Just In
Don't Miss!
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Finance
ಟೈರ್ ಮತ್ತು ಬ್ಯಾಟರಿಗಳನ್ನು ಪರಿಚಯಿಸಿದ ಮಾರುತಿ ಸುಜುಕಿ
- News
ಬೆಂಗಳೂರಲ್ಲಿ ನಕಲಿ ಕೋವಿಡ್ ಟೆಸ್ಟ್; ಇಬ್ಬರ ವಿರುದ್ಧ ಎಫ್ಐಆರ್
- Automobiles
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಡಿಯೋ ವೈರಲ್: ಪಬ್ ನಲ್ಲಿ ಕುಡಿದು ಜಗಳವಾಡಿ ಒದೆ ತಿಂದ್ರಾ ಅಜಯ್ ದೇವಗನ್?
ದೆಹಲಿ ಪಬ್ ಒಂದರಲ್ಲಿ ಜಗಳವಾಡಿ ಒಬ್ಬ ವ್ಯಕ್ತಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒದೆ ತಿನ್ನುತ್ತಿರುವ ವ್ಯಕ್ತಿ ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ಎಂದು ಹೇಳಲಾಗುತ್ತಿದೆ.
ವೈರಲ್ ಆಗಿರುವ ವಿಡಿಯೋ ನೋಡಿದ ನಟ್ಟಿಗರು ಅಜಯ್ ದೇವಗನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಘಟನೆ ದೆಹಲಿಯ ಏರೋಸಿಟಿ ಮಾಲ್ ಮುಂಭಾಗದಲ್ಲಿ ನಡೆದಿದೆ. ಪಾನಮತ್ತರಾಗಿರುವ ಎರಡು ಗುಂಪುಗಳ ನಡುವೆ ಪ್ರಾರಂಭವಾದ ಜಗಳ ಬಳಿಕ ಹೊಡೆದಾಟಕ್ಕೆ ತಿರುಗಿದೆ. ನಂತರ ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಹೆಸರು ಬದಲಾಯಿಸಿಕೊಂಡ ಬಾಲಿವುಡ್ ನಟ ಅಜಯ್ ದೇವಗನ್: ಕಾರಣವೆನು?
ವಿಡಿಯೋ ವೈರಲ್ ಆಗುತ್ತಿದ್ದಂತೆ ಥಳಿಸಿಕೊಂಡ ವ್ಯಕ್ತಿ ಅಜಯ್ ದೇವಗನ್ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಅಜಯ್ ದೇವಗನ್ ಟೀಂ ಪ್ರತಿಕ್ರಿಯೆ ನೀಡಿದೆ, 'ದೆಹಲಿ ಏರೋಸಿಟಿ ಮಾಲ್ ಹೊರಗೆ ನಡೆದ ಘಟನೆಗೂ ಅಜಯ್ ದೇವಗನ್ ಅವರಿಗೂ ಸಂಬಂಧವಿಲ್ಲ. ವಿಡಿಯೋದಲ್ಲಿ ಇರುವುದು ಅಜಯ್ ದೇವಗನ್ ಅಲ್ಲ ಎಂದ ಸ್ಪಷ್ಟಪಡಿಸಿದ್ದಾರೆ. ತನ್ಹಾಜಿ ಸಿನಿಮಾ ಪ್ರಚಾರದ ಬಳಿಕ ಅಜಯ್ ದೇವಗನ್ ದೆಹಲಿ ಕಡೆ ಹೋಗಿಲ್ಲ ಎಂದಿದ್ದಾರೆ.
'ಮೈದಾನ್, ಮೇಡೇ, ಮತ್ತು ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ಚಿತ್ರೀಕರಣಕ್ಕಾಗಿ ಅಜಯ್ ದೇವಗನ್ ಮುಂಬೈನಲ್ಲೇ ಇದ್ದಾರೆ. ದಯವಿಟ್ಟು ಪರೀಕ್ಷಿಸಿ ಸುದ್ದಿ ಬಿತ್ತರಿಸಬೇಕೆಂದು ಎಲ್ಲಾ ಮಾಧ್ಯಮಗಳಿಗೂ ವಿನಂತಿಸುತ್ತೇವೆ' ಎಂದು ಅಜಯ್ ದೇವಗನ್ ತಂಡ ಪ್ರತಿಕ್ರಿಯೆ ನೀಡಿದೆ.
Not really sure if this is #ajaydevgan or not but #Kisanektamorcha agitation seems to be spreading up. Social media floating with this video that drunk @ajaydevgn got beaten up?? #RakeshTikait pic.twitter.com/Fv8j0kG5fv
— lalit kumar (@lalitkumartweet) March 28, 2021
ಅಜಯ್ ದೇವಗನ್ ಸದ್ಯ ಅಭಿಷೇಕ್ ಬಚ್ಚನ್ ನಟನೆಯ ದಿ ಬಿಗ್ ಬುಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಪ್ರಮೋಷನ್ ಚಟುವಟಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲೂ ತೊಡಗಿಕೊಂಡಿದ್ದಾರೆ. ಭುಜ್ ಸಿನಿಮಾ ಕೂಡ ಬಿಡುಗಡೆಗೆ ತಯಾರಿ ನಡೆಸುತ್ತಿದೆ.