ಅಮಿತಾಬ್, ಅರ್ಜುನ್ ಆಯ್ತು ಈಗ ಅಜಯ್ ದೇವಗನ್ ಸರದಿ; ಬಂಗಲೆ ಖರೀದಿಸಿದ ನಟ
ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಸೋಂಕಿತರು ಕೊರೊನಾದಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಲಾಕ್ ಡೌನ್‌ನಿಂದ ಕೆಲಸವಿಲ್ಲದೆ ಅನೇಕರು ಒಂದೊತ್ತಿನ ಊಟಕ್ಕೂ ಒದ್ದಾಡುತ್ತಿದ್ದಾರೆ. ಇತ್ತ ಬಾಲಿವುಡ್ ಮಂದಿ ಮಾತ್ರ ಆಸ್ತಿ ಹಿಂದೆ ಬಿದ್ದಿದ್ದಾರೆ. ದುಬಾರಿ ಮನೆ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚಿಗೆ ಬಾಲಿವುಡ್‌ನಲ್ಲಿ ಬಾಲಿವುಡ್ ನ ಸಾಕಷ್ಟು ಮಂದಿ ಮನೆ ಖರೀದಿ ಮಾಡಿದ್ದಾರೆ. ಜಾಹ್ನವಿ ಕಪೂರ್, ಅಲಿಯಾ ಭಟ್, ಅಮಿತಾಬ್ ಬಚ್ಚನ್, ಅರ್ಜುನ್ ಕಪೂರ್ ಬಳಿಕ ಇದೀಗ ಅಜಯ್ ದೇವಗನ್ ದುಬಾರಿ ಬಂಗಲೆ ಖರೀದಿಸಿರುವ ಸುದ್ದಿ ಬಹಿರಂಗವಾಗಿದೆ. ಮುಂಬೈನ ಜುಹು ಪ್ರದೇಶದಲ್ಲಿ ಅಜಯ್ ಬರೋಬ್ಬರಿ 60 ಕೋಟಿ ರೂ. ಬೆಲೆಬಾಳುವ ಮನೆ ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ. ಮುಂದೆ ಓದಿ...

ಒಂದು ವರ್ಷದಿಂದ ಮನೆ ಹುಡುಕುತ್ತಿದ್ದ ಅಜಯ್
ಹೊಸ ಬಂಗಲೆ ಸದ್ಯ ಅಜಯ್ ಕುಟುಂಬ ವಾಸುತ್ತಿರುವ ಮನೆಯ ಸಮೀಪದಲ್ಲೇ ಇದೆ ಎಂದು ಹೇಳಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಹೊಸ ಮನೆ ಖರೀದಿ ಮಾಡಲು ಅಜಯ್ ಮತ್ತು ಕಾಜಲ್ ಓಡಾಡುತ್ತಿದ್ದರು. ಇದೀಗ ಅವರ ಕನಸಿನ ಹಾಗೆ ವಿಸ್ತಾರವಾದ ಜಾಗ ಇರುವ ಐಷಾರಾಮಿ ಬಂಗಲೆ ಕೊಂಡುಕೊಂಡಿದ್ದಾರೆ.

ತಾಯಿ ಹೆಸರಿನಲ್ಲಿದೆ ಹೊಸ ಮನೆ
ಅಂದಹಾಗೆ ಅಜಯ್ ಸದ್ಯ ಖರೀದಿ ಮಾಡಿರುವ ಬಂಗಲೆ ಪುಷ್ಪಾ ವಾಲಿಯಾ ಎನ್ನುವರದ್ದು ಎಂದು ಹೇಳಲಾಗುತ್ತಿದೆ. ಈಗಾಗಲೇ ಮನೆ ಖರೀದಿ ಮಾಡಿದ್ದು, ಹೊಸ ಮನೆಯ ನವೀಕರಣ ಕೆಲಸ ನಡೆಯುತ್ತಿದೆಯಂತೆ. ಹೊಸ ಮನೆ ಅಜಯ್ ದೇವಗನ್ ಅವರ ತಾಯಿ ವೀಣಾ ವೀರೇಂದ್ರ ದೇವಗನ್ ಅವರ ಹೆಸರಿಗೆ ವರ್ಗಾಯಿಸಲಾಗಿದೆ ಎನ್ನಲಾಗುತ್ತಿದೆ.

31 ಕೋಟಿ ರೂ. ಮನೆ ಖರೀದಿಸಿದ ಅಮಿತಾಬ್ ಬಚ್ಚನ್
ಇತ್ತೀಚಿಗೆ ಬಿಗ್ ಬಿ 31 ಕೋಟಿ ರೂ. ಬೆಲೆ ಬಾಳುವ ಡ್ಯೂಪ್ಲೆಕ್ಸ್ ಮನೆ ಖರೀದಿ ಮಾಡಿದ್ದರು. 6 ಕಾರುಗಳನ್ನು ಪಾರ್ಕ್ ಮಾಡುವ ಜಾಗವಿದ್ದು, 27 ಮತ್ತು 28ನೇ ಮಹಡಿಯಲ್ಲಿದೆಯಂತೆ. ಕ್ರಿಸ್ಟಲ್ ಪ್ರೈಡ್ ಗ್ರೂಪ್ ಬಿಲ್ಡರ್ ನಿಂದ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.
Recommended Video

ಗೆಳತಿ ಮನೆ ಸಮೀಪದಲ್ಲೇ ಅರ್ಜುನ್ ಹೊಸ ಮನೆ
ಇನ್ನು ನಟ ಅರ್ಜುನ್ ಕಪೂರ್ ಗೆಳತಿ ಮಲೈಕಾ ಅರೋರಾ ಮನೆ ಸಮೀಪವೇ ಹೊಸ ಮನೆ ಖರೀದಿ ಮಾಡಿ ಸುದ್ದಿಯಾಗಿದ್ದರು. 26 ಅಂತಸ್ತಿನ ಕಟ್ಟಡವೂ ಸಮುದ್ರ ಮತ್ತು ಸ್ಕೈಲೈನ್‌ನ ಸುಂದರ ನೋಟ ಹೊಂದಿದೆ. ಇದರ ಬೆಲೆ ಸುಮಾರು 20 ರಿಂದ 23 ಕೋಟಿ ರೂ. ಎಂದು ವರದಿಯಾಗಿದೆ. ಪ್ರತಿ ಸ್ಕೈ ವಿಲ್ಲಾವು 4 ಬೃಹತ್ ಮಲಗುವ ಕೋಣೆ ಮತ್ತು ಅಟ್ಯಾಚ್ ಸ್ನಾನದ ಕೋಣೆ ಹೊಂದಿದೆ. ಪ್ರತಿ ಕೋಣೆಯೂ ಅಡುಗೆ ಕೋಣೆ ಮತ್ತು ಬಾಲ್ಕನಿಯನ್ನು ಹೊಂದಿದೆಯಂತೆ.


Click it and Unblock the Notifications