ಪ್ರಭಾಸ್ 'ಆದಿಪುರುಷ್' ಸಿನಿಮಾಗೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟನ ಎಂಟ್ರಿ

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ತೆಲುಗು ಸಿನಿಮಾದ ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆದಿಪುರುಷ್ ಸಿನಿಮಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಯಾರೆಲ್ಲ ನಟಿಸುತ್ತಿದ್ದಾರೆ, ಪ್ರಭಾಸ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆ ಅದಿಪುರುಷ್ ಚಿತ್ರಕ್ಕೆ ಬಾಲಿವುಡ್ ನ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಈಗಾಗಲೇ ಸಿನಿಮಾದಲ್ಲಿ ಸೈಫ್ ಅಲಿಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್ ಬಳಿಕ ಮತ್ತೊಬ್ಬ ಸ್ಟಾರ್ ನಟನ ಹೆಸರು ಕೇಳಿಬರುತ್ತಿದೆ. ಅದು ಮತ್ಯಾರು ಅಲ್ಲ ನಟ ಅಜಯ್ ದೇವಗನ್. ಹೌದು, ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಅಜಯ್ ದೇವಗನ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿವನ ಪಾತ್ರದಲ್ಲಿ ಅಜಯ್ ದೇವಗನ್

ಶಿವನ ಪಾತ್ರದಲ್ಲಿ ಅಜಯ್ ದೇವಗನ್

ನಟ ಅಜಯ್ ದೇವಗನ್ ಆದಿಪುರುಷ್ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಮೂಡಿಬಂದ ತನ್ಹಾಜಿ ಸಿನಿಮಾದಲ್ಲಿ ಅಜಯ್ ದೇವರನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಮತ್ತೆ ಆದಿಪುರುಷ್ ಸಿನಿಮಾ ಮೂಲಕ ಇಬ್ಬರು ಒಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶಿವನ ಪಾತ್ರವನ್ನು ಅಜಯ್ ದೇವಗನ್ ಅವರೇ ಮಾಡಬೇಕೆಂದು ನಿರ್ಧರಿಸಿ ಈ ಪಾತ್ರವನ್ನು ಅವರಿಗೆ ನೀಡುತ್ತಿದ್ದಾರೆ ನಿರ್ದೇಶಕ ಓಂ ರಾವತ್.

ರಾಮನಾಗಿ ಪ್ರಭಾಸ್, ಲಂಕೇಶ್ ಆಗಿ ಸೈಫ್ ಅಲಿ ಖಾನ್ ನಟನೆ

ರಾಮನಾಗಿ ಪ್ರಭಾಸ್, ಲಂಕೇಶ್ ಆಗಿ ಸೈಫ್ ಅಲಿ ಖಾನ್ ನಟನೆ

ಅಂದ್ಹಾಗೆ ರಾಮನ ಪಾತ್ರದಲ್ಲಿ ನಟ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಆಗಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಲಂಕೇಶ್(ರಾವಣ) ಪಾತ್ರಕ್ಕೆ ಸೈಫ್ ಬಣ್ಣಹಚ್ಚುತ್ತಿದ್ದಾರೆ. ತನ್ಹಾಜಿ ಸಿನಿಮಾದಲ್ಲೂ ಸೈಫ್ ಅಲಿ ಖಾನ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಪ್ರಭಾಸ್ ಸಿನಿಮಾದಲ್ಲೂ ಖಳನಟನಾಗಿ ಮಿಂಚುತ್ತಿದ್ದಾರೆ.

ಓಂ ನಿರ್ದೇಶನದ ತನ್ಹಾಜಿ ಸಿನಿಮಾದಲ್ಲಿ ಅಜಯ್ ದೇವಗನ್

ಓಂ ನಿರ್ದೇಶನದ ತನ್ಹಾಜಿ ಸಿನಿಮಾದಲ್ಲಿ ಅಜಯ್ ದೇವಗನ್

ಅಂದ್ಹಾಗೆ ಅಜಯ್ ದೇವಗನ್ ಸದ್ಯ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಅಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ಮತ್ತೊಬ್ಬ ತೆಲುಗು ಸ್ಟಾರ್ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ.

ಪ್ರಭಾಸ್ ಬಳಿ ಇರುವ ಸಿನಿಮಾಗಳು

ಪ್ರಭಾಸ್ ಬಳಿ ಇರುವ ಸಿನಿಮಾಗಳು

ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೆ ಶ್ಯಾಮ ಚಿತ್ರೀಕರಣ ಇನ್ನೂ ಭಾಕಿ ಇದೆ. ಈ ಸಿನಿಮಾ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆದಿಪುರುಷ್ ಸಿನಿಮಾ ಸಹ ಸಾಲಿನಲ್ಲಿದೆ. ಯಾವ ಸಿನಿಮಾ ಮೊದಲು ಪ್ರಾರಂಭಿಸಿ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಚಿತ್ರಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Actor Ajay Devgn to play Lord Shiva in Prabhas starrer Adipurush movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X