ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ನಟ ಅಜಯ್ ದೇವಗನ್
Recommended Video
ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಅಜಯ್ ಅಪ್ಪ ವೀರು ದೇವಗನ್ ಇಂದು ಬೆಳಗ್ಗೆ(ಮೇ 27) ಮುಂಬೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೀರು ದೇವಗನ್ ಇಂದು ಇಹಲೋಕ ತ್ಯಜಿಸಿದ್ದಾರೆ.
ವೀರು ದೇವಗನ್ ಬಾಲಿವುಡ್ ನ ಖ್ಯಾತ ಸ್ಟಂಟ್ ಮಾಸ್ಟರ್ ಆಗಿದ್ದರು. 150ಕ್ಕು ಹೆಚ್ಚು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಸಾಹಸ ನಿರ್ದೇಶನದ ಜೊತೆಗೆ ಸಿನಿಮಾ ಕೂಡ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಕೆಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.
ಮಗನ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು ವೀರು ದೇವಗನ್. ಅಜಯ್ ದೇವಗನ್, ಅಮಿತಾಭ್ ಬಚ್ಚನ್, ಮನೀಶಾ ಕೊಹಿರಾಲ, ಸುಶ್ಮಿತಾ ಸೇನ್ ಅಭಿನಯದ 'ಹಿಂದೂಸ್ತಾನ್ ಕಿ ಕಸಮ್' ಚಿತ್ರಕ್ಕೆ ವೀರು ದೇವಗನ್ ಆಕ್ಷನ್ ಕಟ್ ಹೇಳಿದ್ದರು.

1999ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಆ ಕಾಲಕ್ಕೆ ತಯಾರಾದ ಅತಿ ದೊಡ್ಡ ಬಜೆಟ್ ನ ಸಿನಿಮಾವಾಗಿತ್ತು. ವೀರು ದೇವಗನ್ ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯದ ಕಾರಣ ಯಾವುದೆ ಸಾರ್ವಜನಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲ್ಲ.
ಇಂದು ಬೆಳಗ್ಗೆ ನಿಧನರಾದ ವೀರು ದೇನಗನ್ ಅವರ ಅಂತ್ಯ ಸಂಸ್ಕಾರ ಸಂಜೆ 6ಗಂಟೆಗೆ ನಡೆಯಲಿದೆ. ಮುಂಬೈನ ವಿಲೇ ಪಾರ್ಲೆ ಸ್ಮಶಾನದಲ್ಲಿ ವೀರು ದೇವಗನ್ ಅಂತ್ಯ ಕ್ರಿಯೆನಡೆಯಲಿದೆ.


Click it and Unblock the Notifications










