಂದ ನಟಿಸಿದ್ದಾರೆ. ಇಂಗ್ಲಿಷ್‌ನಲ್ಲಿನ ಅವರ ಉಚ್ಛಾರಣೆಗೆ ನೆಟ್ಟಿಗರು ಮನ ಸೋತಿದ್ದಾರೆ. ಡೈಲಾಗ್ ಡೆಲಿವರಿ, ಭಾವಾಭಿನಯ ಮತ್ತು ಬಾಡಿ ಲಾಂಗ್ವೇಜ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ನಟಿ ಐಶ್ವರ್ಯಾ ರೈ ಮಗಳ ನಾಟಕ ನೋಡಿ ಖುಷಿಯಿಂದ ತಮ್ಮ ಫೋನ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.

Aishwarya Rais daughter Aaradhya Bachchans annual day performance went viral

ಇನ್ನು, 'ದಿ ಆರ್ಚೀಸ್' ಸಹ ನಟಿ ಸುಹಾನಾ ಖಾನ್ ಜೊತೆಗೆ ಅಗಸ್ತ್ಯ ನಂದಾ ಕಾರ್ಯಕ್ರಮವನ್ನು ಆನಂದಿಸಿದ್ದಾರೆ. ನಟಿ ಐಶ್ವರ್ಯಾ ಅವರ ತಾಯಿ ಬೃಂದ್ಯಾ ರೈ ಅವರು ಕಾರ್ಯಕ್ರಮದುದ್ದಕ್ಕೂ ಸಂತೋಷದಿಂದ ನಗುತ್ತಿದ್ದರು.

ಆರಾಧ್ಯ ವೀಡಿಯೊಗೆ ನೆಟ್ಟಿಗರ ಪ್ರತಿಕ್ರಿಯೆ

ಆರಾಧ್ಯ ಅವರ ಅಭಿನಯಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಸ್ಟಾರ್ ಕಿಡ್ ಅನ್ನು ಶ್ಲಾಘಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಒಂದಕ್ಕೆ ಕಾಮೆಂಟ್ ಮಾಡಿರುವವರೊಬ್ಬರು, "ಅವಳ ಧ್ವನಿಯು ಅಮ್ಮನನ್ನು ಹೋಲುತ್ತದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು "ಬ್ರೋ, ಆಕೆ ಐಶ್ವರ್ಯಾ ಮತ್ತು ಅಭಿಷೇಕ್ ಅವರ ಮಗಳು! ಪ್ರತಿಭೆಯಿಂದ ತುಂಬಿದ್ದಾರೆ" ಎಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬದ ಅನೇಕ ಸದಸ್ಯರು ಭಾಗವಹಿಸಿದ್ದರು. ಐಶ್ವರ್ಯಾ ತನ್ನ ತಾಯಿ ಬೃಂದ್ಯಾ ರೈ ಜೊತೆ ಕಾರಿನಲ್ಲಿ ಬಂದರು. ಅಭಿಷೇಕ್ ಬಚ್ಚನ್ ತಮ್ಮ ತಂದೆ ಅಮಿತಾಭ್ ಬಚ್ಚನ್ ಮತ್ತು ಅಗಸ್ತ್ಯ ನಂದಾ ಅವರೊಂದಿಗೆ ಕಾರ್ಯಕಮ ಸ್ಥಳಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಮತ್ತು ಅವರ ಅವಳಿ ಮಕ್ಕಳಾದ ಯಶ್ ಮತ್ತು ರೂಹಿ, ಕರೀನಾ ಕಪೂರ್ ಮತ್ತು ಅವರ ಮಗ ತೈಮೂರ್ ಅಲಿ ಖಾನ್, ಶಾರುಖ್ ಖಾನ್ ಮತ್ತು ಅವರ ಕುಟುಂಬ, ಶಾಹಿದ್ ಕಪೂರ್ ಮತ್ತು ಮೀರಾ ಕಪೂರ್ ಅವರೊಂದಿಗೆ ಮಗ ಜೈನ್ ಮತ್ತು ಮಗಳು ಮಿಶಾ ಮುಂತಾದವರು ಕಾಣಿಸಿಕೊಂಡಿದ್ದಾರೆ.

More from Filmibeat

English summary
Aaradhya Bachchan's annual day performance went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X