For Quick Alerts
  ALLOW NOTIFICATIONS  
  For Daily Alerts

  'ದೃಶ್ಯಂ - 2' ಟಿಕೆಟ್ ದರದಲ್ಲಿ 50%ರಷ್ಟು ರಿಯಾಯಿತಿ: ಇಂದು ಮಾತ್ರ ಈ ರಿಯಾಯಿತಿ ನೀಡಲು ಕಾರಣ ಏನು?

  |

  ಮಲಯಾಳಂನಲ್ಲಿ ಸಕ್ಸಸ್ ಕಂಡ 'ದೃಶ್ಯಂ' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಹಲವು ಭಾಷೆಗಳಿಗೆ ರೀಮೆಕ್ ಆಗಿ ಪ್ರೇಕ್ಷಕರ ಮನಗೆದ್ದಿತ್ತು. ನಂತರ ಅದರ ಸೀಕ್ವೆಲ್ ಹಿಟ್ ಆಗಿ ಅದನ್ನು ರೀಮೆಕ್ ಮಾಡುವ ಕೆಲಸ ನಡೀತಿದೆ. ಕನ್ನಡ, ತೆಲುಗು ನಂತರ 'ದೃಶ್ಯಂ'-2 ಕಥೆ ಹಿಂದಿ ಪ್ರೇಕ್ಷಕರ ಮುಂದೆ ಬರ್ತಿದೆ. ನವೆಂಬರ್ 18ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಆದರೆ ಇಂದೇ(ಅಕ್ಟೋಬರ್ 2) 50%ರಷ್ಟು ರಿಯಾಯಿತಿ ದರದಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳುವ ಅವಕಾಶ ಕೊಟ್ಟಿದೆ ಚಿತ್ರತಂಡ.

  'ದೃಶ್ಯಂ' ಚಿತ್ರದ ಹಿಂದಿ ರೀಮೆಕ್‌ನಲ್ಲಿ ಅಜಯ್ ದೇವಗನ್ ಹಾಗೂ ಶ್ರಿಯಾ ಶರಣ್ ನಟಿಸಿದ್ದಾರೆ. ಅಕ್ಟೋಬರ್ 2 ತಾರೀಖಿಗೂ 'ದೃಶ್ಯಂ' ಸಿನಿಮಾ ಕಥೆಗೂ ದೊಡ್ಡ ಲಿಂಕ್ ಇದೆ. ಹಾಗಾಗಿ ಈ ದಿನ ಇಂತಾದೊಂದು ರಿಯಾಯಿತಿಯನ್ನು ಚಿತ್ರತಂಡ ನೀಡಿದೆ. ಐನಾಕ್ಸ್ ಮಲ್ಟಿಪ್ಲೆಕ್ಸ್ ಚೈನ್ ಜೊತೆ ಚಿತ್ರತಂಡ ಕೈ ಜೋಡಿಸಿದ್ದು, ಈಗಾಗಲೇ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ನವೆಂಬರ್ 18ಕ್ಕೆ ಬಿಡುಗಡೆಯಾಗುವ ಚಿತ್ರಕ್ಕೆ ಇಂದೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾ ಎಂದರೆ ಹೌದು ಎನ್ನುವ ಉತ್ತರ ಬರ್ತಿದೆ. ಐನಾಕ್ಸ್ ಆಪ್ ಹಾಗೂ ವೆಬ್‌ಸೈಟ್‌ನಲ್ಲಿ ಮಾತ್ರ 'ದೃಶ್ಯಂ'-2 ಚಿತ್ರದ ಟಿಕೆಟ್ ಬುಕ್ ಮಾಡಿಕೊಳ್ಳುವ ಅವಕಾಶ ಇದೆ.

