»   » ಲೈಂಗಿಕ ಕಿರುಕುಳಕ್ಕೆ ನಾನು ಒಳಗಾಗಿದ್ದೆ: ಅಕ್ಷಯ್ ಕುಮಾರ್

ಲೈಂಗಿಕ ಕಿರುಕುಳಕ್ಕೆ ನಾನು ಒಳಗಾಗಿದ್ದೆ: ಅಕ್ಷಯ್ ಕುಮಾರ್

Posted By:
Subscribe to Filmibeat Kannada

ಭಾರತೀಯ ಸಿನಿರಂಗದ ತಾರೆಯರು ಇತ್ತೀಚೆಗೆ ಒಬ್ಬೊಬ್ಬರಾಗಿ ತಮ್ಮ ಮೇಲಿನ ಲೈಂಗಿಕ ಕಿರುಕುಳದಂತಹ ದುರ್ಘಟನೆಗಳನ್ನು ಹೊರಹಾಕುತ್ತಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಕೊಡಲು ಕೇವಲ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಸೆಕ್ಸ್ ಬೇಡಿಕೆ ಸಂಸ್ಕೃತಿ ಬಿಟೌನ್‌ನಲ್ಲಿದೆ ಎಂಬುದನ್ನು ಇತ್ತೀಚೆಗೆ ನಟ ಆಶೀಶ್ ಬಿಶ್ತ್‌ ಬಯಲು ಮಾಡಿದ್ದರು.

ಬಿಟೌನ್‌ನಲ್ಲಿನ ಸೆಕ್ಸ್ ಬೇಡಿಕೆ ನಟನಿಂದಲೂ ರಿವೀಲ್ ಆಯ್ತು..

ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ತಮ್ಮ ಜೀವನದಲ್ಲಿ ಎದುರಾದ ಕ್ಯಾಸ್ಟಿಂಗ್ ಕೌಚ್ (ಲೈಂಗಿಕ ಶೋಷಣೆಗೆ ಒಳಗಾಗುವುದು) ಮತ್ತು ಲೈಂಗಿಕ ಕಿರುಕುಳದಂತಹ ಘಟನೆಗಳನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈಗ ಆ ಸಾಲಿಗೆ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸೇರಿದ್ದು, ಅವರು ಬಾಲ್ಯದಲ್ಲಿ ಅನುಭವಿಸಿದ ಅನುಚಿತ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

Akshay Kumar accepted he was abused as a child

ಹೌದು, ಅಕ್ಷಯ್ ಕುಮಾರ್ ರವರು ಬಾಲ್ಯದಲ್ಲಿದ್ದಾಗ ಲಿಫ್ಟ್‌ಮ್ಯಾನ್ ವೊಬ್ಬರು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಂತೆ. ಈ ಬಗ್ಗೆ ಅವರು ತಮ್ಮ ಫೋಷಕರಿಗೂ ಹೇಳಿದ್ದರಂತೆ. 'ಅಂದಿನಿಂದ ಪೋಷಕರೊಂದಿಗೆ ಉತ್ತಮ ಸಂವಹನದಲ್ಲಿದ್ದೇನೆ. ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಆತ ಕೆಲವು ದಿನಗಳ ನಂತರ ಅಂತಹದೇ ಕೇಸ್ ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದನು' ಎಂದು ಅಕ್ಷಯ್ ಕುಮಾರ್ 'ಮಾನವ ಕಳ್ಳಸಾಗಣೆ ಮತ್ತು ಮಹಿಳಾ ಸುರಕ್ಷತೆ' ಕುರಿತಾದ ಅಂತರಾಷ್ಟ್ರೀಯ ವಿಚಾರ ಸಂಕಿರಣ ಸಮ್ಮೇಳನದಲ್ಲಿ ತಮ್ಮ ಜೀವನದ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಯಾರೇ ಆಗಲಿ ಇಂತಹ ಘಟನೆಗಳು ಎದುರಾದಾಗ ಕಮ್ಯೂನಿಕೇಷನ್ ಅತಿ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

Akshay Kumar Has Spoken About His Won Experience With Sexual Abuse | Filmibeat Kannada

ಅಂದಹಾಗೆ ಅಕ್ಷಯ್ ಕುಮಾರ್ ಸದ್ಯದಲ್ಲಿ ತಮ್ಮ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಪ್ರಮೋಷನ್ ಕಾರ್ಯಗಳಲ್ಲು ಬ್ಯುಸಿ ಆಗಿದ್ದಾರೆ. ಈ ಚಿತ್ರ ಆಗಸ್ಟ್ 11 ರಂದು ಬಿಡುಗಡೆ ಆಗಲಿದೆ.

English summary
Akshay Kumar opens up about childhood abuse of being "touched inappropriately".
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada