ಮದುವೆಯಾಗದೆ ತಂದೆಯಾದ ಬಾಲಿವುಡ್ ನಟ
ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಅರ್ಜುನ್ ರಾಂಪಾಲ್ ಅವರ ಗೆಳತಿ ಗೇಬ್ರಿಯೆಲಾ ಜೋಡಿ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿರುವ ಸುದ್ದಿ ಬಹಿರಂಗವಾಗಿದೆ.
1998ರಲ್ಲಿ ಮೆಹ್ರಾ ಜೆಸೈ ಜೊತೆ ಮದುವೆಯಾಗಿದ್ದ ಅರ್ಜುನ್ ರಾಂಪಾಲ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು. 20 ವರ್ಷದ ಬಳಿಕ ಮೆಹ್ರಾ ಮತ್ತು ಅರ್ಜುನ್ ಬೇರೆ ಬೇರೆಯಾಗಿದ್ದರು.
ಗೇಬ್ರಿಯೆಲಾ ಜೊತೆ ಅರ್ಜುನ್ ರಾಂಪಾಲ್ ರಿಲೆಷನ್ ಷಿಪ್ ನಲ್ಲಿದ್ದರು. ಇದೀಗ ಈ ಜೋಡಿಗೆ ಗಂಡು ಮಗು ಜನಿಸಿದೆ. ಅರ್ಜುನ್ ರಾಂಪಾಲ್ ಅವರ ಮೂರನೇ ಮಗುವನ್ನ ನೋಡಲು ಹೆಣ್ಣು ಮಕ್ಕಳಿಬ್ಬರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಈ ವಿಷ್ಯವನ್ನ ಅರ್ಜುನ್ ರಾಂಪಾಲ್ ಮಗಳು ನಿಧಿ ದತ್ತಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ತಂದೆಗೆ ಶುಭಾಶಯ ಕೋರಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಅರ್ಜುನ್ ರಾಂಪಾಲ್ ಮತ್ತು ಗೇಬ್ರಿಯೆಲಾ ಮಗುವಿಗೆ ಜನ್ಮ ನೀಡುತ್ತಿದ್ದೇವೆ ಎಂದು ಅಧಿಕೃತ ಘೋಷಿಸಿದ್ದರು.
More from Filmibeat
English summary
Bollywood actress Arjun Rampal and Gabriella Demetriades welcome baby boy on Thursday (July 18).


Click it and Unblock the Notifications











