ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದ ತಾನಾಜಿ: ಭರ್ಜರಿ ಗಳಿಕೆ ಮಾಡಿದ ಅಜಯ್ ದೇವ್ಗನ್ ಚಿತ್ರ.!

ಬಾಲಿವುಡ್ ನಟ ಅಜಯ್ ದೇವ್ಗನ್ ಅಭಿನಯದ 100ನೇ ಚಿತ್ರ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಕಳೆದ ಶುಕ್ರವಾರ ತೆರೆಗೆ ಬಂದಿತ್ತು. ಬಹು ನಿರೀಕ್ಷೆಯೊಂದಿಗೆ ರಿಲೀಸ್ ಆದ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಮರಾಠಾ ಛತ್ರಪತಿ ಶಿವಾಜಿ ಮಹಾರಾಜ್ ಬಳಿ ಜನರಲ್ ಆಗಿದ್ದ ಮರಾಠಿ ವೀರ ತಾನಾಜಿ ಮಾಲುಸರೆ ಜೀವನಚರಿತ್ರೆ ಆಧಾರಿತ ಐತಿಹಾಸಿಕ ಚಿತ್ರ.

ಅಜಯ್ ದೇವ್ಗನ್, ಸೈಫ್ ಅಲಿ ಖಾನ್, ಕಾಜೋಲ್ ಮುಂತಾದವರು ಅಭಿನಯದ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರಕ್ಕೆ ಬಿಗ್ ಓಪನ್ನಿಂಗ್ ಸಿಕ್ಕಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮುಂದೆ ಓದಿರಿ...

ಮೊದಲ ದಿನದ ಕಲೆಕ್ಷನ್ ಎಷ್ಟು.?

ಮೊದಲ ದಿನದ ಕಲೆಕ್ಷನ್ ಎಷ್ಟು.?

ಬಾಕ್ಸ್ ಆಫೀಸ್ ಇಂಡಿಯಾ ರಿಪೋರ್ಟ್ ಪ್ರಕಾರ, ಭಾರತದಾದ್ಯಂತ ಬಿಡುಗಡೆ ಆದ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರ ಮೊದಲ ದಿನ ಅಂದಾಜು 14.50 ಕೋಟಿ ಕಲೆಕ್ಷನ್ ಮಾಡಿದೆ. 'ಚಪಾಕ್' ಚಿತ್ರಕ್ಕೆ ಪೈಪೋಟಿ ನೀಡಿ ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರ ಯಶಸ್ವಿ ಆಗಿದೆ.

ಮೂರು ದಿನಗಳಲ್ಲಿ ಗಳಿಸಿದ್ದು ಎಷ್ಟು.?

ಮೂರು ದಿನಗಳಲ್ಲಿ ಗಳಿಸಿದ್ದು ಎಷ್ಟು.?

ಶನಿವಾರ ಮತ್ತು ಭಾನುವಾರ ಗಲ್ಲಾ ಪೆಟ್ಟಿಗೆಯನ್ನ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರ ಅಕ್ಷರಶಃ ಲೂಟಿ ಹೊಡೆದಿದೆ. ಮೂರು ದಿನಗಳಲ್ಲಿ ಅಂದಾಜು 59.75 ಕೋಟಿ ರೂಪಾಯಿ ಕಮಾಯಿ ಮಾಡಿ ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಚಿತ್ರ ಎಂಬ ಹೆಗ್ಗಳಿಕೆಗೆ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಪಾತ್ರವಾಗಿದೆ.

ನಾಲ್ಕು ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ್

ನಾಲ್ಕು ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ್

ನಿನ್ನೆ ಸೋಮವಾರ ವೀಕ್ ಡೇ ಆಗಿದ್ದರೂ, 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಕಲೆಕ್ಷನ್ ಗೆ ಪೆಟ್ಟು ಬಿದ್ದಿಲ್ಲ. ವರದಿಗಳ ಪ್ರಕಾರ, ನಿನ್ನೆ ಅಜಯ್ ದೇವ್ಗನ್ ಚಿತ್ರ ಅಂದಾಜು 13.50 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ, ನಾಲ್ಕು ದಿನಗಳಲ್ಲಿ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಕಲೆಕ್ಟ್ ಮಾಡಿರುವುದು ಸರಿಸುಮಾರು 73.25 ಕೋಟಿ.!

'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರದ ಕುರಿತು...

'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರದ ಕುರಿತು...

ಓಂ ರಾವುತ್ ನಿರ್ದೇಶನ ಮಾಡಿರುವ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರಕ್ಕೆ ಅಜಯ್ ದೇವ್ಗನ್, ಭೂಷಣ್ ಕುಮಾರ್ ಮತ್ತು ಕೃಷನ್ ಕುಮಾರ್ ಬಂಡವಾಳ ಹಾಕಿದ್ದಾರೆ. ತಾನಾಜಿ ಮಾಲುಸರೆ ಜೀವನಚರಿತ್ರೆ ಆಧಾರಿಸಿದ ಈ ಚಿತ್ರಕ್ಕೆ 150 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿದ್ಧಗೊಂಡಿತ್ತು.

More from Filmibeat

English summary
Ajay Devgan starrer Tanhaji earns approx Rs.73.25 crore in 4 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X