Don't Miss!
- News
ಕನ್ನಯ್ಯ ಲಾಲ್ ಕೊಲೆ: ದೇಶದಲ್ಲಿ ಮದರಾಸಗಳನ್ನು ಬ್ಯಾನ್ ಮಾಡಬೇಕೆಂದ ಈಶ್ವರಪ್ಪ
- Sports
Aus vs SL 1st Test: ಮೊದಲ ದಿನವೇ 13 ವಿಕೆಟ್ ಪತನ, ಶ್ರೀಲಂಕಾ 214ರನ್ಗೆ ಆಲೌಟ್
- Finance
ಜೂ.29ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಿಳಿ ನಾಲಿಗೆ ನೀಡುತ್ತದೆ ಅರೋಗ್ಯದ ಬಗ್ಗೆ ಆಪಾಯದ ಮುನ್ಸೂಚನೆ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಕೊನೆಗೂ 'ದಿ ಕಾಶ್ಮೀರ್ ಫೈಲ್ಸ್' ಬೆಂಬಲಕ್ಕೆ ಬಂದ ಬಾಲಿವುಡ್ ಸ್ಟಾರ್ಗಳು
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜೋರು ಚರ್ಚೆಗಳು ನಡೆಯುತ್ತಿವೆ. ಸಿನಿಮಾದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಸ್ವತಃ ಮೋದಿಯವರೇ ಇಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಬಿಡುಗಡೆ ಸಮಯದಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಾಲಿವುಡ್ ಮೇಲೆ ಕೆಂಡ ಕಾರಿದ್ದರು. 'ಯಾವ ಬಾಲಿವುಡ್ ಸ್ಟಾರ್ ನಟ-ನಟಿಯರು ನಮ್ಮ ಸಿನಿಮಾಕ್ಕೆ ಬೆಂಬಲ ಸೂಚಿಸಿಲ್ಲ' ಎಂದಿದ್ದರು. 'ಸಿನಿಮಾದ ಪ್ರಚಾರಕ್ಕೂ ಯಾವ ಟಿವಿ ಶೋಗಳು ಒಪ್ಪಲಿಲ್ಲ' ಎಂದು ಹೇಳಿದ್ದರು.
'ದಿ
ಕಾಶ್ಮೀರ್
ಫೈಲ್ಸ್'
ನೈಜ
ಇತಿಹಾಸವೆ?
ಇತಿಹಾಸದ
ಒಂದು
ಮುಖವೆ?
ಆದರೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಸಾಮಾಜಿಕ ಜಾಲತಾಣದ ಪ್ರಚಾರದಿಂದಲೇ ಸಿನಿಮಾ ದಿನೇ-ದಿನೇ ಶೋಗಳನ್ನು ಹೆಚ್ಚಿಸಿಕೊಂಡು ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಸಿನಿಮಾ ದೊಡ್ಡ ಮಟ್ಟದ ಯಶಸ್ಸಿನೆಡೆಗೆ ಸಾಗುತ್ತಿದ್ದಂತೆ ಕೆಲವು ಬಾಲಿವುಡ್ ಸ್ಟಾರ್ ನಟರು ಸಿನಿಮಾದ ಬೆಂಬಲಕ್ಕೆ ಧಾವಿಸಿದ್ದಾರೆ.
'ಬಿಜೆಪಿಯವರ ಮೆಚ್ಚಿನ ನಟ' ಎನಿಸಿಕೊಂಡಿರುವ ನಟ ಅಕ್ಷಯ್ ಕುಮಾರ್ ಮೊದಲಿಗೆ ಸಿನಿಮಾದ ಬೆಂಬಲಕ್ಕೆ ಬಂದರು. ಸಿನಿಮಾ ಬಿಡುಗಡೆ ಆಗಿ ಎರಡು ದಿನಗಳ ಬಳಿಕ ಸಿನಿಮಾಕ್ಕೆ ಶುಭ ಹಾರೈಸಿ ನಟ ಅನುಪಮ್ ಖೇರ್ರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅಕ್ಷಯ್ ಕುಮಾರ್, ''ಸಿನಿಮಾದಲ್ಲಿ ನಿಮ್ಮ ಅದ್ಭುತ ನಟನೆ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಪಟ್ಟೆ. ಜನ ಮತ್ತೆ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವುದು ನೋಡಿ ಖುಷಿಯಾಗುತ್ತಿದೆ. ಸಿನಿಮಾ ನೋಡಲು ಕಾತರನಾಗಿದ್ದೇನೆ. ಜೈ ಅಂಬೆ'' ಎಂದಿದ್ದಾರೆ ಅಕ್ಷಯ್ ಕುಮಾರ್.
