For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ 'ಆದಿಪುರುಷ್' ಚಿತ್ರದಲ್ಲಿ ಇರುವುದಿಲ್ಲವಂತೆ ಆ 'ಬಿಗ್' ಸ್ಟಾರ್!

  |

  'ಬಾಹುಬಲಿ' ಖ್ಯಾತಿಯ ನಟ ಪ್ರಭಾಸ್ ನಟಿಸಲಿರುವ 'ಆದಿಪುರುಷ್' ಸಿನಿಮಾ ಬಜೆಟ್ ಹಾಗೂ ಕಲಾವಿದರ ಆಯ್ಕೆಯಿಂದಲೇ ಭಾರಿ ಸದ್ದು ಮಾಡ್ತಿದೆ. 400 ರಿಂದ 500 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಲಿದೆ ಎಂದು ಬಾಲಿವುಡ್‌ನಲ್ಲಿ ವರದಿಯಾಗಿದೆ.

  'ಆದಿಪುರುಷ್' ಚಿತ್ರದಲ್ಲಿ ರಾಮನಾಗಿ ಪ್ರಭಾಸ್ ನಟಿಸಲಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೂ ಶಿವನ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯಿಸಲಿದ್ದಾರೆ ಎಂಬ ಸುದ್ದಿಗಳು ಬಹಳ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಇದೀಗ, ಈ ದೊಡ್ಡ ಪ್ರಾಜೆಕ್ಟ್‌ನಲ್ಲಿ ಆ ನಟ ಇರುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

  ಅಜಯ್ ದೇವಗನ್ ಇರುವುದಿಲ್ಲ

  ಅಜಯ್ ದೇವಗನ್ ಇರುವುದಿಲ್ಲ

  'ಆದಿಪುರುಷ್' ಸಿನಿಮಾದಲ್ಲಿ ಅಜಯ್ ದೇವಗನ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಆದರೆ, ಅಜಯ್ ದೇವಗನ್ ಈ ಪಾತ್ರ ಮಾಡುತ್ತಿಲ್ಲ ಹಾಗೂ ಈ ಪ್ರಾಜೆಕ್ಟ್‌ನಲ್ಲೂ ನಟಿಸುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

  ಪ್ರಭಾಸ್ 'ಆದಿಪುರುಷ್' ಸಿನಿಮಾಗೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟನ ಎಂಟ್ರಿಪ್ರಭಾಸ್ 'ಆದಿಪುರುಷ್' ಸಿನಿಮಾಗೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟನ ಎಂಟ್ರಿ

  ಅಜಯ್ ಬೇರೆ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ

  ಅಜಯ್ ಬೇರೆ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ

  ''ಆದಿಪುರುಷ್ ಚಿತ್ರದಲ್ಲಿ 'ತನ್ಹಾಜಿ - ದಿ ಅನ್ಸಂಗ್ ವಾರಿಯರ್' ಚಿತ್ರದ ಜೋಡಿಯನ್ನು (ಸೈಫ್ ಅಲಿ ಖಾನ್ ಮತ್ತು ಅಜಯ್ ದೇವಗನ್) ಮತ್ತೆ ಒಂದಾಗಿಸುವ ಯೋಜನೆ ಹೊಂದಿದ್ದಾರೆ ಎಂದು ವರದಿಯಾಯಿತು. ಈ ವರದಿಗಳಲ್ಲಿ ಸತ್ಯವಿಲ್ಲ. ಆದಿಪುರುಷ್ ಚಿತ್ರದಲ್ಲಿ ಅಜಯ್ ಭಾಗಿಯಾಗುತ್ತಿಲ್ಲ. ಈಗಾಗಲೇ ಹಲವು ಚಿತ್ರದಲ್ಲಿ ಅಜಯ್ ನಟಿಸುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯ 'ಗಂಗುಬಾಯಿ ಕಥಿಯಾವಾಡಿ' ಚಿತ್ರದ 10 ದಿನಗಳ ಕೆಲಸ ಬಾಕಿ ಉಳಿದಿದೆ'' ಎಂದು ಅಜಯ್ ಆಪ್ತರು ತಿಳಿಸಿದ್ದಾರೆ.

  ಚಿಕ್ಕಣ್ಣ ಹೀರೋ ಅಲ್ಲ ಒಬ್ಬ ಒಳ್ಳೆ ನಟ | Tharun Sudeer | Chikkanna | Upadyaksha | Filmibeat Kannada
  ಸತತ ಸಿನಿಮಾಗಳಲ್ಲಿ ದೇವಗನ್ ಬ್ಯುಸಿ

  ಸತತ ಸಿನಿಮಾಗಳಲ್ಲಿ ದೇವಗನ್ ಬ್ಯುಸಿ

  'ಭುಜ್ - ದಿ ಪ್ರೈಡ್ ಆಫ್ ಇಂಡಿಯಾ' ಸಿನಿಮಾ ಬಾಕಿ ಉಳಿದಿರುವ ಚಿತ್ರೀಕರಣವನ್ನು ಪೂರ್ಣಗೊಳಿಸಬೇಕಾಗಿದೆ. ಈ ಸಿನಿಮಾ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ತದನಂತರ 'ಮೈದಾನ್'ನ ಚಿತ್ರದ ಶೆಡ್ಯೂಲ್‌ ಸಿದ್ಧವಾಗಿದೆ. ಇದರ ಜೊತೆಗೆ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಚಿತ್ರಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ'' ಎಂದು ಆಪ್ತರು ಮಾಹಿತಿ ನೀಡಿದ್ದಾರೆ.

  'ಆದಿಪುರುಷ' ಚಿತ್ರದಲ್ಲಿ ಸೀತೆ ಯಾರು? ಕೀರ್ತಿ, ಕಿಯಾರಾ ಬಳಿಕ ಮತ್ತೊಂದು ಹೆಸರು'ಆದಿಪುರುಷ' ಚಿತ್ರದಲ್ಲಿ ಸೀತೆ ಯಾರು? ಕೀರ್ತಿ, ಕಿಯಾರಾ ಬಳಿಕ ಮತ್ತೊಂದು ಹೆಸರು

  English summary
  Adipurush Update: Bollywood actor Ajay devgn will not play lord shiva in this mega project says report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X