ಸಂಜಯ್ ಲೀಲಾ ಬನ್ಸಾಲಿ 'ಗಂಗೂಬಾಯಿ' ಸಿನಿಮಾಗೆ ಇಬ್ಬರು ಸ್ಟಾರ್ ನಟರ ಎಂಟ್ರಿ

ಬಾಲಿವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಒಂದು. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

Recommended Video

Sudeep might play villain against Mahesh Babu | Filmibeat Kannada

ಗಂಗೂಬಾಯಿ ಕಥಿಯಾವಾಡಿ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಲಾಗಿದೆ. ಲಾಕ್ ಡೌನ್ ಸದ್ಯ ಚಿತ್ರೀಕರಣ ಬಂದ್ ಮಾಡಲಾಗಿತ್ತು. ಆದರೀಗ ಜುಲೈಯಿಂದ ಮತ್ತೆ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ.

ಈ ನಡುವೆ ಚಿತ್ರಕ್ಕೆ ಇಬ್ಬರು ಸ್ಟಾರ್ ನಟರು ಎಂಟ್ರಿ ಕೊಟ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಅದು ಮತ್ಯಾರು ಅಲ್ಲ, ಅಜಯ್ ದೇವಗನ್ ಮತ್ತು ಇಮ್ರಾನ್ ಹಶ್ಮಿ. ಹೌದು, ಈಗಾಗಲೆ ಇಮ್ರಾನ್ ಹಶ್ಮಿ ಚಿತ್ರೀಕರಣದಲ್ಲಿ ಭಾಗಿ ಅವರ ಭಾಗದ ಚಿತ್ರೀಕರಣ ಮುಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಜಯ್ ದೇವಗನ್ ಚಿತ್ರೀಕರಣ ಪ್ರಾರಂಭ ವಾಗುತ್ತಿದ್ದಂತೆ ಭಾಗಿಯಾಗಲಿದ್ದಾರಂತೆ.

Ajay Devgan And Emraan Hashmi Will Join Alia Bhatts Gangubai Kathiawadi

ಅಜಯ್ ದೇವಗನ್ ಕರೀಮ್ ಲಾಲ್ ಎನ್ನುವ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆದರೆ ಇಮ್ರಾನ್ ಹಶ್ಮಿ ಪಾತ್ರ ಯಾವುದು ಎನ್ನುವ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ. ಇವರಿಬ್ಬರು ಇಲ್ಲದೆ ಗಂಗೂಬಾಯಿ ಪಯಣ ಅಪೂರ್ಣ. ಹಾಗಾಗಿ ಚಿತ್ರದಲ್ಲಿ ಇವರಿಬ್ಬರ ಪಾತ್ರ ತುಂಬಾ ಮುಖ್ಯವಾಗಿದೆಯಂತೆ.

Ajay Devgan And Emraan Hashmi Will Join Alia Bhatts Gangubai Kathiawadi

ಸದ್ಯ ಲಾಕ್ ಡೌನ್ ನಂತರ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದು, ಜುಲೈಯಿಂದ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ. ಇತ್ತೀಚಿಗೆ ಸಾಕಷ್ಟು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಲು ಸಿದ್ಧವಾಗಿವೆ. ಆದರೆ ಗಂಗೂಬಾಯಿ ಸಿನಿಮಾ ನೇರವಾಗಿ ಚಿತ್ರಮಂದಿರಗಳಲ್ಲಿಯೇ ತೆರೆಗೆ ಬರಲಿದೆಯಂತೆ.

More from Filmibeat

English summary
Ajay Devgan And Emraan Hashmi will join alia Bhatt's Gangubai Kathiawadi. sanjay leela bhansali Directed by this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X