'ದೃಶ್ಯಂ-2' ಹಿಂದಿ ರಿಮೇಕ್ ಗೆ ಸಿದ್ಧತೆ: ಮೋಹನ್ ಲಾಲ್-ಮೀನಾ ಪಾತ್ರದಲ್ಲಿ ಯಾರು ನಟಿಸುತ್ತಾರೆ?

ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. 2013ರಲ್ಲಿ ರಿಲೀಸ್ ಆಗಿದ್ದ ದೃಶ್ಯಂ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಜಾರ್ಜ್ ಕುಟ್ಟಿಯ ಚಾಕಚಕ್ಯತೆಗೆ ಅಭಿಮಾನಿಗಳು ಮನಸೋತಿದ್ದಾರೆ.

ದೃಶ್ಯಂ -2 ರಿಲೀಸ್ ಆಗುತ್ತಿದ್ದಂತೆ ಬೇರೆ ಬೇರೆ ಭಾಷೆಯಲ್ಲಿ ರಿಮೇಕ್ ಮಾಡುವ ಪ್ಲಾನ್ ನಡೆಯುತ್ತಿದೆ. ಈಗಾಗಲೇ ತೆಲುಗಿನಲ್ಲಿ ದೃಶ್ಯಂ-2 ರಿಮೇಕ್ ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೆ ಹಿಂದಿಯಲ್ಲೂ ರಿಮೇಕ್ ಮಾಡುವ ಬಗ್ಗೆ ಯೋಚನೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ದೃಶ್ಯಂ ಹಿಂದಿ ರಿಮೇಕ್ ನಲ್ಲಿ ಅಜಯ್ ದೇವಗನ್ ಮತ್ತು ಶ್ರೀಯಾ ಶರಣ್ ಕಾಣಿಸಿಕೊಂಡಿದ್ದರು. ಇನ್ನು ಪ್ರಮುಖ ಪಾತ್ರದಲ್ಲಿ ನಟಿ ಟಬು ಮಿಂಚಿದ್ದರು. ಇದೀಗ ದೃಶ್ಯಂ-2 ರಿಮೇಕ್ ಮಾಡುವ ಬಗ್ಗೆ ಮಾತುಕತೆ ನಡೆದಿದ್ದು, ಅಜಯ್ ದೇವಗನ್ ಮತ್ತು ಟಬು ಇಬ್ಬರು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

Ajay Devgan and Tabu team up for Hindi remake of Mohanlals drishyam-2

ದೃಶ್ಯಂ ಮಾಡಿದ ಸಿನಿಮಾತಂಡವೇ ಪಾರ್ಟ್ ಮಾಡುವ ಬಗ್ಗೆ ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಾರಿ ಶ್ರೀಯಾ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ಮಲಯಾಳಂನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ದೃಶ್ಯಂ-2 ಸಿನಿಮಾ ಬೇರೆ ಬೇರೆ ಭಾಷೆಯಲ್ಲೂ ಯಶಸ್ಸು ಕಾಣುತ್ತಾ ಎಂದು ಕಾದು ನೋಡಬೇಕು.

ಪಾರ್ಟ್-2ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ನಿರ್ದೇಶಕ ಜೀತು ಜೋಸೆಫ್ ಮತ್ತು ಮೋಹನ್ ಲಾಲ್ ಇಬ್ಬರು ಪಾರ್ಟ್-3 ಮಾಡುವ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ. ಪಾರ್ಟ್-3 ಮಾಡುವ ಬಗ್ಗೆ ನಿರ್ಮಾಪಕ ಆಂಟೋನಿ ಪೆರುಂಬವೂರ್ ಸುಳಿವು ಬಿಟ್ಟುಕೊಟ್ಟಿದ್ದಾರೆ. ಈಗಾಗಲೇ ಪ್ಲಾನ್ ನಡೆಯುತ್ತಿದೆ ಎಂದು ಹೇಳಿದ್ದಾರೆ.

Recommended Video

ನೆಟ್ಟಿಗರಿಗೆ ಪ್ರಿಯಾಂಕ ಚೋಪ್ರಾ ಏನ್ ಹೇಳಿದ್ದಾರೆ ಗೊತ್ತಾ? | Priyanka Chopra | Filmibeat Kannada

More from Filmibeat

English summary
Bollywood Actor Ajay Devgan and Tabu team up for Hindi remake of Mohanlal's drishyam-2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X