ಚಂಡಮಾರುತ ಹೊಡೆತಕ್ಕೆ ಅಜಯ್ ದೇವಗನ್ 'ಮೈದಾನ್' ಸೆಟ್ ಸಂಪೂರ್ಣ ನಾಶ

ಕೊರೊನಾ ವೈರಸ್ ಎರಡನೇ ಅಲೆ ಭೀಕರತೆ ನಡುವೆ ತೌಕ್ತೆ ಚಂಡಮಾರುತ ಮತ್ತಷ್ಟು ಆತಂಕ ಸೃಷ್ಟಿಸಿದೆ. ಗುಜರಾತ್, ಮಹಾರಾಷ್ಟ್ರದಲ್ಲಿ ಸೇರಿದಂತೆ ಅನೇಕ ಕಡೆ ಭಾರಿ ಮಳೆಯಾಗುತ್ತಿದ್ದು, ಭಾರಿ ಹಾನಿ ಸಂಭವಿಸಿದೆ. ತೌಕ್ತೆ ಚಂಡಮಾರುತಕ್ಕೆ ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದೆ.

ತೌಕ್ತೆ ಚಂಡಮಾರುತ ಬಾಲಿವುಡ್‌ನ ಅನೇಕ ಸಿನಿಮಾ ಮಂದಿಯ ಮೇಲು ಪರಿಣಾಮ ಬೀರಿದೆ. ಅಮಿತಾಬ್ ಬಚ್ಚನ್ ಕಚೇರಿ ಮುಳುಗಿದ ಬೆನ್ನಲ್ಲೇ ಚಿತ್ರೀಕರಣದ ಸಾಕಷ್ಟು ಸೆಟ್‌ಗಳು ಹಾನಿಯಾಗಿದೆ. ಇದೀಗ ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಸೆಟ್ ಸಂಪೂರ್ಣ ನಾಶವಾಗಿದೆ.

ಮುಂಬೈನ ಹೊರವಲಯದಲ್ಲಿ ಮೈದಾನ್ ಸಿನಿಮಾದ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ ತೌಕ್ತೆ ಹೊಡೆತಕ್ಕೆ ಸಿಲುಕಿದ ಸೆಟ್ ಸಂಪೂರ್ಣವಾಗಿ ನಾಶವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ದುಬಾರಿ ವೆಚ್ಚದಲ್ಲಿ ತಯಾರಾಗಿದ್ದ ಈ ಸೆಟ್ ನಲ್ಲಿ ಅಜಯ್ ದೇವಗನ್ ಭಾಗದ ಹೆಚ್ಚಿನ ಚಿತ್ರೀಕರಣ ನಡೆಸಬೇಕಿತ್ತು. ಆದರೀಗ ಸಂಪೂರ್ಣ ನಾಶವಾಗಿದೆ.

Ajay devgan starrer Maidaan movie set destroyed by Tauktae cyclone

ಚಂಡಮಾರುತ ಅಪ್ಪಳಿಸುವಾಗ ಸೆಟ್‌ನಲ್ಲಿ ಸುಮಾರು 49 ಜನ ಇದ್ದರು ಎಂದು ಮೂಲಗಳು ತಿಳಿಸಿವೆ. ಸಿಬ್ಬಂದಿ ಸೆಟ್ ಉಳಿಸಲು ಸಾಕಷ್ಟು ಪ್ರಯತ್ನ ಪಟ್ಟರು ಸಾದ್ಯವಾಗಿಲ್ಲ ತಿಳಿದುಬಂದಿದೆ. ಈ ಸೆಟ್ ನಿರ್ಮಾಣ ಮಾಡಿ ಇನ್ನೇನು ಚಿತ್ರೀಕರಣ ಪ್ರಾರಂಭ ಮಾಡಲು ತಯಾರಿ ನಡೆಸುತ್ತಿದ್ದಂತೆ ಲಾಕ್ ಡೌನ್ ಆದ ಕಾರಣ ತಾತ್ಕಲಿಕ ಸ್ಥಗಿತಗೊಳಿಸಲಾಗಿತ್ತು.

ಮೈದಾನ್ ಸೆಟ್‌ಗೆ ಹೊಡೆತ ಬೀಳುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕೂಡ ವರ್ಷ ಅದೇ ಸ್ಥಳದಲ್ಲಿ ನಿರ್ಮಿಸಿದ್ದ ಸೆಟ್ ಅನ್ನು ಲಾಕ್ ಡೌನ್ ನಿಂದ ತೆಗೆಯಲಾಗಿತ್ತು. ಅಜಯ್ ದೇವಗನ್ ಸಿನಿಮಾ ಸೆಟ್ ಮಾತ್ರವಲ್ಲದೆ ಸಲ್ಮಾನ್ ಖಾನ್ ನಟನೆಯ ಟೈಗರ್-3 ಸಿನಿಮಾ ಕೂಡ ಚಂಡಮಾರುತದ ಹೊಡೆತಕ್ಕೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.

Recommended Video

Kuvempu ಅವರ ನೆನಪಿನ ಅಪರೂಪದ ತುಣುಕುಗಳು | Oneindia Kannada

More from Filmibeat

English summary
Actor Ajay devgan starrer Maidaan movie set destroyed by Tauktae cyclone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X