ಬಾಲಿವುಡ್‌ಗೆ ಜಿಗಿದ ಕುಡ್ಲ ಕುವರಿ: ಆಯುಷ್ಮಾನ್ ಖುರಾನಾ ಚಿತ್ರದಲ್ಲಿ ಅಯ್ಯೋ ಶ್ರದ್ಧಾ

ಅಯ್ಯೋ ಶ್ರದ್ಧಾ ಬಹುಶಃ ಸೋಶಿಯಲ್‌ ಮೀಡಿಯಾದಲ್ಲಿ ಈ ಹೆಸರು ಕೇಳದವರೇ ಇಲ್ಲ. ಇವರ ಮಾತುಗಳನ್ನು ಕೇಳಿ ಅಯ್ಯಯ್ಯೋ ಶ್ರದ್ಧಾ ಎಂದು ಹೊಟ್ಟೆ ಹುಣ್ಣಾಗುವಂತೆ ನಕ್ಕವರೆ ಹೆಚ್ಚು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಆರಂಭವಾದ ಅಯ್ಯೋ ಶ್ರದ್ಧಾ ವಿಡಿಯೋ ಹವಾ ಸೋಶಿಯಲ್‌ ಮೀಡಿಯಾಗಳಲ್ಲಿ ಈವರೆಗೂ ನಿಂತಿಲ್ಲ.

ಆರ್‌ಜೆ ಆಗಿದ್ದ ಶ್ರದ್ಧಾ ಕನ್ನಡ, ಇಂಗ್ಲಿಷ್‌, ಹಿಂದಿ ಈ ಮೂರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಮನೆಯಲ್ಲಿ ಬಳಸುವ ವಸ್ತುಗಳು, ದಿನ ನಿತ್ಯಾ ಆಗು ಹೋಗುಗಳ ವಿಚಾರವೇ ಇವರ ವಿಡಿಯೋ ಕಂಟೆಟ್‌ ಆಗಿತ್ತು. ಇನ್ನೂ ವಿಶೇಷ ಎಂಬಂತೆ ಶ್ರದ್ಧಾ ವಿಡಿಯೋದಲ್ಲಿ ಬರುವ ಪ್ರತಿಯೊಂದು ಪಾತ್ರವನ್ನೂ ಕೂಡ ಅವರೇ ನಿರ್ವಹಿಸುತ್ತಿದ್ದರು. ಧ್ವನಿ, ಹಾವ ಭಾವಗಳನ್ನು ಪಾತ್ರಕ್ಕೆ ಬೇಕಾದ ರೀತಿಯಲ್ಲಿ ಬದಲಾಯಿಸುತ್ತಿದ್ದ ಶ್ರದ್ಧಾ ಬರಿ ಮಾತುಗಾರ್ತಿ ಅಲ್ಲ, ಆ್ಯಂಕ್ಟಿಂಗ್‌ನಲ್ಲೂ ಎತ್ತಿದ ಕೈ ಆಗಿದ್ದರು.

ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಕಂಟೆಂಟ್ ಮಾಡುತ್ತಿದ್ದ ಶದ್ದಾ ಈಗಾಗಲೇ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲೇ ಹಿಟ್‌ ಆಗಿದ್ದ ಶ್ರದ್ಧಾ ಇತ್ತೀಚಿಗೆ ಹಲವು ಕಂಪನಿಗಳ ಜಾಹಿರಾತಿನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆರ್‌ಜೆಯಿಂದ ನಟಿಯಾಗಿ ಬಡ್ತಿ ಪಡೆದಿದ್ದ ಶ್ರದ್ಧಾ ಹೊಸ ಗುಡ್‌ ನ್ಯೂಸ್‌ವೊಂದನ್ನು ನೀಡಿದ್ದಾರೆ.

ಈವರೆಗೂ ಸೋಶಿಯಲ್‌ ಮೀಡಿಯಾ ಹಾಗೂ ಕೆಲ ಜಾಹಿರಾತಿನಲ್ಲಿ ಮಿಂಚಿದ್ದ ಶ್ರದ್ಧಾ ಪುಷ್ಪವಲ್ಲಿ ವೆಬ್‌ ಸೀರಿಸ್‌ನಲ್ಲಿ ಕೂಡ ನಟಿದ್ದರು. ಇದೀಗ ಶ್ರದ್ಧಾ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಿದ್ದು, ಮಂಗಳೂರಿನ ಕುವರಿ ನೇರವಾಗಿ ಬಾಲಿವುಡ್‌ ಅಂಗಳಕ್ಕೆ ಜಿಗಿದಿದ್ದಾರೆ. ಹಿಂದಿ ಭಾಷೆಯಲ್ಲೂ ಉತ್ತಮ ಹಿಡಿತ ಹೊಂದಿರುವ ಶ್ರದ್ಧಾ ಬಾಲಿವುಡ್‌ ಚಿತ್ರದಲ್ಲಿ ನಟಿಸುವು ಖಚಿತವಾಗಿದೆ. ಈ ವಿಚಾರವನ್ನು ಸ್ವತಃ ಶ್ರದ್ಧಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Aiyyo Shraddha Enters Bollywood In Upcoming Movie Doctor G

ಶ್ರದ್ಧಾ ಅವರು ಇನ್ಸ್ಟಾಗ್ರಾಮ್‌ ಪೋಸ್ಟ್ ಮೂಲಕ ಬಾಲಿವುಡ್‌ನಲ್ಲಿ ನಟಿಸುತ್ತಿರುವ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ತಾವು 'ಡಾಕ್ಟರ್ ಜಿ' ಸಿನಿಮಾದಲ್ಲಿ ಅಯ್ಯೋ ಶ್ರದ್ಧಾ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ. ಅನುಭೂತಿ ಕಶ್ಯಪ್ ನಿರ್ದೇಶನದ ಡಾಕ್ಟರ್ ಜಿ ಚಿತ್ರದಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ರಾಕುಲ್ ಪ್ರೀತ್ ಸಿಂಗ್, ಶೀಬಾ ಚಡ್ಡಾ ಮತ್ತು ಶೆಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್‌ ಕೂಡ ರಿಲೀಸ್‌ ಆಗಿದೆ.

ಟ್ರೈಲರ್‌ನಲ್ಲೇ ಪ್ರೇಕ್ಷಕರನ್ನು ನಕ್ಕು ನಗಿಸಿರುವ 'ಡಾಕ್ಟರ್‌ ಜಿ' ಚಿತ್ರ ಸಿನಿ ಪ್ರಿಯರಲ್ಲಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಆಯುಷ್ಮಾನ್ ಖುರಾನಾ ಜೂನಿಯರ್‌ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಓರ್ವ ಡಾಕ್ಟರ್‌ ಕೆಲಸದ ಆರಂಭದ ದಿನಗಳಲ್ಲಿ ಅನುಭವಿಸುವ ಬವಣೆಗಳನ್ನು ಚಿತ್ರದಲ್ಲಿ ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಕಾಮಿಡಿ ಜೊತೆಗೆ ಒಂದು ಉತ್ತಮ ಸಂದೇಶವನ್ನು ನೀಡಲು 'ಡಾಕ್ಟರ್‌ ಜಿ' ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ಶ್ರದ್ಧಾ ನಟಿಸಿದ್ದು, ಟ್ರೈಲರ್‌ನಲ್ಲೂ ಶ್ರದ್ಧಾ ಮೆಡಿಕಲ್‌ ಸ್ಟುಡೆಂಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೂಲತಃ ಮಂಗಳೂರಿನವರಾದ ಅಯ್ಯೋ ಶ್ರದ್ಧಾ, ತಮ್ಮ ವಿದ್ಯಾಭ್ಯಾಸದ ಬಳಿಕ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗುತ್ತಾರೆ. ತಮ್ಮ ಇಷ್ಟದ ಉದ್ಯೋಗ ಇದಲ್ಲ ಎಂದು ನಿರ್ಧರಿಸಿದ್ದ ಶ್ರದ್ಧಾ ತಮ್ಮ ಕೆಲಸದಿಂದ ಹೊರಬಂದರು. ಬಳಿಕ ಆರ್‌ಜೆ ಕೆಲಸ ಆರಂಭಿಸಿದ ಶ್ರದ್ಧಾ ಸೋಶಿಯಲ್‌ ಮೀಡಿಯಾಗಳಲ್ಲಿ ವಿಡಿಯೋ ಮಾಡುವ ಮೂಲಕ ಜನಪ್ರಿಯತೆ ಪಡೆದರು. ಇನ್ನು ಶ್ರದ್ಧಾ ಕನ್ನಡದ ರಿಯಾಲಿಟಿ ಶೋ ಡಾನ್ಸಿಂಗ್‌ ಸ್ಟಾರ್‌ ನಿರೂಪಕಿಯಾಗಿದ್ದರು. ಜೊತೆಗೆ ವೆಬ್‌ ಸೀರಿಸ್‌ಗಳಲ್ಲೂ ನಟಿಸಿದ್ದಾರೆ. ಇದೀಗ ಶ್ರದ್ಧಾ ಬಾಲಿವುಡ್‌ ಚಿತ್ರದ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿದ್ದಾರೆ.

More from Filmibeat

English summary
Aiyyo Shraddha enters bollywood in upcoming movie doctor g with Ayushmann khurrana,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X