For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ರಿಮೇಕ್ ಆಗ್ತಿದೆ ಮತ್ತೊಂದು ತೆಲುಗು ಸಿನಿಮಾ: ಅಜಯ್ ದೇವಗನ್ ನಿರ್ಮಾಣ

  |

  ತೆಲುಗಿನ ಅನೇಕ ಸಿನಿಮಾಗಳು ಹಿಂದಿಗೆ ರಿಮೇಕ್ ಆಗಿ ಸೂಪರ್ ಹಿಟ್ ಆಗಿವೆ. ಇತ್ತೀಚಿಗೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳು ಬಾಲಿವುಡ್ ಮಂದಿಯ ಗಮನ ಸೆಳೆಯುತ್ತಿವೆ. ದಕ್ಷಿಣದಲ್ಲಿ ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ಬಾಲಿವುಡ್ ಮಂದಿ ಹಿಂದಿ ರಿಮೇಕ್ ಗೆ ತುದಿಗಾಲಿನಲ್ಲಿ ನಿಂತಿರುತ್ತಾರೆ. ಇತ್ತೀಚಿಗಷ್ಟೆ ತಮಿಳಿನ ಮಾಸ್ಟರ್ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಬೆನ್ನಲ್ಲೇ ತೆಲುಗಿನ ಮತ್ತೊಂದು ಸಿನಿಮಾ ಬಾಲಿವುಡ್ ಕಡೆ ಹೊರಟಿದೆ.

  ತೆಲುಗು ನಟ ಅಲ್ಲಾರಿ ನರೇಶ್ ನಟನೆಯ 'ನಾಂದಿ' ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಮತ್ತು ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಒಟ್ಟಿಗೆ ಸೇರಿ ಬಾಲಿವುಡ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ನಟ ಅಜಯ್ ದೇವಗನ್ ಅಧಿಕೃತ ಗೊಳಿಸಿದ್ದಾರೆ.

  'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್‌ಗೆ ಎಂಟ್ರಿಯಾದ ಸ್ಟಾರ್ ನಟಿ?'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್‌ಗೆ ಎಂಟ್ರಿಯಾದ ಸ್ಟಾರ್ ನಟಿ?

  ಕ್ರೈಮ್ ಮತ್ತು ಕೋರ್ಟ್ ಸುತ್ತ ನಡೆಯುವ ನಾಂದಿ ಸಿನಿಮಾ ತೆಲಗು ಪ್ರೇಕ್ಷಕರ ಮನ ಗೆದ್ದಿತ್ತು. ಇದೀಗ ಬಾಲಿವುಡ್ ಮಂದಿಯನ್ನು ರಂಜಿಸಲು ಸಿದ್ಧವಾಗುತ್ತಿದೆ. ಈ ಬಗ್ಗೆ ಅಜಯ್ ದೇವಗನ್ ಸಾಮಾಜಿಕ ಜಾಲತಾಣದಲ್ಲಿ, "ಎಲ್ಲರಲ್ಲೂ ಒಂದು ಪ್ರಮುಖ ಕಥೆಯನ್ನು ಹಂಚಿಕೊಳ್ಳುವ ಸಮಯ" ಎಂದು ಬರೆದು ಅಧಿಕೃತ ಘೋಷಣೆ ಮಾಡಿದರು.

  ನಾಂದಿ ಸಿನಿಮಾ 2021, ಫೆಬ್ರವರಿ 19ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಲ್ಲಾರಿ ನರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವರಲಕ್ಷ್ಮಿ ಶರತ್ ಕುಮಾರ್, ಪ್ರಿಯದರ್ಶಿ ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಬಹಿರಂಗ ವಾಗುತ್ತಿದ್ದಂತೆ ದಿಲ್ ರಾಜ್ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದ್ದರು.

  Ajay Devgan and Dil Raju produce Hindi remake of Naandhi
  10 ಕೋಟಿ ಕೊಟ್ರು ಈ ಕೆಲಸ ಮಾಡಲ್ಲ ಎಂದ ಶಿಲ್ಪಾ ಶೆಟ್ಟಿ | Filmibeat Kannada

  ಇನ್ನು ಹಿಂದಿ ನಾಂದಿಯಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದನ್ನು ನಿರ್ಮಾಪಕರು ಇನ್ನು ಬಹಿರಂಗ ಪಡಿಸಿಲ್ಲ. ಹಾಗಾಗಿ ಪಾತ್ರವರ್ಗದ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

  English summary
  Bollywood Actor Ajay Devgan and Dil Raju produce Hindi remake of Naandhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X