ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ, ನೆರೆಮನೆಯವರು ಹೇಳಿದ ಸತ್ಯವೇನು ?

ಕಾಲ ಎಷ್ಟೇ ಬದಲಾದರು ಇವತ್ತು ಕೂಡ ಅದೂ-ಇದೂ ಎಂದು ಮಾತನಾಡುವರ ಸಂಖ್ಯೆ ಕಡಿಮೆಯಾಗಿಲ್ಲ. ತಮಗೆ ಸಂಬಂಧ ಇಲ್ಲದ ವಿಚಾರದ ಕುರಿತು ಹಲವಾರು ಜನ ಇವತ್ತು ಕೂಡ ಮಾತನಾಡುತ್ತಲೇ ಇರುತ್ತಾರೆ. ತಮ್ಮ ಮಾತುಗಳಿಂದ ಇನ್ನೊಬ್ಬರಿಗೆ ನೋವಾಗಬಹುದು ಎಂಬ ಕಿಂಚಿತ್ ಯೋಚನೆ ಕೂಡ ಮಾಡದೇ ಹೀಯಾಳಿಸುವುದು ..ನಿಂದಿಸುವುದೇ..ಸಾಧನೆ ಎಂಬಂತೆ ಕಾಲೆಳೆಯುತ್ತಾರೆ.ಆಕಾರ..ರೂಪ..ಒನಪು.. ಒಯ್ಯಾರ.. ಖಾಸಗಿ ವಿಷಯವನ್ನು ಬಿಡದಂತೆ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಇನ್ನು.. ಸೆಲೆಬ್ರೆಟಿಗಳ ಪಾಡು ಹೇಳಲು ಅಸಾಧ್ಯ. ಕುಂತರು .. ನಿಂತರು .. ಬದಲಾದ ಕಾಲದಲ್ಲಿ ಅನೇಕರ ಬಾಯಿಗೆ ಇವರು ಆಹಾರವಾಗುತ್ತಲೇ ಇರುತ್ತಾರೆ. ಟ್ರೋಲ್ ಹೆಸರಿನಲ್ಲಿ ನಿಂದನೆಗೆ ಗುರಿಯಾಗುತ್ತಲೇ ಇರುತ್ತಾರೆ. ಇಷ್ಟೇ ಅಲ್ಲ ಹಲವು ತಾರೆಯರು ಕುರಿತು ಹಲವರು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲೇ ಇರುತ್ತಾರೆ.

Aishwarya Rai s Neighbour Slams Garbage Divorce Rumours With Abhishek Bachchan

ಇದೆಲ್ಲದರಿಂದ ನೊಂದು ಬೆಂದು ಹಲವರು ಕೆರಳಿ ಕೆಂಡವಾಗುತ್ತಾರೆ. ಸಹನೆಯನ್ನು ಕಳೆದುಕೊಂಡು ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗುತ್ತಾರೆ. ಮತ್ತೂ ಕೆಲವರು ನಾಯೊ ಬೊಗಳಿದರೆ ಸ್ವರ್ಗ ಲೋಕ ಹಾಳಾಗುತ್ತಾ ಎಂದುಕೊಂಡು ಸುಮ್ಮನಾಗುತ್ತಾರೆ. ಉದಾಹರಣೆಗೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್.

ಹೌದು, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಇನ್ನೇನೂ .. ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇಂದು ನಿನ್ನೆಯದ್ದಲ್ಲ. ಹಲವು ವರ್ಷಗಳಿಂದ ಈ ಮಾತು ಕೇಳಿ ಬರುತ್ತಲೇ ಇದೆ.

