ನೀನಿದ್ದರೆ ಭಯ ಇಲ್ಲ ; ನಿರ್ದೇಶಕನ ಜೊತೆ ಸರಳವಾಗಿ ರಿಜಿಸ್ಟರ್ ಮದುವೆಯಾದ 32 ವರ್ಷದ ನಟಿ

''ಮದುವೆ'' ಎಂಬ ಮೂರಕ್ಷರದ ನಂಟಿನ ಜತೆ ಎರಡು ಜೀವ ಬೆಸೆದುಕೊಳ್ಳಲು ಅಲ್ಲಲ್ಲಿ ಕೆಲವರು ಸರಳ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ದೇಗುಲದಲ್ಲಿ ನಡೆಯುವ ಸರಳ ವಿವಾಹ, ರಿಜಿಸ್ಟರ್ಡ್‌ ಮದುವೆ, ಸಾಮೂಹಿಕ ವಿವಾಹ, ಗೋ ಗ್ರೀನ್‌ ಜಾಗೃತಿಯ ಪರಿಸರ ಮದುವೆಗಳು, ಹಳ್ಳಿಗಳಲ್ಲಿ ನಡೆಯುವ ಸರಳ ರೈತ ಮದುವೆಗಳು...

ಹೀಗೆ ಹಲವು ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರ ಅಲ್ಲ. ಈ ಸಾಲಿನಲ್ಲಿ ಸೆಲೆಬ್ರೆಟಿಗಳು ಕೂಡ ಇದ್ದಾರೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಸರಳವಾಗಿ ವೈವಾಹಿಕ ಬದುಕಿಗೆ ಮುನ್ನುಡಿ ಬರೆಯುತ್ತಾರೆ. ಉದಾಹರಣೆಗೆ ಆಕಾಂಕ್ಷಾ ರಂಜನ್ ಕಪೂರ್ ಮತ್ತು ಶರಣ್ ಶರ್ಮಾ.

Akansha Ranjan Marries Director Sharan Sharma Date Anniversary Alia Bhatt Steals the Show

ಹೌದು. ಆಕಾಂಕ್ಷಾ ರಂಜನ್ ಕಪೂರ್, ಬಾಲಿವುಡ್ ನ ಚೆಲುವೆ. 2020ರಲ್ಲಿ ತೆರೆಗೆ ಬಂದ "ಗಿಲ್ಟಿ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಆಕಾಂಕ್ಷಾ, ರಾಜ್ ಕುಮಾರ್ ರಾವ್ ಮತ್ತು ಹುಮಾ ಖುರೇಶಿ ಅಭಿನಯದ "ಮೋನಿಕಾ ಓ ಮೈ ಡಾರ್ಲಿಂಗ್" ಚಿತ್ರದಲ್ಲಿಯೂ ಅಭಿನಯಿಸಿದ್ದರು.‌

ಇನ್ನು ಆಕಾಂಕ್ಷಾ ಕೇವಲ ನಟಿ‌ ಮಾತ್ರವಲ್ಲ. ಫ್ಯಾಷನ್ ಐಕಾನ್ ಕೂಡ ಹೌದು. ಸೋಶಿಯಲ್ ‌ಮೀಡಿಯಾ ಸ್ಟಾರ್ ಕೂಡ ಹೌದು. ಎಲ್ಲಕ್ಕಿಂತ ಮುಖ್ಯವಾಗಿ ಆಲಿಯಾ ಭಟ್ ಅವರ ಬಾಲ್ಯದ ಗೆಳತಿ ಈ ಆಕಾಂಕ್ಷಾ.

ಇಂಥಾ ಆಕಾಂಕ್ಷಾ ಬಾಲಿವುಡ್ ನ ಖ್ಯಾತ ನಿರ್ದೇಶಕ ಶರಣ್ ಶರ್ಮಾ ಅವರ ಜೊತೆ ಸರಳವಾಗಿ ರಿಜಿಸ್ಟರ್ ಮದುವೆಯಾಗಿದ್ದಾರೆ. ತಮ್ಮ ಕುಟುಂಬಸ್ಥರು ಮತ್ತು ಅತ್ಯಾಪ್ತರ ಸಮ್ಮುಖದಲ್ಲಿ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. "ನೀನಿಲ್ಲ ಅಂದ್ರೆ ಮನೆ ಮನೆ ತರ ಅನ್ಸಲ್ಲ, ನೀನಿದ್ರೆ ನನಗೆ ಯಾವುದೇ ಹೆದರಿಕೆ ಇರಲ್ಲ" ಎಂದು ಕ್ಯಾಪ್ಷನ್ ನೀಡಿ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶುಭಾಶಯಗಳ ಮಹಾಪೂರ

ಆಕಾಂಕ್ಷಾ ತಮ್ಮ ಮದುವೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇ ತಡ, ಹಲವರು ನವ ಜೋಡಿಗೆ ಶುಭ ಕೋರುತ್ತಿದ್ದಾರೆ. ಪ್ರಕಾಶ್ ರಾಜ್ ಅವರ ಪತ್ನಿ ಮತ್ತು ನೃತ್ಯ ನಿರ್ದೇಶಕಿ ಪೋನಿ ಪ್ರಕಾಶ್, ವಮಿಕಾ ಗಬ್ಬಿ, ಅನನ್ಯಾ ಪಾಂಡೆ, ಮಲೈಕಾ ಅರೋರಾ, ಅಥಿಯಾ ಶೆಟ್ಟಿ, ಅಂಶುಲಾ ಕಪೂರ್ ಹೀಗೆ ಹಲವರು ಆಕಾಂಕ್ಷಾ ಮತ್ತು ಶರಣ್ ಶರ್ಮಾಗೆ ಶುಭಾಶಯ ಕೋರಿದ್ದಾರೆ.

