ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ದುರಂತ ಅಂತ್ಯ ; ಕಣ್ಣೀರಾದ ಚಿತ್ರರಂಗ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.
ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಅಜಿತ್ ಪವಾರ್ ಅವರ ದುರಂತ ಅಂತ್ಯ ಮತ್ತೊಂದು ಉದಾಹರಣೆ.

ಹೌದು, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ದುರಂತ ವಿಮಾನ ಅಪಘಾತದಲ್ಲಿ ಇಂದು (ಜನವರಿ 28) ನಿಧನರಾಗಿದ್ದಾರೆ.
ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆ ಸಾರ್ವಜನಿಕ ಸಭೆ ನಡೆಸಲು ಅಜಿತ್ ಪವಾರ್ ಅವರು ಬಾರಾಮತಿಗೆ ತೆರೆಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದ್ದು ಅಜಿತ್ ಪವಾರ್ ಅವರ ಜೊತೆ ವಿಮಾನದಲ್ಲಿದ್ದ ಆರು ಜನ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಜಿತ್ ಪವಾರ್ ಅವರ ಈ ದುರಂತ ಅಂತ್ಯ ರಾಜಕೀಯ ರಂಗಕ್ಕೆ ಆಘಾತ ನೀಡಿದೆ. ಚಿತ್ರರಂಗಕ್ಕೂ ಕೂಡ ಬರಸಿಡಿಲು ಬಡೆದಿದೆ. ಹಲವರು ಅಜಿತ್ ಪವಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಶ್ರದ್ದಾಂಜಲಿ ಸಲ್ಲಿಸುತ್ತಿದ್ದಾರೆ.
ಅಜಿತ್ ಪವಾರ್ ಅವರ ಕುರಿತು ಮಾಧ್ಯಮಗಳಿಗೆ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದು ತುಂಬಾನೇ ಭಯಾನಕವಾದ ಸುದ್ದಿ ಇದು ಎಂದು ಹೇಳಿದ್ದಾರೆ.ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇನ್ನು ಎರಡು ಬಾರಿ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರದ ಸೇವೆ ಸಲ್ಲಿಸಿದ್ದ ಕಾಂಗ್ರೆಸ್‌ನ ನಾಯಕ ವಿಲಾಸ್ ರಾವ್ ದೇಶಮುಖ್ ಅವರ ಮಗ ಮತ್ತು ನಟ ನಟ ರಿತೇಶ್ ದೇಶ್‌ಮುಖ್ ಕೂಡ ಅಜಿತ್ ಪವಾರ್ ಅವರನ್ನು ನೆನೆದು ಭಾವುಕರಾಗಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಿತೇಶ್ ದೇಶಮುಖ್ ಒಂದು ದುರಂತ ಅಪಘಾತದಲ್ಲಿ ಅಜಿತ್ ದಾದಾ ಅವರನ್ನು ಕಳೆದುಕೊಂಡಿರುವುದು ಕೇಳಿ ತೀವ್ರ ದುಃಖವಾಯಿತು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಅತಿ ಕ್ರಿಯಾಶೀಲ ನಾಯಕರಲ್ಲಿ ಒಬ್ಬರಾಗಿದ್ದ ಅಜಿತ್ ದಾದಾಗೆ ಕಳಪೆ ಪ್ರದರ್ಶನ ಇಷ್ಟವಿರಲಿಲ್ಲ. ಅವರು ಸುತ್ತಮುತ್ತಲಿನವರನ್ನು ಉತ್ತಮ ಕಾರ್ಯಕ್ಷಮತೆಗೆ ಪ್ರೇರೇಪಿಸುತ್ತಿದ್ದರು ಎಂದು ಹೇಳಿರುವ ರಿತೇಶ್ ದೇಶಮುಖ್ ಅವರು ತಮ್ಮ ಮನಸ್ಸಿನ ಮಾತನ್ನು ಹೇಳಲು ಹಿಂಜರಿಯುತ್ತಿರಲಿಲ್ಲ, ಅವರ ಹಾಸ್ಯಪ್ರಜ್ಞೆ ಅದ್ಭುತವಾಗಿತ್ತು. ಇಡೀ ರಾಜ್ಯದ ಜನರು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಅಕಾಲಿಕ ನಿಧನದಿಂದ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ. ಅವರನ್ನು ಹಲವು ಬಾರಿ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತ್ತು, ಅವರನ್ನು ಸದಾ ನಾನು ನೆನಪಿಸಿಕೊಳ್ಳುತ್ತೇನೆ. ಪವಾರ್ ಕುಟುಂಬ, ಅವರ ಪ್ರೀತಿಪಾತ್ರರು ಮತ್ತು ಲಕ್ಷಾಂತರ ಬೆಂಬಲಿಗರಿಗೆ ನನ್ನ ಸಂತಾಪಗಳು ಎಂದಿದ್ದಾರೆ.

ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾದ ಅಜಯ್ ದೇವಗನ್ ಕೂಡ ಕಂಬನಿ ಮಿಡಿದಿದ್ದು, ಮಾನ್ಯ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನದಿಂದ ಆಘಾತಕ್ಕೊಳಗಾಗಿದ್ದೇನೆ ಎಂದಿದ್ದಾರೆ. ಅತೀವ ನೋವಾಗಿದೆ ಎಂದಿದ್ದಾರೆ. ಅಜಿತ್ ಪವಾರ್ ಅವರ ಕುಟುಂಬ ವರ್ಗಕ್ಕೆ, ಅವರ ಆತ್ಮೀಯರಿಗೆ ಹಾಗೂ ಈ ದೊಡ್ಡ ನಷ್ಟದಿಂದ ತೀವ್ರವಾಗಿ ಬಳಲುತ್ತಿರುವ ಎಲ್ಲರಿಗೂ ನನ್ನ ಸಂತಾಪಗಳು ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಹಿರಿಯ ನಟ ಅನುಪಮ್ ಖೇರ್ ಕೂಡ ಸಂತಾಪವನ್ನು ಸೂಚಿಸಿದ್ದು ತುಂಬಾನೇ ಸೌಮ್ಯ ಮತ್ತು ಕರುಣೆಯನ್ನು ಹೊಂದಿದ್ದ ವ್ಯಕ್ತಿ, ಅವರ ದುರಂಗ ಅಂತ್ಯದಿಂದ ನನಗೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಇವರಲ್ಲದೇ ಗಾಯಕ ರಾಹುಲ್ ವೈದ್ಯ, ನಟಿ ಮತ್ತು ರಾಜಕಾರಣಿ ಸ್ಮೃತಿ ಇರಾನಿ ಸೇರಿ ಹಿಂದಿ ಚಿತ್ರರಂಗದ ಹಲವಾರು ಜನ ಅಜಿತ್ ಪವಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.


Click it and Unblock the Notifications











