For Quick Alerts
  ALLOW NOTIFICATIONS  
  For Daily Alerts

  ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದ ತಾನಾಜಿ: ಭರ್ಜರಿ ಗಳಿಕೆ ಮಾಡಿದ ಅಜಯ್ ದೇವ್ಗನ್ ಚಿತ್ರ.!

  |

  ಬಾಲಿವುಡ್ ನಟ ಅಜಯ್ ದೇವ್ಗನ್ ಅಭಿನಯದ 100ನೇ ಚಿತ್ರ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಕಳೆದ ಶುಕ್ರವಾರ ತೆರೆಗೆ ಬಂದಿತ್ತು. ಬಹು ನಿರೀಕ್ಷೆಯೊಂದಿಗೆ ರಿಲೀಸ್ ಆದ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಮರಾಠಾ ಛತ್ರಪತಿ ಶಿವಾಜಿ ಮಹಾರಾಜ್ ಬಳಿ ಜನರಲ್ ಆಗಿದ್ದ ಮರಾಠಿ ವೀರ ತಾನಾಜಿ ಮಾಲುಸರೆ ಜೀವನಚರಿತ್ರೆ ಆಧಾರಿತ ಐತಿಹಾಸಿಕ ಚಿತ್ರ.

  ಅಜಯ್ ದೇವ್ಗನ್, ಸೈಫ್ ಅಲಿ ಖಾನ್, ಕಾಜೋಲ್ ಮುಂತಾದವರು ಅಭಿನಯದ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರಕ್ಕೆ ಬಿಗ್ ಓಪನ್ನಿಂಗ್ ಸಿಕ್ಕಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮುಂದೆ ಓದಿರಿ...

  ಮೊದಲ ದಿನದ ಕಲೆಕ್ಷನ್ ಎಷ್ಟು.?

  ಮೊದಲ ದಿನದ ಕಲೆಕ್ಷನ್ ಎಷ್ಟು.?

  ಬಾಕ್ಸ್ ಆಫೀಸ್ ಇಂಡಿಯಾ ರಿಪೋರ್ಟ್ ಪ್ರಕಾರ, ಭಾರತದಾದ್ಯಂತ ಬಿಡುಗಡೆ ಆದ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರ ಮೊದಲ ದಿನ ಅಂದಾಜು 14.50 ಕೋಟಿ ಕಲೆಕ್ಷನ್ ಮಾಡಿದೆ. 'ಚಪಾಕ್' ಚಿತ್ರಕ್ಕೆ ಪೈಪೋಟಿ ನೀಡಿ ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರ ಯಶಸ್ವಿ ಆಗಿದೆ.

  'ತಾನಾಜಿ': ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದು ಕೊಂಡಾಡಿದ ಟ್ವೀಟಿಗರು.!'ತಾನಾಜಿ': ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದು ಕೊಂಡಾಡಿದ ಟ್ವೀಟಿಗರು.!

  ಮೂರು ದಿನಗಳಲ್ಲಿ ಗಳಿಸಿದ್ದು ಎಷ್ಟು.?

  ಮೂರು ದಿನಗಳಲ್ಲಿ ಗಳಿಸಿದ್ದು ಎಷ್ಟು.?

  ಶನಿವಾರ ಮತ್ತು ಭಾನುವಾರ ಗಲ್ಲಾ ಪೆಟ್ಟಿಗೆಯನ್ನ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರ ಅಕ್ಷರಶಃ ಲೂಟಿ ಹೊಡೆದಿದೆ. ಮೂರು ದಿನಗಳಲ್ಲಿ ಅಂದಾಜು 59.75 ಕೋಟಿ ರೂಪಾಯಿ ಕಮಾಯಿ ಮಾಡಿ ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಚಿತ್ರ ಎಂಬ ಹೆಗ್ಗಳಿಕೆಗೆ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಪಾತ್ರವಾಗಿದೆ.

  ಅಜಯ್ ದೇವ್ಗನ್-ಕಾಜೋಲ್ ಸಂಸಾರ ಸರಿಗಮ: ಸಿಹಿ-ಕಹಿ ನೆನಪು ಬಿಚ್ಚಿಟ್ಟ ನಟಿಅಜಯ್ ದೇವ್ಗನ್-ಕಾಜೋಲ್ ಸಂಸಾರ ಸರಿಗಮ: ಸಿಹಿ-ಕಹಿ ನೆನಪು ಬಿಚ್ಚಿಟ್ಟ ನಟಿ

  ನಾಲ್ಕು ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ್

  ನಾಲ್ಕು ದಿನಗಳ ಬಾಕ್ಸ್ ಆಫೀಸ್ ರಿಪೋರ್ಟ್

  ನಿನ್ನೆ ಸೋಮವಾರ ವೀಕ್ ಡೇ ಆಗಿದ್ದರೂ, 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಕಲೆಕ್ಷನ್ ಗೆ ಪೆಟ್ಟು ಬಿದ್ದಿಲ್ಲ. ವರದಿಗಳ ಪ್ರಕಾರ, ನಿನ್ನೆ ಅಜಯ್ ದೇವ್ಗನ್ ಚಿತ್ರ ಅಂದಾಜು 13.50 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ, ನಾಲ್ಕು ದಿನಗಳಲ್ಲಿ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಕಲೆಕ್ಟ್ ಮಾಡಿರುವುದು ಸರಿಸುಮಾರು 73.25 ಕೋಟಿ.!

  'ತಾನಾಜಿ' ವಿರುದ್ಧ ತಿರುಗಿಬಿದ್ದ ಕನ್ನಡಿಗರು: ಅಜಯ್ ದೇವ್ಗನ್ ಚಿತ್ರಕ್ಕೆ ಬಹಿಷ್ಕಾರ ಭೀತಿ.!'ತಾನಾಜಿ' ವಿರುದ್ಧ ತಿರುಗಿಬಿದ್ದ ಕನ್ನಡಿಗರು: ಅಜಯ್ ದೇವ್ಗನ್ ಚಿತ್ರಕ್ಕೆ ಬಹಿಷ್ಕಾರ ಭೀತಿ.!

  'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರದ ಕುರಿತು...

  'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರದ ಕುರಿತು...

  ಓಂ ರಾವುತ್ ನಿರ್ದೇಶನ ಮಾಡಿರುವ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರಕ್ಕೆ ಅಜಯ್ ದೇವ್ಗನ್, ಭೂಷಣ್ ಕುಮಾರ್ ಮತ್ತು ಕೃಷನ್ ಕುಮಾರ್ ಬಂಡವಾಳ ಹಾಕಿದ್ದಾರೆ. ತಾನಾಜಿ ಮಾಲುಸರೆ ಜೀವನಚರಿತ್ರೆ ಆಧಾರಿಸಿದ ಈ ಚಿತ್ರಕ್ಕೆ 150 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿದ್ಧಗೊಂಡಿತ್ತು.

  English summary
  Ajay Devgan starrer Tanhaji earns approx Rs.73.25 crore in 4 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X