ಆದರೂ ಕೂಡ ಈ ಅಂತೆ-ಕಂತೆಗಳ ಬಗ್ಗೆ ಐಶ್ಚರ್ಯ ರೈ ಮಾತನಾಡಿಲ್ಲ. ಅಭಿಷೇಕ್ ಬಚ್ಚನ್ ಕೂಡ ಮಾತನಾಡುವ ಗೋಜಿಗೆ ಹೋಗಿಲ್ಲ. ಬದಲಿಗೆ ತಮ್ಮ ತಮ್ಮ ಕೆಲಸಗಳಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಆಗಾಗ ಜೊತೆಯಲ್ಲಿ ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಆದರೂ ಕೂಡ ವಿಚ್ಚೇದನದ ವದಂತಿಯ ಕುರಿತು ಮೌನವನ್ನು ಇಬ್ಬರು ಮುರಿದಿಲ್ಲ. ಈ ಹಿನ್ನೆಲೆ ಇಬ್ಬರ ಈ ಮೌನದ ಕುರಿತು ಕೂಡ ಹಲವರು ಹಲವು ಸಲ ಪ್ರಶ್ನೆ ಮಾಡಿದ್ದು ಇದೆ. ಮೌನಂ ಸಮ್ಮತಿ ಲಕ್ಷಣಂ ಎಂದುಕೊಂಡಿದ್ದು ಇದೆ.

ಇನ್ನೂ..ಇದರ ನಡುವೆ ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯ ರೈ ''ಜಲ್ಸಾ''ದಲ್ಲಿ ವಾಸ ಮಾಡುತ್ತಿಲ್ಲ. ಬದಲಿಗೆ ತವರು ಮನೆಯಲ್ಲಿದ್ದಾರೆ ಎನ್ನುವ ಸುದ್ದಿ ಕೂಡ ತೇಲಿ ಬಿಡಲಾಗಿದೆ. ಆದರೆ, ವಾಸ್ತವದಲ್ಲಿ ಅಂತೆ-ಕಂತೆಯ ಸಂತೆಯಲ್ಲಿ ಇರುವ ಜನ ಅಂದುಕೊಂಡತೆ ಅಭಿಷೇಕ್ ಬಚ್ಚನ್ ಮತ್ತು ಐಶ್ಚರ್ಯ ರೈ ಅವರ ದಾಂಪತ್ಯದಲ್ಲಿ ಯಾವ ಬಿರುಕು ಕೂಡ ಮೂಡಿಲ್ಲ. ಇಬ್ಬರು ಅನೋನ್ಯವಾಗಿದ್ದಾರೆ. ಸುಖವಾಗಿದ್ದಾರೆ. ಒಂದೇ ಮನೆಯಲ್ಲಿಯೇ ವಾಸ ಮಾಡುತ್ತಿದ್ದಾರೆ. ಇಂತಹದ್ದೊಂದು ಸತ್ಯವನ್ನು ಸದ್ಯ ''ಪ್ರಹ್ಲಾದ್ ಕಕ್ಕರ್'' ಹೇಳಿದ್ದಾರೆ.

aishwarya-rais-neighbour-slams-garbage-divorce-rumours-with-abhishek-bachchan

ಹೌದು, ಪ್ರಹ್ಲಾದ್ ಕಕ್ಕರ್.. ಖ್ಯಾತ ಆಡ್ ಮೇಕರ್. ಅಮಿತಾಬ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರಸಿದ್ದ ಪೆಪ್ಸಿ ಜಾಹೀರಾತು ಸೇರಿ ಹಲವು ಜಾಹೀರಾತುಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಇವರದ್ದು.ಇದಲ್ಲದೇ ಹಲವು ರೆಸ್ಟೋರೆಂಟ್‌ಗಳನ್ನು ಕೂಡ ಹೊಂದಿರುವ ಪ್ರಹ್ಲಾದ್ ಕಕ್ಕರ್ ನೇರ ವ್ಯಕ್ತಿತ್ವದವರು. ಇವರ ಪ್ರಾಮಾಣಿಕತೆ ಮತ್ತು ಸ್ವಭಾವದ ಕುರಿತು ಹಲವರು ಮಾತನಾಡುತ್ತಾರೆ. ವಿಶೇಷ ಅಂದರೆ ಐಶ್ವರ್ಯ ರೈ ಅವರ ತಾಯಿ ವಾಸ ಮಾಡುವ ಬಿಲ್ಡಿಂಗ್‌ನಲ್ಲಿಯೇ ಪ್ರಹ್ಲಾದ್ ಕಕ್ಕರ್ ಕೂಡ ವಾಸ ಮಾಡುತ್ತಾರೆ.