  ತುಂಡುಡುಗೆಯ ಯುವತಿಯರ ನಡುವೆ ಚಿತ್ರಗುಪ್ತ: 'ಥ್ಯಾಂಕ್‌ ಗಾಡ್‌' ಚಿತ್ರ ಬ್ಯಾನ್‌ಗೆ ಶಿಕ್ಷಣ ಸಚಿವರ ಒತ್ತಾಯತುಂಡುಡುಗೆಯ ಯುವತಿಯರ ನಡುವೆ ಚಿತ್ರಗುಪ್ತ: 'ಥ್ಯಾಂಕ್‌ ಗಾಡ್‌' ಚಿತ್ರ ಬ್ಯಾನ್‌ಗೆ ಶಿಕ್ಷಣ ಸಚಿವರ ಒತ್ತಾಯ

  ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ. ಹಾಗಾಗಿ 'ದೃಶ್ಯಂ'- 2 ಸಿನಿಮಾವನ್ನು ಗೆಲ್ಲಿಸಲು ಇಂತಾದೊಂದು ಐಡಿಯಾ ಮಾಡಿದ್ದಾರೆ ಎಂದು ಕೆಲವರು ಕುಹಕವಾಡುತ್ತಿದ್ದಾರೆ. ಮತ್ತೆ ಕೆಲವರು ನಿಜಕ್ಕೂ ಇದು ಒಳ್ಳೆ ಪ್ರಯತ್ನ ಎನ್ನುತ್ತಿದ್ದಾರೆ.

  50%ರಷ್ಟು ರಿಯಾಯಿತಿ ಯಾಕೆ?

  50%ರಷ್ಟು ರಿಯಾಯಿತಿ ಯಾಕೆ?

  ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಹಿಂದಿ ಸಿನಿಮಾಗಳು ವಿಫಲವಾಗುತ್ತಿವೆ. ಮಲಯಾಳಂನಲ್ಲಿ 'ದೃಶ್ಯಂ'-2 ಚಿತ್ರವನ್ನು ಈಗಾಗಲೇ ಸಾಕಷ್ಟು ಜನ ನೋಡಿದ್ದಾರೆ. ಹಾಗಾಗಿ ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದು ಕಷ್ಟ. ಮೊದಲ ದಿನವೇ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಸೆಳೆಯಲು ಚಿತ್ರತಂಡ ಟಿಕೆಟ್ ದರದಲ್ಲಿ 50%ರಷ್ಟು ರಿಯಾಯಿತಿ ನೀಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಒಳ್ಳೆ ಓಪನಿಂಗ್ ಸಿಕ್ಕರೆ ನಿಧಾನವಾಗಿ ಪ್ರೇಕ್ಷಕರು ಥಿಯೇಟರ್‌ಗೆ ಬರ್ತಾರೆ ಎನ್ನುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.

  ಸಾವಿರಾರು ಕೋಟಿ ವಂಚನೆಯ ಕತೆ ಹೇಳಲು ಬರುತ್ತಿದ್ದಾರೆ ಅಜಯ್ ದೇವಗನ್ಸಾವಿರಾರು ಕೋಟಿ ವಂಚನೆಯ ಕತೆ ಹೇಳಲು ಬರುತ್ತಿದ್ದಾರೆ ಅಜಯ್ ದೇವಗನ್

  ಅ. 2ರಂದು ರಿಯಾಯಿತಿಗೆ ಕಾರಣ?

  ಅ. 2ರಂದು ರಿಯಾಯಿತಿಗೆ ಕಾರಣ?

