For Quick Alerts
  ALLOW NOTIFICATIONS  
  For Daily Alerts

  ನಟಿ ಕಾಜೋಲ್ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ವದಂತಿ: ಪತಿ ಅಜಯ್ ಹೇಳಿದ್ದೇನು?

  |

  ಬಾಲಿವುಡ್ ಸ್ಟಾರ್ ನಟಿ ಕಾಜೋಲ್ ದೇವಗನ್ ಮತ್ತು ಮಗಳು ನೈಸಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಇಬ್ಬರು ಕಿಲ್ಲರ್ ಕೊರೊನಾ ವೈರಸ್ ನಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಅಭಿಮಾನಿಗಳು ಮತ್ತು ಸ್ನೇಹಿತರು ಅಜಯ್ ದೇವಗನ್ ಬಳಿ ಆರೋಗ್ಯ ವಿಚಾರಿಸಲು ಶುರು ಮಾಡಿದ್ದಾರೆ.

  ಜಂಟಲ್ ಮೆನ್ ಚಿತ್ರದ ಟ್ರೇಲರ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಸ್ಯಾಂಡಲ್ ವುಡ್ ತಾರೆಯರು | GENTLEMAN | PRAJWAL

  ಪತ್ನಿ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಅಜಯ್ ದೇವಗನ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಪತ್ನಿ ಮತ್ತು ಮಗಳು ಆರೋಗ್ಯವಾಗಿರುವುದಾಗಿ ಹೇಳಿರುವ ಅಜಯ್ ಕೊರೊನಾ ಬಂದಿದೆ ಎನ್ನುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಮುಂದೆ ಓದಿ..

  ಸಿಂಗಾಪುರದಲ್ಲಿ ಓದುತ್ತಿರುವ ಮಗಳು ನೈಸಾ

  ಸಿಂಗಾಪುರದಲ್ಲಿ ಓದುತ್ತಿರುವ ಮಗಳು ನೈಸಾ

  ಅಜಯ್ ದೇವಗನ್ ಮಗಳು ನೈಸಾ ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇತ್ತೀಚಿಗೆ ವಿಶ್ವಾದ್ಯಂತ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ಸಿಂಗಾಪುರದಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕ ಬಂದ್ ಮಾಡಿದ್ದಾರೆ. ಹಾಗಾಗಿ ಮಗಳು ನೈಸಾ ಭಾರತದ ಫ್ಲೈಟ್ ಹತ್ತಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.

  ಮಗಳ ಜೊತೆ ಕಾಜೋಲ್ ಕೂಡ ಇದ್ದರು

  ಮಗಳ ಜೊತೆ ಕಾಜೋಲ್ ಕೂಡ ಇದ್ದರು

  ಸಿಂಗಾಪುರದಿಂದ ವಾಪಸ್ ಆದ ಮಗಳ ಜೊತೆ ನಟಿ ಕಾಜೋಲ್ ಕೂಡ ಇದ್ದಿರುವ ಬಗ್ಗೆ ವರದಿಯಾಗಿವೆ. ಮಗಳನ್ನು ಸಿಂಗಾಪುರದಿಂದ ಕರೆದುಕೊಂಡು ಬರಲು ಕಾಜೋಲ್ ಕೂಡ ತೆರಳಿದ್ದರಂತೆ. ಮುಂಬೈ ಏರ್ ಪೋರ್ಟ್ ನಿಂದ ತಾಯಿ ಮತ್ತು ಮಗಳು ಹೊರ ಬರುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಆ ನಂತರ ಇಬ್ಬರನ್ನು ಕೊರೊನಾ ಪರೀಕ್ಷೆಗೆ ಒಳಪಡಿಲಾಗಿದ್ದು, ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಅಜಯ್ ದೇವಗನ್ ಸ್ಪಷ್ಟನೆ

  ಪತ್ನಿ ಮತ್ತು ಮಗಳಿಗೆ ಕೊರೊನಾ ಬಂದಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಅಜಯ್ ದೇವಗನ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ನೀವೆಲ್ಲ ಆರೋಗ್ಯ ವಿಚಾರಿಸಿದಕ್ಕೆ ಧನ್ಯವಾದಗಳು. ಕಾಜೋಲ್ ಮತ್ತು ನೈಸಾ ಇಬ್ಬರು ಚೆನ್ನಾಗಿದ್ದಾರೆ. ಅವರ ಆರೋಗ್ಯದ ಸುತ್ತ ಹರದಾಡುತ್ತಿರುವ ವದಂತಿ ಆಧಾರ ರಹಿತವಾಗಿದ್ದು ಮತ್ತು ಇದೆಲ್ಲ ಸುಳ್ಳು" ಎಂದು ಹೇಳುವ ಮೂಲಕ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ವಿಚಾರಕ್ಕೆ ತೆರೆ ಎಳೆದಿದ್ದಾರೆ.

  ಸ್ವಯಂ ದಿಗ್ಬಂಧನದಲ್ಲಿ ಕಜೋಲ್ ಮತ್ತು ಮಗಳು

  ಸಿಂಗಾಪುರದಿಂದ ವಾಪಸ್ ಆಗಿರುವ ಮಗಳು ನೈಸಾ ಮತ್ತು ಕಾಜೋಲ್ ಸದ್ಯ ಸ್ವಯಂ ದಿಗ್ಬಂಧನದಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಕಾಜೊಲ್ ಕ್ವೈರಂಟೈನ್ ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಸ್ವಯಂ ದಿಗ್ಬಂಧನದಲ್ಲಿದ್ದು 9 ದಿನಗಳಾಗಿದೆ ಎನ್ನುವ ವಿಚಾರವನ್ನು ಶೇರ್ ಮಾಡಿದ್ದರು.

  English summary
  Bollywood Actor Ajay Devgan react about Corona positive rumor to his wife kajol And daughter Nysa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X