ತೆಲುಗು ಚಿತ್ರದ ರೀಮೇಕ್‌ಗೆ ಮುಂದಾದ ಅಜಯ್ ದೇವಗನ್!
ಅಜಯ್ ದೇವಗನ್ ನಟನೆಯ ಜೊತೆ ಜೊತೆಯಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದ ವರದಿ ಪ್ರಕಾರ, ತೆಲುಗಿನ ಕಾಮಿಡಿ ಹಿಟ್ ಸಿನಿಮಾ 'ಬ್ರೋಚೇವಾರೆವರುರಾ' ಹಿಂದಿಗೆ ತರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಚಿತ್ರವನ್ನ ನವನಿರ್ದೇಶಕ ದೇವನ್ ಮಂಜಲ್ ನಿರ್ದೇಶಿಸುವ ಸಾಧ್ಯತೆ ಇದೆ. ಹಿಂದಿಯಲ್ಲಿ ಈ ಸಿನಿಮಾಗೆ ವೆಲ್ಲಿ ಎಂದು ಹೆಸರಿಡಲು ಚಿತ್ರತಂಡ ಚಿಂತನೆ ನಡೆಸಿದೆ.
ಸದ್ಯ ಸ್ಕ್ರಿಪ್ಟ್ ಕೆಲಸ ಮಾಡಲಾಗುತ್ತಿದ್ದು, ಈ ಸಿನಿಮಾದಲ್ಲಿ ಅಭಯ್ ಡಿಯೋಲ್ ಮತ್ತು ಕರಣ್ ಡಿಯೋಲ್ ಅವರು ಪ್ರಮುಖ ಪಾತ್ರ ನಿಭಾಯಿಸಲಿದ್ದಾರಂತೆ.

ತೆಲುಗಿನಲ್ಲಿ ಬ್ರೋಚೇವಾರೆವರುರಾ ಅಜಯ್ ದೇವಗನ್ ಸಿನಿಮಾ ತುಂಬಾ ಇಷ್ಟ ಆಗಿದೆಯಂತೆ. ಎಲ್ಲ ಭಾಷೆಗಳಿಗೂ ಸೂಕ್ತ ಎನಿಸುವ ಕಥೆ ಇದಾಗಿದ್ದು, ತಕ್ಷಣವೇ ರೀಮೇಕ್ ಹಕ್ಕು ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

ವಿವೇಕ್ ಅತ್ರೆಯಾ ನಿರ್ದೇಶನದ ಬ್ರೋಚೇವಾರೆವರುರಾ ಸಿನಿಮಾದಲ್ಲಿ ಶ್ರೀವಿಷ್ಣು, ಸತ್ಯದೇವ್ ಕಂಚರಣ, ನಿವೇತಾ ಥಾಮಸ್, ನಿವೇತಾ ಪೆತುರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 3-7 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 20 ಕೋಟಿವರೆಗೂ ಬಿಸಿನೆಸ್ ಮಾಡಿದೆ ಎಂದು ವರದಿಯಾಗಿದೆ.
ಅಜಯ್ ದೇವಗನ್ ನಟಿಸಿರುವ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಹಾಗೂ ಮೈದಾನ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಮೇಡೇ ಸಿನಿಮಾ ಘೋಷಣೆಯಾಗಿದ್ದು ಚಿತ್ರೀಕರಣ ಆರಂಭಿಸಬೇಕಿದೆ. ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ ಹಾಗೂ ರಾಜಮೌಳಿಯ ಆರ್ ಆರ್ ಆರ್ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಅಕ್ಷಯ್ ಕುಮಾರ್ ನಟನೆಯ ದಿ ಬಿಗ್ ಬುಲ್ ಸಿನಿಮಾ ದೇಗವನ್ ಬಂಡವಾಳ ಹಾಕಿದ್ದಾರೆ.


Click it and Unblock the Notifications