Akansha Ranjan Marries Director Sharan Sharma Date Anniversary Alia Bhatt Steals the Show

ಗೆಳತಿಯ ಮದುವೆಯಲ್ಲಿ ಆಲಿಯಾ ಮಸ್ತ್ ಡ್ಯಾನ್ಸ್

ಆಗಲೇ ಹೇಳಿದಂತೆ ಆಲಿಯಾ ಭಟ್, ಆಕಾಂಕ್ಷಾ ಅವರ ಬಾಲ್ಯದ ಗೆಳತಿ. ಜೊತೆಯಲ್ಲಿ ಉಂಡು ಬೆಳೆದವರು ಇಬ್ಬರು. ಹೀಗಿದ್ದಾಗ ತಮ್ಮ ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಆಲಿಯಾ ಸುಮ್ಮನೆ ಇರಲು ಹೇಗೆ ಸಾಧ್ಯ. ?

ಮದುವೆಯ ಮುನ್ನ ನಡೆದ ಸಂಗೀತ್ ಸೆರಮನಿಯಲ್ಲಿ ಮನಬಿಚ್ಚಿ ಕುಣಿದಿರುವ ಆಲಿಯಾ ವಧು ಅಕ್ಕ ಅನುಷ್ಕಾ ರಂಜನ್ ಕಪೂರ್ ಮತ್ತು ಭಾವ ಆದಿತ್ಯ ಸೀಲ್ ಜೊತೆ ಸೇರಿ ''ಮಾಹಿ ವೇ'' ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಇಷ್ಟೇ ಅಲ್ಲ ಮದುವೆಯ ಸಂಪೂರ್ಣ ಉಸ್ತುವಾರಿಯನ್ನು ಕೂಡ ವಹಿಸಿಕೊಂಡಿದ್ದರು ಆಲಿಯಾ ಭಟ್.

ಇನ್ನು ಜಾಹ್ನವಿ ಕಪೂರ್ ''ಕಭಿ ಖುಷಿ ಕಭಿ ಗಮ್'' ಚಿತ್ರದ ಶಾವಾ ಶಾವಾ ಹಾಡಿಗೆ ಹೆಜ್ಜೆ ಹಾಕಿದರೆ, ಸಲ್ಮಾನ್ ಖಾನ್ ಅವರ ಪ್ರಖ್ಯಾತ ಹಾಡು ಜೀನೆ ಕೆ ಹೈ ಚಾರ್ ದಿನ್ ಹಾಡಿಗೆ ಕರಣ್ ಜೋಹರ್ ಡ್ಯಾನ್ಸ್ ಮಾಡಿದ್ದಾರೆ.

ಪ್ರೇಮ ನಿವೇದನೆಯ ದಿನದಂದೇ ಮದುವೆ

ನಾಲ್ಕು ವರ್ಷಗಳ ಹಿಂದೆ ಜುಲೈ ಹನ್ನೊಂದರಂದು ಇಬ್ಬರು ತಮ್ಮ ಮನದ ಮಾತು ಹಂಚಿಕೊಂಡಿದ್ದರು. ಜೊತೆಯಲ್ಲಿ ಓಡಾಡಲು ಶುರು ಮಾಡಿದ್ದರು. ಅದೇ ದಿನದಂದು ಅಂದರೆ ಜುಲೈ 11ರಂದೇ ಆಕಾಂಕ್ಷಾ ಮತ್ತು ಶರಣ್ ಮದುವೆಯಾಗಿದ್ದು ವಿಶೇಷ.

ಯಾರು ಈ ಶರಣ್ ಶರ್ಮಾ..?

ಶರಣ್ ಶರ್ಮಾ ಬಾಲಿವುಡ್ ನ ಯುವ ಮತ್ತು ಪ್ರತಿಭಾವಂತ ನಿರ್ದೇಶಕ. "ಯೇ ಜವಾನಿ ಹೇ ದಿವಾನಿ" .. " ಏ ದಿಲ್ ಹೈ ಮುಷ್ಕೀಲ್" ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಶರಣ್ ಶರ್ಮಾ, ಜಾಹ್ನವಿ ಕಪೂರ್ ಅಭಿನಯದ "ಗುಂಜನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್" ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು.

ಆ ನಂತರ "ಮಿಸ್ಟರ್ & ಮಿಸೆಸ್ ಮಾಹಿ" ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರದ ನಾಯಕಿ ಕೂಡ ಜಾಹ್ನವಿ ಕಪೂರ್ ಅನ್ನೋದು ವಿಶೇಷ. ಇನ್ನು ಶರಣ್ ಸಾಮಾನ್ಯ ವ್ಯಕ್ತಿಯಲ್ಲ. ಬದಲಿಗೆ ಹುಟ್ಟುತ್ತಲೇ ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಕೋಟ್ಯಾಧಿಪತಿ ಎನ್ನುವುದು ಇವರ ಕುರಿತು ಕೇಳಿ ಬರುವ ಮತ್ತೊಂದು ಸುದ್ದಿ. ಇನ್ನುಳಿದಂತೆ ಆಕಾಂಕ್ಷಾಗೆ ಈಗ 32 ವರ್ಷ. ಶರಣ್‌ಗೆ 34 ವರ್ಷ. ಸದ್ಯ ಇಬ್ಬರು ಹೊಸ ಜೀವನ ಶುರು ಮಾಡಿದ್ದು ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

English summary
FIRST PICS OUT: Akansha Ranjan ties the knot with director Sharan Sharma. See beautiful wedding photos and details of BFF Alia Bhatt’s sangeet performance!
Read more about: marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X