ಇಂಥಾ ಪ್ರಹ್ಲಾದ್ ಕಕ್ಕರ್ ಸದ್ಯ ಪತ್ರಕರ್ತ ''ವಿಕ್ಕಿ ಲಾಲ್ವಾನಿ'' ಅವರ ಜೊತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಪೈಕಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ದಾಂಪತ್ಯ ಜೀವನದ ವಿಚಾರ ಕೂಡ ಒಂದು. ಈ ಕುರಿತು ಮಾತನಾಡಿರುವ ಪ್ರಹ್ಲಾದ್ ಕಕ್ಕರ್, ಅಭಿಷೇಕ್ ಬಚ್ಚನ್ ಮನೆಯಿಂದ ಐಶ್ವರ್ಯ ಹೊರ ಬಂದಿದ್ದಾರೆ ಎನ್ನುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

aishwarya-rais-neighbour-slams-garbage-divorce-rumours-with-abhishek-bachchan

ಪದೇ ಪದೇ ತಾಯಿಯ ಮನೆಯಲ್ಲಿ ಐಶ್ವರ್ಯ ರೈ ಕಾಣಿಸಿಕೊಳ್ಳುವುದಕ್ಕೆ ಕಾರಣವನ್ನು ಹೇಳಿರುವ ಪ್ರಹ್ಲಾದ್ ಕಕ್ಕರ್, ನಿಜಾ ಹೇಳಬೇಕು ಅಂದರೆ ಅದು ಐಶ್ವರ್ಯ ರೈ ಅವರ ದೈನಂದಿನ ದಿನಚರಿ ಎಂದು ಹೇಳಿದ್ದಾರೆ. ತಮ್ಮ ಮಗಳು ಆರಾಧ್ಯಳನ್ನು ದಿನನಿತ್ಯ ಶಾಲೆಗೆ ಐಶ್ವರ್ಯ ರೈ ಅವರೇ ಕರೆದುಕೊಂಡು ಹೋಗುತ್ತಾರೆ. ಮಗಳನ್ನು ಶಾಲೆಗೆ ಕಳುಹಿಸಿದ ನಂತರ ಐಶ್ವರ್ಯ ತಮ್ಮ ತಾಯಿಯ ಮನೆಗೆ ಬರುತ್ತಾರೆ. ತಾಯಿಯ ಜೊತೆ ಸಮಯ ಕಳೆಯುತ್ತಾರೆ ಎಂದು ಹೇಳಿರುವ ಪ್ರಹ್ಲಾದ್ ಕಕ್ಕರ್ ಆ ನಂತರ ಮತ್ತೆ ಸಂಜೆ ಶಾಲೆಯ ಬಳಿ ತೆರಳಿ ಮಗಳನ್ನು ಕರೆದುಕೊಂಡು ತಮ್ಮ ಗಂಡನ ಮನೆಗೆ ಮರಳುತ್ತಾರೆ ಎಂದು ಹೇಳಿದ್ದಾರೆ.

ಐಶ್ವರ್ಯ ರೈ ತಮ್ಮ ತಾಯಿಯ ಮನೆಗೆ ಬರುವುದು ದಾಂಪತ್ಯದಲ್ಲಿನ ಕಲಹದಿಂದಾಗಿ ಅಲ್ಲ ಬದಲಿಗೆ ತಮ್ಮ ತಾಯಿಯ ಮೇಲಿರುವ ಮತ್ತು ಕಾಳಜಿಯಿಂದ ಅವರು ಮನೆಗೆ ಬರುತ್ತಾರೆ ಎಂದು ಹೇಳಿರುವ ಪ್ರಹ್ಲಾದ್ ಕಕ್ಕರ್ ಅವರ ತಾಯಿ ವೃಂದಾ ರೈ ಅವರಿಗೆ ವಯಸ್ಸಾಗಿದೆ. ಅನಾರೋಗ್ಯ ಕಾಡುತ್ತಿದೆ. ಈ ಹಿನ್ನೆಲೆ ಮಗಳನ್ನು ಶಾಲೆಗೆ ಕಳುಹಿಸಿದ ನಂತರ ಅವರು ಮನೆಗೆ ಬರುತ್ತಾರೆ ಅಷ್ಟೇ ಹೊರತು ಬೇರೆ ಯಾವ ಕಾರಣ ಇಲ್ಲ ಎಂದು ಹೇಳಿದ್ದಾರೆ.

