14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಕುಮಾರ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

By ಫಿಲ್ಮ್ ಡೆಸ್ಕ್

ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್ ಕುಮಾರ್ ಎನ್ನುವುದು ಯಾವುದೆ ಅನುಮಾನವಿಲ್ಲ. ಅಕ್ಷಯ್ ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಕ್ಷಯ್ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದರೆ ಅಚ್ಚರಿಪಡಬೇಕಾಗಿಲ್ಲ.

Recommended Video

Rakshith Shetty ಸಿನಿ ಪಯಣಕ್ಕೆ 10 ವರ್ಷ | Filmibeat Kannada

ಅಂದ್ಹಾಗೆ ಅಕ್ಷಯ್ ಪೂರ್ಣ ಪ್ರಮಾಣದ ಪ್ರಮುಖ ಪಾತ್ರಗಳಿಗೆ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಆದರೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅಕ್ಷಯ್ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಅಕ್ಷಯ್ ನಿರ್ದೇಶಕ ಆನಂದ್ ಎಲ್ ರೈ ಅವರ ಅತ್ರಂಗಿ ರೇ ಸಿನಿಮಾದಲ್ಲಿ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಅಕ್ಷಯ್ ಪಡೆಯುತ್ತಿರುವ ಸಂಭಾವನೆ ಬಾಲಿವುಡ್ ಮಂದಿಯನ್ನು ಹುಬ್ಬೇರಿಸುವಂತೆ ಮಾಡಿದೆ. ಮುಂದೆ ಓದಿ...

14 ದಿನದ ಶೂಟಿಂಗ್ ಗೆ 27 ಕೋಟಿ ಸಂಭಾವನೆ

14 ದಿನದ ಶೂಟಿಂಗ್ ಗೆ 27 ಕೋಟಿ ಸಂಭಾವನೆ

ಸಾರಾ ಅಲಿ ಖಾನ್ ಮತ್ತು ತಮಿಳು ನಟ ಧನುಷ್ ಅಭಿನಯಿಸುತ್ತಿರುವ ಈ ಸಿನಿಮಾಗೆ ಅಕ್ಷಯ್ 14 ದಿನಗಳ ಕಾಲ್ ಶೀಟ್ ನೀಡಿದ್ದಾರೆ. ಈ 14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಬರೋಬ್ಬರಿ 27 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಅಕ್ಷಯ್ ಕುಮಾರ್ ಒಂದು ದಿನದ ಚಿತ್ರೀಕರಣಕ್ಕೆ 1 ಕೋಟಿ ಪಡೆಯುತ್ತಾರೆ. ಆದರೆ ಆನಂದ್ ಎಲ್ ರೈ ಅವರ ಅತ್ರಂಗಿ ರೇ ಸಿನಿಮಾಗೆ ಡಬಲ್ ಸಂಭಾವನೆ ಪಡೆಯುತ್ತಿರುವುದ ಅಚ್ಚರಿ ಮೂಡಿಸಿದೆ.

ಸ್ಟಾರ್ ನಟ ಬೇಕು ಎನ್ನುವುದು ನಿರ್ದೇಶಕರ ಬಯಕೆ

ಸ್ಟಾರ್ ನಟ ಬೇಕು ಎನ್ನುವುದು ನಿರ್ದೇಶಕರ ಬಯಕೆ

ಅತ್ರಂಗಿ ರೇ ಸಿನಿಮಾದ ಗೆಸ್ಟ್ ಪಾತ್ರಕ್ಕೆ ಒಬ್ಬ ಪ್ರಮುಖ ಸ್ಟಾರ್ ನಟನ ಅಗತ್ಯವಿದೆಯಂತೆ. ಚಿತ್ರದ ನಿರೂಪಣೆ ಅತ್ಯಂತ ಪರಿಣಾಮಕಾರಿ ಮತ್ತು ಪ್ರಮುಖವಾಗಿದೆಯಂತೆ. ಹಾಗಾಗಿ ಒಬ್ಬರ ಪ್ರಭಾವಿ ನಾಯಕ ಬೇಕು ಎನ್ನುವುದು ನಿರ್ದೇಶಕರ ಬಯಕೆ. ಹಾಗಾಗಿ ಈ ಗೆಸ್ಟ್ ಪಾತ್ರವನ್ನು ಅಕ್ಷಯ್ ಕುಮಾರ್ ಬಳಿ ಮಾಡಿಸುತ್ತಿದ್ದಾರೆ ನಿರ್ದೇಶಕ ಆನಂದ್ ಎಲ್ ರೈ.

ಹೃತಿಕ್ ರೋಷನ್ ತಿರಸ್ಕರಿಸಿದ ಪಾತ್ರ

ಹೃತಿಕ್ ರೋಷನ್ ತಿರಸ್ಕರಿಸಿದ ಪಾತ್ರ

ಸಿನಿಮಾತಂಡ ಮೊದಲು ಈ ಪಾತ್ರಕ್ಕೆ ಹೃತಿಕ್ ರೋಷನ್ ಅವರನ್ನು ಕೇಳಿಕೊಂಡಿದ್ದಾರೆ. ಆದರೆ ಹೃತಿಕ್ ಈ ಪಾತ್ರ ಮಾಡಲು ನಿರಾಕರಿಸಿದ್ದಾರೆ. ನಂತರ ಸಿನಿಮಾತಂಡ ಅಕ್ಷಯ್ ಕುಮಾರ್ ಬಳಿ ಹೋಗಿದೆ. ಅಕ್ಷಯ್ ಕುಮಾರ್ ನಿರ್ದೇಶಕರ ಮೇಲಿನ ಗೌರವದಿಂದ ಈ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿ

ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿ

ಅಕ್ಷಯ್ ಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಕ್ಷ್ಮಿ ಬಾಂಬ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ಪೃಥ್ವಿರಾಜ್, ಸೂರ್ಯವಂಶಿ, ಬೆಲ್ ಬಾಟಂ ಸಿನಿಮಾಗಳ ಚಿತ್ರೀಕರಣ ಭಾಕಿ ಇದೆ. ಮುಂದಿನ ತಿಂಗಳು ಬೆಲ್ ಬಾಟಂ ಸಿನಿಮಾ ಚಿತ್ರೀಕರಣಕ್ಕಾಗಿ ಲಂಡನ್ ಗೆ ಹೋಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಲಂಡನಿಂದ ವಾಪಸ್ ಆದ ಬಳಿಕ ಆನಂದ್ ಎಲ್ ರೈ ನಿರ್ದೇಶನದ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

More from Filmibeat

English summary
Bollywood Actor Akshay Kumar a whopping 27 crore for 14 days shooting in Anand L Rai next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X