  'ದೃಶ್ಯಂ' ಚಿತ್ರದಲ್ಲಿ ವಿಜಯ್ ಸಾಲ್ಗೋಂಕರ್ ಆಗಿ ಅಜಯ್ ದೇವಗನ್ ಹಾಗೂ ಆತನ ಪತ್ನಿ ನಂದಿನಿ ಪಾತ್ರದಲ್ಲಿ ಶ್ರಿಯಾ ನಟಿಸಿದ್ದಾರೆ. ಕಥೆಯಲ್ಲಿ ಮಗಳು ಅಂಜು ಅಚಾನಕ್‌ ಆಗಿ ಕಿಡಿಗೇಡಿಯನ್ನು ಕೊಲೆ ಮಾಡಿರುತ್ತಾಳೆ. ತನ್ನ ಕುಟುಂಬವನ್ನು ಈ ಪ್ರಕರಣದಿಂದ ರಕ್ಷಿಸಿಕೊಳ್ಳಲು ವಿಜಯ್ ಏನೆಲ್ಲಾ ಉಪಾಯ ಮಾಡ್ತಾನೆ ಅನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿತ್ತು. ಆ ಕೊಲೆ ನಡೆದ ದಿನ ಅಂದರೆ ಅಕ್ಟೋಬರ್ 2ರಂದು ಫ್ಯಾಮಿಲಿ ಊರಿನಲ್ಲಿ ಇರಲೇ ಇಲ್ಲ, ಸ್ವಾಮಿ ಚಿನ್ಮಯಾನಂದ ಆಶ್ರಮಕ್ಕೆ ಹೋಗಿದ್ದರು ಎಂದು ಸಾಬೀತುಪಡಿಸಲು ಒಂದು ಹೊಸ ದೃಶ್ಯವನ್ನು ಕಟ್ಟುತ್ತಾನೆ. ಹಾಗಾಗಿ ಅಕ್ಟೋಬರ್ 2 ಅಂದಾಕ್ಷಣ ಕೆಲವರಿಗೆ 'ದೃಶ್ಯಂ' ಕಥೆ ನೆನಪಾಗುತ್ತದೆ. ಇದೇ ಕಾರಣಕ್ಕೆ ಇಂದು ಈ ರಿಯಾಯಿತಿ ನೀಡಿದ್ದಾರೆ.

  ಓಟಿಟಿಯಲ್ಲಿ ಮಲಯಾಳಂ 'ದೃಶ್ಯಂ- 2' ಹಿಟ್

  ಓಟಿಟಿಯಲ್ಲಿ ಮಲಯಾಳಂ 'ದೃಶ್ಯಂ- 2' ಹಿಟ್

  7 ವರ್ಷಗಳ ನಂತರ ಮಲಯಾಳಂನಲ್ಲಿ 'ದೃಶ್ಯಂ' ಸೀಕ್ವೆಲ್ ಬಂದು ಸಕ್ಸಸ್ ಕಂಡಿತ್ತು. ಥಿಯೇಟರ್ ಬದಲು ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಿತ್ತು. ನಿರ್ದೇಶಕರ ಚಾಕಚಕ್ಯತೆ ಮೋಹನ್ ಲಾಲ್ ಹಾಗೂ ಮೀನಾ ನಟನೆಗೆ ವೀಕ್ಷಕರು ಫಿದಾ ಆಗಿದ್ದರು. ಆದರೆ ಕನ್ನಡಕ್ಕೆ ರೀಮೆಕ್ ಆಗಿದ್ದ ಸಿನಿಮಾ ಅಷ್ಟೇನು ಸದ್ದು ಮಾಡಲಿಲ್ಲ. ತೆಲುಗಿನಲ್ಲೂ ನೇರವಾಗಿ ಓಟಿಟಿಗೆ ಸಿನಿಮಾ ಬಂದಿತ್ತು.

  ನ. 18ಕ್ಕೆ ಹಿಂದಿ 'ದೃಶ್ಯಂ -2' ರಿಲೀಸ್

  ನ. 18ಕ್ಕೆ ಹಿಂದಿ 'ದೃಶ್ಯಂ -2' ರಿಲೀಸ್

  ಅಭಿಷೇಕ್ ಪಾಟಕ್ 'ದೃಶ್ಯಂ -2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಅಜಯ್ ದೇವಗನ್, ಶ್ರಿಯಾ ಶರಣ್ ಜೊತೆಗೆ ಅಕ್ಷಯೆ ಖನ್ನಾ, ತಬು ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿ ಮಿಂಚಿದ್ದಾರೆ. ತೆಲುಗಿನ ದೇವಿಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ. 50%ರಷ್ಟು ರಿಯಾಯಿತಿ ದರದಲ್ಲಿ ಟಿಕೆಟ್ ಬುಕ್ಕಿಂಗ ಅವಕಾಶ ಸಿಕ್ಕಿರುವುದರಿಂದ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಗುವ ಸಾಧ್ಯತೆಯಿದೆ.

  English summary
  Ajay devgn Starrer Drishyam 2 Makers Announce A Big Discount Offer On Movie Tickets For Release Day. Know More.
  Sunday, October 2, 2022, 13:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X