For Quick Alerts
  ALLOW NOTIFICATIONS  
  For Daily Alerts

  ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್ ಕುಮಾರ್

  |

  ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಭಾರತದ ಏಕೈಕ ನಟ ಬಾಲಿವುಡ್ ಖಿಲಾಡಿ ಆಕ್ಷಯ್ ಕುಮಾರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಕ್ಷಯ್ ವಿಶ್ವದ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

  Upendra as college student I love you behind the scenes | Filmibeat Kannada

  ಅಮೆರಿಕದ ಖ್ಯಾತ ನಿಯತಕಾಲಿಕೆ ಫೋರ್ಬ್ಸ್ 2020ರ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ ಕಳೆದ ವರ್ಷ ಅಂದರೆ 2019 ಜೂನ್ 1 ರಿಂದ 2020 ಜೂನ್ 1ರ ವರೆಗಿನ ಗಳಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಮಂಗಳವಾರ ರಿಲೀಸ್ ಮಾಡಿದ ಫೋರ್ಬ್ಸ್ ಪಟ್ಟಿಯಲ್ಲಿ ಟಾಪ್ 10ರ ಪೈಕಿ ನಟ ಅಕ್ಷಯ್ ಕುಮಾರ್ ಸಹ ಇರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಮುಂದೆ ಓದಿ..

  ಅಕ್ಷಯ್ ಕುಮಾರ್ ದೊಡ್ಡ ಸ್ವಾರ್ಥಿ, ಹಣವಷ್ಟೆ ಆತನಿಗೆ ಮುಖ್ಯ ಎಂದ ನಿರ್ಮಾಪಕಅಕ್ಷಯ್ ಕುಮಾರ್ ದೊಡ್ಡ ಸ್ವಾರ್ಥಿ, ಹಣವಷ್ಟೆ ಆತನಿಗೆ ಮುಖ್ಯ ಎಂದ ನಿರ್ಮಾಪಕ

  ಅಕ್ಷಯ್ ಕುಮಾರ್ ಸಂಭಾವನೆ

  ಅಕ್ಷಯ್ ಕುಮಾರ್ ಸಂಭಾವನೆ

  ನಟ ಅಕ್ಷಯ್ ಕುಮಾರ್ ಈ ವರ್ಷ 48.5ಮಿಲಿಯನ್ ಡಾಲರ್ ಸಂಭಾವನೆ ಪಡೆದು 6ನೇ ಸ್ಥಾನದಲ್ಲಿದ್ದಾರೆ. ಆದರೆ ಕಳೆದ ವರ್ಷ ಅಕ್ಷಯ್ 4ನೇ ಸ್ಥಾನದಲ್ಲಿದ್ದರು. ಈ ಬಾರಿ 6ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಕ್ಷಯ್, ವರ್ಷಕ್ಕೆ ಮೂರರಿಂದ ನಾಲ್ಕು ಸಿನಿಮಾ ಮಾಡುತ್ತಾರೆ.

  ಅಗ್ರಸ್ಥಾನ ಕಾಪಾಡಿಕೊಂಡ ನಟ ಡ್ವೇನ್ ಜಾನ್ಸಸ್

  ಅಗ್ರಸ್ಥಾನ ಕಾಪಾಡಿಕೊಂಡ ನಟ ಡ್ವೇನ್ ಜಾನ್ಸಸ್

  ಮೊದಲ ಸ್ಥಾನದಲ್ಲಿ ಕುಸ್ತಿ ಪಟು ಕಮ್ ಹಾಲಿವುಡ್ ನಟ ದಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ವರ್ಷವೂ ಡ್ವೇನ್ ಜಾನ್ಸಸ್ ಮೊದಲ ಸ್ಥಾನದಲ್ಲಿದ್ದರು. ಈ ವರ್ಷವು ಅಗ್ರಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. 87.5 ಮಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದಾರೆ.

  14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಕುಮಾರ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಕುಮಾರ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

  2ನೇ ಮತ್ತು 3ನೇ ಸ್ಥಾನ

  2ನೇ ಮತ್ತು 3ನೇ ಸ್ಥಾನ

  ಇನ್ನೂ ಎರಡನೇ ಸ್ಥಾನದಲ್ಲಿ ಹಾಲಿವುಡ್ ಹಾರ್ಟ್ ಥ್ರೋಬ್ ರಿಯಾನ್ ರೆನಾಲ್ಡ್ಸ್

  ಸ್ಥಾನ ಪಡೆದುಕೊಂಡಿದ್ದಾರೆ. 71.5 ಮಿಲಿಯನ್ ಡಾಲರ್ ಗಳಿಸುವ ಮೂಲಕ ರಿಯಾನ್ ಎರಡನೇ ಸ್ಥಾನದಲ್ಲಿದ್ದಾರೆ. ನಟ ಮತ್ತು ನಿರ್ಮಾಪಕ ಮಾರ್ಕ್ ವಾಲ್ಟರ್ಗ್ 58 ಮಿಲಿಯನ್ ಡಾಲರ್ ಗಳಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

  10ನೇ ಸ್ಥಾನಕ್ಕೆ ಕುಸಿದ ಜಾಕಿ ಜಾನ್

  10ನೇ ಸ್ಥಾನಕ್ಕೆ ಕುಸಿದ ಜಾಕಿ ಜಾನ್

  4ನೇ ಸ್ಥಾನದಲ್ಲಿ ಹಾಲಿವುಡ್ ನಟ ಬೆನ್ ಅಫ್ಲೆಕ್ ಮತ್ತು 5ನೇ ಸ್ಥಾನದಲ್ಲಿ ವಿನ್ ಡೀಸೆಲ್ ಇದ್ದಾರೆ. ಕಳೆದ ವರ್ಷ 5ನೇ ಸ್ಥಾನದಲ್ಲಿದ್ದ ನಟ ಜಾಕಿ ಜಾನ್ ಈ ಬಾರಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ.

  ಅಕ್ಷಯ್ ಕಮಾರ್ ಸಿನಿಮಾ

  ಅಕ್ಷಯ್ ಕಮಾರ್ ಸಿನಿಮಾ

  ನಟ ಅಕ್ಷಯ್ ಕುಮಾರ್ ಕೊನೆಯದಾಗಿ ಗುಡ್ ನ್ಯೂಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಲಕ್ಷ್ಮಿ ಬಾಂಬ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ಪೃಥ್ವಿರಾಜ್, ಸೂರ್ಯವಂಶಿ, ಬೆಲ್ ಬಾಟಂ ಸೇರಿದ್ದಂತೆ ಸಾಲು ಸಾಲು ಸಿನಿಮಾಗಳು ಅಕ್ಷಯ್ ಕೈಯಲ್ಲಿದೆ.

  English summary
  Akshay Kumar 6th world highest paid actor on forbes list 2020. Akshay Kumar is only Indian Actor in forbes list 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X