ಅಕ್ಷಯ್ ಕುಮಾರ್ ಹೊಸ ಸಿನಿಮಾ ದಾಖಲೆ ಮೊತ್ತಕ್ಕೆ ಮಾರಾಟ

ನಟ ಅಕ್ಷಯ್ ಕುಮಾರ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ದಾಖಲೆ ಮೊತ್ತದ ಹಣ ಗಳಿಸುವುದು ಸಾಮಾನ್ಯ. ಆದರೆ ಚಿತ್ರಮಂದಿರಗಳಿಗೆ ಬಿಡುಗಡೆ ಆಗದಿದ್ದರೂ ದಾಖಲೆ ಮೊತ್ತ ಗಳಿಸಿದೆ.

Recommended Video

ಫಿಲಂ ಟಿಕೆಟ್ ಗೆ 5 ರೂಪಾಯಿ ಜಾಸ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಫಿಲಂ ಛೇಂಬರ್ | Film Chamber | KFI

ಕೊರೊನಾ ಲಾಕ್‌ಡೌನ್‌ ನಿಂದಾಗಿ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳು ಬಾಗಿಲು ಮುಚ್ಚಿವೆ. ನಿರ್ಮಾಣವಾಗಿರುವ ಸಿನಿಮಾಗಳನ್ನು ಪ್ರೇಕ್ಷಕನ ಮುಂದೆ ತರಲಾರದೆ ಒದ್ದಾಡುತ್ತಿದ್ದಾರೆ. ಸಾಲ ತಂದು ಸಿನಿಮಾ ಮಾಡಿದ ನಿರ್ಮಾಪಕರಿಗೆ ಬಡ್ಡಿ ಏರುತ್ತಲೇ ಇದೆ.

ಹೀಗಿದ್ದಾಗ ನಟ, ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿಗೆ ಬಿಡುಗಡೆ ಮಾಡುತ್ತಿದ್ದಾರೆ. ಸ್ಟಾರ್ ನಟರೂ ಸಹ ತಮ್ಮ ಸಿನಿಮಾಗಳನ್ನು ನೇರವಾಗಿ ಒಟಿಟಿಗೆ ಬಿಡುಗಡೆ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ ಸಹ ಒಟಿಟಿ ಯಲ್ಲಿ ನೇರವಾಗಿ ಬಿಡುಗಡೆ ಆಗುತ್ತಿದೆ.

ಲಕ್ಷ್ಮಿ ಬಾಂಬ್ ಸಿನಿಮಾ ಒಟಿಟಿಗೆ ಮಾರಾಟ

ಲಕ್ಷ್ಮಿ ಬಾಂಬ್ ಸಿನಿಮಾ ಒಟಿಟಿಗೆ ಮಾರಾಟ

ಮೂಲಗಳ ಪ್ರಕಾರ ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ ಲಕ್ಷ್ಮಿ ಬಾಂಬ್ ಒಟಿಟಿ ಗೆ ಮಾರಾಟವಾಗಿದೆ. ಅದೂ ದಾಖಲೆ ಮೊತ್ತಕ್ಕೆ. ಲಕ್ಷ್ಮಿ ಬಾಂಬ್ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ನಲ್ಲಿ ಬಿಡುಗಡೆ ಆಗಲಿದೆ. ಆದರೆ ಈಗಲೇ ಅಲ್ಲ.

ಭಾರಿ ಮೊತ್ತಕ್ಕೆ ಸಿನಿಮಾ ಮಾರಾಟ

ಭಾರಿ ಮೊತ್ತಕ್ಕೆ ಸಿನಿಮಾ ಮಾರಾಟ

ಅಕ್ಷಯ್ ಕುಮಾರ್ ಅವರ ಲಕ್ಷ್ಮಿ ಬಾಂಬ್ ಸಿನಿಮಾ ಬರೋಬ್ಬರಿ 145 ಕೋಟಿ ರೂಪಾಯಿಗೆ ಹಾಟ್‌ಸ್ಟಾರ್‌ ಗೆ ಮಾರಾಟವಾಗಿದೆಯಂತೆ. ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಭಾರತೀಯ ಸಿನಿಮಾ ಎಂಬ ಕಿರೀಟ ಈಗ ಲಕ್ಷ್ಮಿ ಬಾಂಬ್ ಪಾಲಾಗಿದೆ.

ಈಗಲೇ ಬಿಡುಗಡೆ ಆಗುವುದಿಲ್ಲ

ಈಗಲೇ ಬಿಡುಗಡೆ ಆಗುವುದಿಲ್ಲ

ಆದರೆ ಸಿನಿಮಾ ಈಗಲೇ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗುವುದಿಲ್ಲ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ತುಸು ಬಾಕಿ ಇದೆ. ಈಗಾಗಲೇ ಈ ಕೆಲಸ ಪ್ರಾರಂಭವಾಗಿದ್ದು, ತಿಂಗಳಲ್ಲಿ ಎಲ್ಲವೂ ಮುಗಿಯಲಿದೆ. ಅದಾದ ನಂತರವೇ ಸಿನಿಮಾ ಬಿಡುಗಡೆ ಆಗಲಿದೆ. ಅಲ್ಲಿಗೆ ಇನ್ನೂ ಎರಡು ತಿಂಗಳು ಅಕ್ಷಯ್ ಅಭಿಮಾನಿಗಳು ಕಾಯಬೇಕಾಗುತ್ತದೆ.

ಇದು ಕಡಿಮೆ ಮೊತ್ತವೇ ಎನ್ನಲಾಗುತ್ತಿದೆ

ಇದು ಕಡಿಮೆ ಮೊತ್ತವೇ ಎನ್ನಲಾಗುತ್ತಿದೆ

145 ಕೋಟಿಗೆ ಮಾರಾಟವಾಗಿದ್ದರೂ ಸಹ ಇದು ಕಡಿಮೆ ಮೊತ್ತವೇ ಎನ್ನಲಾಗುತ್ತಿದೆ. ಅಕ್ಷಯ್ ಕುಮಾರ್ ಅವರ ಕೆಲವು ಸಿನಿಮಾಗಳು 200 ಕೋಟಿಗೂ ಹೆಚ್ಚು ಸಂಪಾದಿಸಿದ್ದಿದೆ. ಹಾಗಾಗಿ 145 ಕೋಟಿ ಸಹ ಕಡಿಮೆ ಮೊತ್ತದ್ದೇ ಎನ್ನಲಾಗುತ್ತಿದೆ.

More from Filmibeat

English summary
Akshay Kumar's new movie Laxmi bomb sold for 145 crore for Hotstar. It will be on air after two months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X