ಕೇವಲ ಐಶ್ವರ್ಯ ಮಾತ್ರ ಅಲ್ಲ ಐಶ್ವರ್ಯ ಜೊತೆ ಕೆಲ ಒಮ್ಮೆ ಅಭಿಷೇಕ್ ಬಚ್ಚನ್ ಕೂಡ ತಮ್ಮ ಅತ್ತೆಯ ಮನೆಗೆ ಬರುತ್ತಾರೆ. ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಕಾಲ ಕಳೆದು ಹೋಗುತ್ತಾರೆ ಎಂದು ಹೇಳಿರುವ ಪ್ರಹ್ಲಾದ್ ಈ ಎಲ್ಲ ಸತ್ಯಗಳನ್ನು ಅರಿಯದ ಕೆಲವರು ಸುಖಾ ಸುಮ್ಮನೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಇಬ್ಬರ ಸಂಬಂಧವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಹಾಗೊಂದು ವೇಳೆ ಬಿರುಕು ಇದ್ದಿದ್ದರೆ ಅಭಿಷೇಕ್ ಬಚ್ಚನ್ ಯಾಕೆ ಐಶ್ವರ್ಯ ಮನೆಗೆ ಬರುತ್ತಿದ್ದರು ಎಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.

ಇನ್ನೂ ಜಯಾ ಬಚ್ಚನ್.. ಅಮಿತಾಬ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ನಂದಾ ಅವರ ಜೊತೆ ಐಶ್ವರ್ಯ ಸಂಬಂಧ ಹಳಸಿದೆ ಎಂಬ ಸುದ್ದಿಯನ್ನು ಕೂಡ ತಳ್ಳಿ ಹಾಕಿರುವ ಪ್ರಹ್ಲಾದ್ ಕಕ್ಕರ್, ಐಶ್ವರ್ಯ ಆ ಮನೆಯ ಸೊಸೆ ಅಂದು, ಇಂದು, ಮುಂದು ಕೂಡ ಎಂದು ಹೇಳಿದ್ದಾರೆ. ಮನೆಯನ್ನು ನಿಭಾಯಿಸುವುದು ಹೇಗೆ ಎನ್ನುವುದು ಅವರಿಗೆ ಗೊತ್ತು ಎಂದಿದ್ದಾರೆ.

ತಮ್ಮ ಕುರಿತು ಇಷ್ಟೆಲ್ಲಾ ಮಾತು ಕೇಳಿ ಬರುತ್ತಿದ್ದರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ಮೌನ ವಹಿಸಿರುವುದೇಕೆ ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಪ್ರಹ್ಲಾದ್ ಕಕ್ಕರ್ ಯಾಕೆ ಮಾತನಾಡಬೇಕು.. ಸ್ಪಷ್ಟನೆ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಬೇಕಿದ್ದರೆ ಬೊಗಳುತ್ತಲೇ ಇರಿ ಅವರಿಬ್ಬರು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಅವರ ಮೌನ ಅವರ ಘನತೆಯ ಸಂಕೇತವೇ ಹೊರತು ದೌರ್ಬಲ್ಯವಲ್ಲ ಎಂದು ಹೇಳಿದ್ದಾರೆ.

More from Filmibeat

English summary
The truth behind the Aishwarya Rai and Abhishek Bachchan divorce rumours is finally out. A family insider reveals why Aishwarya is often with her mother, putting an end to the ongoing speculation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X