ನಟ ಅಜಯ್ ದೇವಗನ್ 10ನೇ ರಿಮೇಕ್ ಸಿನಿಮಾ, ತಮಿಳಿನ ಹಿಟ್ ಚಿತ್ರ!
ಬಾಲಿವುಡ್ ನಟ ಅಜಯ್ ದೇವಗನ್ ಬಾಲಿವುಡ್‌ನ ಸ್ಟಾರ್ ನಟರಲ್ಲಿ ಒಬ್ಬರು. ಅವರು ಸದಾ ಒಂದಲ್ಲಾ ಒಂದು ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದೇ ಇರುತ್ತಾರೆ. ಅವರ ಸಿನಿಮಾಗಳು ಹೆಚ್ಚಾಗಿ ಸೌತ್ ಚಿತ್ರಗಳ ರಿಮೇಕ್ ಆಗಿರುತ್ತವೆ. ಇತ್ತೀಚೆಗಂತೂ ಬಾಲಿವುಡ್ ಹಲವು ಸೌತ್ ಸಿನಿಮಾಗಳನ್ನು ರಿಮೇಕ್ ಮಾಡಲು ಮುಂದಾಗಿದೆ.
ಅದಕ್ಕೀಗ ನಟ ಅಜಯ್ ದೇವಗನ್ ಅವರ ಮತ್ತೊಂದು ಸಿನಿಮಾ ಸೇರಿಕೊಳ್ಳುತ್ತಿದೆ. ಈಗಾಗಲೇ ನಟ ಅಜಯ್ ದೇವಗನ್ ಅವರು ಸಾಕಷ್ಟು ಸೌತ್ ಸಿನಿಮಾಗಳನ್ನು ಬಾಲಿವುಡ್‌ಗೆ ರಿಮೇಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ರಿಮೇಕ್ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ. ಹಾಗಾಗಿ ಮತ್ತೆ ರಿಮೇಕ್ ಚಿತ್ರ ಮಾಡಲು ಮನಸ್ಸು ಮಾಡಿದ್ದಾರೆ.
ಇಲ್ಲಿಯ ತನಕ ಅಜಯ್ ದೇವಗನ್ ಅವರು 9 ಸೌತ್ ಚಿತ್ರಗಳನ್ನು ರಿಮೇಕ್ ಮಾಡಿದ್ದಾರೆ. ಈಗ 10ನೇ ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದಾರೆ. ಅದು ಮತ್ಯಾವ ಸಿನಿಮಾ ಅಲ್ಲಾ, ತಮಿಳಿನಲ್ಲಿ ತೆರೆಕಂಡು ಸೂಪರ್ ಹಿಟ್ ಆದ 'ಕೈತಿ'. ಈ ಚಿತ್ರದಲ್ಲಿ ಕಾರ್ತಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಪ್ರಸ್ತುತ ಅಜಯ್ ತಮಿಳಿನ 'ಕೈತಿ' ಸಿನಿಮಾವನ್ನು ರೀಮೇಕ್ ಮಾಡಲು ಸಂಪೂರ್ಣ ತಯಾರಿ ನಡೆಸಿದ್ದಾರಂತೆ. ಇನ್ನೊಂದು ವಾರದಲ್ಲಿ ಅವರು ಶೂಟಿಂಗ್ ಕೂಡ ಆರಂಭಿಸಲಿದ್ದಾರಂತೆ ಎನ್ನುವ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. ತಮಿಳಿನಲ್ಲಿ ಹಿಟ್ ಆದ ಈ ಚಿತ್ರವನ್ನು ನಾರ್ತ್ ಪ್ರೇಕ್ಷಕರ ಅಭಿರುಚಿ ಮತ್ತು ನೇಟಿವಿಟಿಗೆ ತಕ್ಕಹಾಗೆ ಸಿನಿಮಾ ಮಾಡಲಿದ್ದಾರಂತೆ.
'ದೃಶ್ಯಂ 2' ಚಿತ್ರದ ರಿಮೇಕ್‌ನಲ್ಲಿ ಅಜಯ್ ದೇವಗನ್ ಅಭಿನಯಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಕೂಡ ಮುಗಿದಿದೆ. ಈ ಚಿತ್ರದ ಬಳಿಕ ಅಜಯ್ ಕೈತಿ ಚಿತ್ರದ ರಿಮೇಕ್‌ನಲ್ಲಿ ಬ್ಯುಸಿ ಆಗಲಿದ್ದಾರೆ. ನಾಯಕಿ ಟಬು ಕೂಡ ಅಜಯ್ ದೇವಗನ್ ಜೊತೆಗೆ 'ದೃಶ್ಯಂ 2' ಚಿತ್ರದ ರಿಮೇಕ್ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ಇದನ್ನು ಹೊರತು ಪಡಿಸಿದರೆ ಅಜಯ್ ದೇವಗನ್ ಎಸ್.ಎಸ್ ರಾಜಮೌಳಿಯ ಆರ್‌ಆರ್‌ಆರ್, ಮೈದಾನ್, ಗಂಗೂಬಾಯಿ ಕಾಥಿಯಾವಾಡಿ, ರುದ್ರ: ದಿ ಎಡ್ಜ್ ಆಫ್ ಡಾರ್ಕ್‌ನೆಸ್, ಮತ್ತು ಅಜಯ್ ಅವರ ಸ್ವಂತ ನಿರ್ದೇಶನದ ಅಮಿತಾಭ್ ಬಚ್ಚನ್, ರಾಕುಲ್ ಪ್ರೀತ್ ಸಿಂಗ್ ಅಭಿನಯದ 'ರನ್‌ವೇ 34' ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ.


Click it and Unblock the Notifications