'ದಿ
ಕಾಶ್ಮೀರಿ
ಫೈಲ್ಸ್'
ನೋಡಿ
ಎಲ್
ಕೆ
ಅಡ್ವಾಣಿ
ಕಣ್ಣೀರು
ಹಾಕಿದ್ರಾ?
ಇಲ್ಲಿದೆ
ಅಸಲಿಯತ್ತು!
ನಟ ಅಮೀರ್ ಖಾನ್ ಸಹ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಬೆಂಬಲ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅಮೀರ್ ಖಾನ್, ''ಆ ಸಿನಿಮಾ ಚೆನ್ನಾಗಿದೆ ಎಂದು ಕೇಳಿದ್ದೇನೆ. ನಾನು ಸಿನಿಮಾವನ್ನು ನೋಡಿಲ್ಲ. ಸಿನಿಮಾ ತಂಡಕ್ಕೆ ಅಭಿನಂದನೆಗಳು'' ಎಂದಿದ್ದಾರೆ.
ನಟಿ ಯಾಮಿ ಗೌತಮ್ ಸಹ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಬೆಂಬಲ ನೀಡಿದ್ದು, ''ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಿದ ಬಳಿಕ ಚಿತ್ರಮಂದಿರದಲ್ಲಿ ಕಣ್ಣೀರು ಹಾಕುತ್ತಿರುವ ಹಲವು ಕಾಶ್ಮೀರಿ ಪಂಡಿತರ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ನಮ್ಮ ನೋವು ನಿಜವಾದುದು. ನಾವು ಎಷ್ಟು ಕಾಲದಿಂದ ನಮ್ಮ ದುಃಖವನ್ನು, ನೋವನ್ನು ಅದುಮಿಟ್ಟುಕೊಂಡಿದ್ದೇವೆ ಎಂಬುದನ್ನು ತೋರಿಸುತ್ತದೆ. ಅತ್ತು ಹಗುರಾಗಲು ನಮಗೆ ಯಾವ ಭುಜವೂ ಇರಲಿಲ್ಲ, ನಮ್ಮ ಕಷ್ಟಗಳನ್ನು ಕೇಳಿಸಿಕೊಳ್ಳಲು ಯಾವ ಕಿವಿಯೂ ಇರಲಿಲ್ಲ'' ಎಂದು ಯಾಮಿ ಗೌತಮ್ರ ಪತಿ ಟ್ವೀಟ್ ಮಾಡಿದ್ದಾರೆ.
Narendra
Modi:
'ದಿ
ಕಾಶ್ಮೀರ್
ಫೈಲ್ಸ್'
ಸಿನಿಮಾದ
ವಿರುದ್ಧ
ಷಡ್ಯಂತ್ರ:
ಮೋದಿ
ತಮ್ಮ ಪತಿ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಯಾಮಿ, ''ಕಾಶ್ಮೀರಿ ಪಂಡಿತ್ ಅನ್ನು ವಿವಾಹವಾಗಿರುವ ನನಗೆ ಜಮ್ಮು ಕಾಶ್ಮೀರದಲ್ಲಿ ಈ ಶಾಂತಿಪ್ರಿಯ ಸಮುದಾಯದ ಮೇಲೆ ನಡೆದ ದೌರ್ಜನ್ಯದ ಮಾಹಿತಿ ಇದೆ. ಆದರೆ ದೇಶದ ಬಹುತೇಕರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. 32 ವರ್ಷಗಳ ನಂತರ ಈ ಸಿನಿಮಾ ಬಂದು ಜನರಿಗೆ ಈಗ ಸತ್ಯದ ಅರಿವಾಗುತ್ತಿದೆ'' ಎಂದಿದ್ದಾರೆ ನಟಿ.
ಇನ್ನು ನಟಿ ಕಂಗನಾ ರನೌತ್ ಸಹ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಬೆಂಬಲ ನೀಡಿದ್ದು, ಈ ಸಿನಿಮಾಕ್ಕೆ ಬೆಂಬಲ ನೀಡದ ಬಾಲಿವುಡ್ ನಟ-ನಟಿಯರ ವಿರುದ್ಧ ಅವರು ಹರಿಹಾಯ್ದಿದ್ದಾರೆ ಹಾಗೂ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯ ಧೈರ್ಯವನ್ನು ಬಹುವಾಗಿ ಕೊಂಡಾಡಿದ್ದಾರೆ.